ಭೀಕರ ಅಪಘಾತ; ಎರಡುವರೆ ಕಿಲೋಮೀಟರ್ ಬೈಕ್ ಸವಾರನನ್ನ ಎಳೆದೊಯ್ದ ಇನ್ನೋವಾ ಕಾರ್ ಚಾಲಕ; ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಿನ್ನೆ(ಗುರುವಾರ) ವಿಜಯಪುರದಲ್ಲಿ ಸ್ಕೂಟರ್ಗೆ ಇನ್ನೋವಾ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ್ದ. ಈ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ಬಳಿಕ ಬರೋಬ್ಬರಿ ಎರಡುವರೆ ಕಿಲೋಮೀಟರ್ ಬೈಕ್ ಸವಾರನನ್ನು ಇನ್ನೋವಾ ಕಾರ್ ಚಾಲಕ ಎಳೆದೊಯ್ದಿದ್ದ. ಈ ಅಪಘಾತದ ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಜಯಪುರ, ಆ.09: ವಿಜಯಪುರದ ಬಸವನ ನಗರದ ಬಳಿ ನಿನ್ನೆ(ಗುರುವಾರ) ಆ್ಯಕ್ಟಿವಾಕ್ಕೆ(ಸ್ಕೂಟರ್) ಇನ್ನೋವಾ ವಾಹನ ಡಿಕ್ಕಿಯಾಗಿ ಇನ್ನೋವಾದ ಅಡಿಯಲ್ಲೇ ಸಿಲುಕಿ ಬೈಕ್ ಸವಾರ ಸಾವನ್ನಪ್ಪಿದ್ದ. ಈ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ಬಳಿಕ ಬರೋಬ್ಬರಿ ಎರಡುವರೆ ಕಿಲೋಮೀಟರ್, ಬಸವ ನಗರದಿಂದ ಜಿಲ್ಲಾಪಂಚಾಯತಿ ಪ್ರವೇಶ ದ್ವಾರದವರೆಗೂ ಬೈಕ್ ಸವಾರನನ್ನು ಇನ್ನೋವಾ ಕಾರ್ ಚಾಲಕ ಎಳೆದೊಯ್ದಿದ್ದ. ಈ ಹಿನ್ನಲೆ ರವಿ ಮೇಲಿನಮನಿ (37) ಕೊನೆಯುಸಿರೆಳೆದಿದ್ದ. ಇದೀಗ ಅಪಘಾತದ ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಈ ಮೃತ ವ್ಯಕ್ತಿ, ಭೀಮಾತೀರದ ಹಂತಕರ ಕುಖ್ಯಾತಿಯ ಬಾಗಪ್ಪ ಹರಿಜನ ಸಂಬಂಧಿಕನಾಗಿದ್ದು, ನ್ಯಾಯವಾದಿಯಾಗಿ ಕಳೆದ ಎರಡು ವರ್ಷದಿಂದ ಕೆಲಸ ಮಾಡುತ್ತಿದ್ದ. ಸಧ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಅಪಘಾತದ ಕುರಿತು ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

