ಕಲಬುರಗಿಯಲ್ಲಿ ತಲೆ ಕೆಳಗೆ ಮಾಡಿ ಮಂಗನ ಅಚ್ಚರಿ ಓಡಾಟ; ವಿಡಿಯೋ ವೈರಲ್
ಕೆಲವೊಮ್ಮೆ ಎಂತಹ ಅಚ್ಚರಿ ಘಟನೆಗಳು ನಡೆಯುತ್ತವೆ ಅಂದರೆ ಊಹೆ ಮಾಡಲು ಕೂಡ ಸಾಧ್ಯವಿರುವುದಿಲ್ಲ. 90 ವರ್ಷದ ಅಜ್ಜಿ, 18ರ ಹುಡುಗಿಯಂತೆ ವರ್ತಿಸುತ್ತಾಳೆ. ಆಕಳೊಂದು ಎರಡು ತಲೆಯ ಕರುವಿಗೆ ಜನ್ಮ ಕೊಟ್ಟಿತು. ಹೀಗೆ ಹಲವಾರು ವಿಸ್ಮಯ ಘಟನೆಗಳ ಕುರಿತು ಕೇಳಿದ್ದೇವೆ. ಇದೀಗ ಕಲಬುರಗಿಯಲ್ಲಿ ಮಂಗವೊಂದು ತಲೆ ಕೆಳಗೆ ಮಾಡಿ ಓಡಾಟ ನಡೆಸಿರುವ ಅಚ್ಚರಿ ವಿಡಿಯೋ ವೈರಲ್ ಆಗಿದೆ.
ಕಲಬುರಗಿ, ಆ.08: ಕೆಲವೊಮ್ಮೆ ಎಂತಹ ಅಚ್ಚರಿ ಘಟನೆಗಳು ನಡೆಯುತ್ತವೆ ಅಂದರೆ ಊಹೆ ಮಾಡಲು ಕೂಡ ಸಾಧ್ಯವಿರುವುದಿಲ್ಲ. ಆಕಳೊಂದು ಎರಡು ತಲೆಯ ಕರುವಿಗೆ ಜನ್ಮ ಕೊಟ್ಟಿತು. 90 ವರ್ಷದ ಅಜ್ಜಿ, 18ರ ಹುಡುಗಿಯಂತೆ ವರ್ತಿಸುತ್ತಾಳೆ. ಹೀಗೆ ಹತ್ತು ಹಲವು ವಿಸ್ಮಯ ಘಟನೆಗಳನ್ನು ನಾವು ಕೇಳಿರುತ್ತೇವೆ ಅಥವಾ ನೋಡಿರುತ್ತೇವೆ. ಅದರಂತೆ ಅಚ್ಚರಿ ಎಂಬಂತಹ ಘಟನೆಯೊಂದು ಕಲಬುರಗಿ(Kalaburagi) ಜಿಲ್ಲೆಯ ಚಿಂಚೊಳ್ಳಿ ತಾಲೂಕಿನ ಯಲಕಪಳ್ಳಿ ಗ್ರಾಮದಲ್ಲಿ ನಡೆದಿದೆ. ಹೌದು, ತಲೆ ಕೆಳಗೆ ಮಾಡಿ ಮಂಗ(Monkey)ವೊಂದು ಅಚ್ಚರಿ ಓಡಾಟ ನಡೆಸಿದೆ. ತಲೆ ಕೆಳಗೆ ಮಾಡಿ ಓಡಾಡ್ತಿರುವ ಮಂಗನ ವಿಡಿಯೋ ಸಖತ್ ವೈರಲ್ ಆಗಿದೆ. ಯಲಕಪಳ್ಳಿ ಗ್ರಾಮದ ಖತಲಪ್ಪ ಎಂಬ ರೈತನಿಗೆ ಸೇರಿದ ಜಮೀನಿನಲ್ಲಿ ಮಂಗನ ಕಾಲುಗಳನ್ನು ಮೇಲೆ ಎತ್ತಿ ಸರ್ಕಸ್ ಮಾಡಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos