JDS ಕಾರ್ಯಕರ್ತರು, ಪ್ರೀತಂ ಗೌಡ ಬೆಂಬಲಿಗರ ನಡುವಿನ ಸಂಘರ್ಷ; ಅಸಲಿ ಕಾರಣ ಬಿಚ್ಚಿಟ್ಟ ನಿಖಿಲ್ ಕುಮಾರಸ್ವಾಮಿ ಆಪ್ತ
JDS ಕಾರ್ಯಕರ್ತರು ಮತ್ತು ಪ್ರೀತಂ ಗೌಡ ಬೆಂಬಲಿಗರ ನಡುವಿನ ಸಂಘರ್ಷಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ನಿಖಿಲ್ ಕುಮಾರಸ್ವಾಮಿ ಆಪ್ತ ಅವಿನಾಶ್, ‘ರಾಜಕೀಯದಲ್ಲಿ ಒಕ್ಕಲಿಗ ನಾಯಕತ್ವ ಇದ್ದರೆ ಅದು ದೇವೇಗೌಡರ ಕುಟುಂಬಕ್ಕೆ ಮಾತ್ರ, ಪ್ರೀತಂ ಗೌಡ ನಂತಹ ಎಷ್ಟೇ ಜನ ಹುಟ್ಟಿ ಬಂದರೂ ಒಕ್ಕಲಿಗ ನಾಯಕ ಆಗಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ಮಂಡ್ಯ, ಆ.08: ನಿನ್ನೆ(ಆ.07) ಮಂಡ್ಯದಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಪ್ರೀತಂ ಗೌಡ ಬೆಂಬಲಿಗರ ನಡುವಿನ ಸಂಘರ್ಷದಲ್ಲಿ ಪ್ರೀತಂ ಗೌಡ ಬೆಂಬಲಿಗರನ್ನು ರಸ್ತೆಯಲ್ಲಿ ಅಡ್ಡಗಟ್ಟಿದ್ದ ಹಾಗೂ ಫ್ಲೆಕ್ಸ್ಗೆ ಬೆಂಕಿಯಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಜೆಡಿಎಸ್ ಕಾರ್ಯಕರ್ತ ಮತ್ತು ನಿಖಿಲ್ ಕುಮಾರಸ್ವಾಮಿ ಆಪ್ತ ಅವಿನಾಶ್, ‘ ಪ್ರೀತಂ ಗೌಡ ಬೆಂಬಲಿಗರು ಘೋಷಣೆ ಕೂಗುತ್ತಿದ್ದ ಬಗ್ಗೆ ಮೊದಲೇ ನಾವು ವಿಜಯೇಂದ್ರ ಗಮನಕ್ಕೆ ತಂದಿದ್ದೆವು. ಪ್ರೀತಂ ಗೌಡ ಮಂಡ್ಯಕ್ಕೆ ಯಾವ ಗೌಡನೂ ಅಲ್ಲ. ಆತನನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಬೇಕು. ಒಬ್ಬ ಮಾಜಿ ಶಾಸಕನಿಂದ ಇಷ್ಟೆಲ್ಲಾ ಕಲಹ ಆಗುತ್ತಿದೆ. ಅವನದ್ದು ಏನಿದ್ದರೂ ಹಾಸನದಲ್ಲಿ ಇಟ್ಟುಕೊಳ್ಳಬೇಕು. ಅವನ ದುರಂಹಕಾರಕ್ಕೆ ಹಾಸನದ ಜನರೇ ಬುದ್ದಿ ಕಲಿಸಿದ್ದಾರೆ. ಅವನು ಇನ್ನೂ ದುರಂಹಕಾರ ಬಿಟ್ಟಿಲ್ಲ.
ರಾಜಕೀಯದಲ್ಲಿ ಒಕ್ಕಲಿಗ ನಾಯಕತ್ವ ಇದ್ದರೆ ಅದು ದೇವೇಗೌಡರ ಕುಟುಂಬಕ್ಕೆ ಮಾತ್ರ, ಪ್ರೀತಂ ಗೌಡ ನಂತಹ ಎಷ್ಟೇ ಜನ ಹುಟ್ಟಿ ಬಂದರೂ ಒಕ್ಕಲಿಗ ನಾಯಕ ಆಗಲು ಸಾಧ್ಯವಿಲ್ಲ. ಜೆಡಿಎಸ್ ಬೆಂಬಲದಿಂದಲೇ ಬಿಜೆಪಿ 5 ಸಂಸದ ಸ್ಥಾನ ಹೆಚ್ಚು ಗೆದ್ದಿದೆ. ದೇವೇಗೌಡರ ಕುಟುಂಬ ಎದುರು ಹಾಕಿಕೊಂಡು ಗೆದ್ದವರು ತುಂಬಾ ಕಡಿಮೆ. ಇಂದಿನ ಬೆಳವಣಿಗೆಗಳು ಪ್ರೀತಂ ಗೌಡಗೆ ಒಳ್ಳೆಯದಲ್ಲ. ಸಿಡಿಗಳಿಗೆ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದರೆ, ಸಿಡಿ ಮತ್ತು ಪೆನ್ ಡ್ರೈವ್ ಗಳಿಗೆ ಪ್ರೀತಂ ಗೌಡ ಉಪಾಧ್ಯಕ್ಷ ಎಂದು ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ