
Padayatra
ಪಾದಯಾತ್ರೆ ಒಂದು ಹೊರಾಂಗಣ ಚಟುವಟಿಕೆ. ನಾನಾ ಕಾರಣಗಳಿಗೆ ಪಾದಯಾತ್ರೆ ಮಾಡಲಾಗುತ್ತೆ. ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಲು ಪಾದಯಾತ್ರೆ, ಕೆಲ ಘಟನೆಗಳನ್ನು ವಿರೋಧಿಸಿ ನ್ಯಾಯಕ್ಕಾಗಿ ಮಾಡುವುದು. ವಿವಿಧ ಬೇಡಿಕೆಗೆ ಪಾದಯಾತ್ರೆ ಮಾಡುವುದು. ಹೀಗೆ ವಿವಿಧ ರೀತಿಯಲ್ಲಿ ಪಾದಯಾತ್ರೆಗಳು ನಡೆಯುತ್ತವೆ. ಅದರಲ್ಲೂ ರಾಜಕೀಯದಲ್ಲಿ ಕ್ಷೇತ್ರದಲ್ಲಿ ನಡೆಯುವ ಪಾದಯಾತ್ರೆಯೇ ಬೇರೆ. ನಾನಾ ಕಾರಣಗಳಿಗೆ ರಾಜಕೀಯ ಪಕ್ಷಗಳು ತಮ್ಮ ವಿರೋಧಿ ಪಕ್ಷಗಳ ವಿರುದ್ಧ ಪಾದಯಾತ್ರೆ ಕೈಗೊಳ್ಳುವುದು ಉಂಟು. ಅದರಂತೆ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಪಾದಯಾತ್ರೆಗಳು ನಡೆದಿವೆ. ಅದರಲ್ಲಿ ಪ್ರಮುಖವಾಗಿ ಹೇಳಬೇಕೆಂದರೆ ಈ ಹಿಂದೆ ರೆಡ್ಡಿ ಬ್ರದರ್ಸ್ ವಿರುದ್ಧ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿರುವುದು ಹೆಸರಾಗಿದೆ. ಮೇಕೆದಾಟು ಯೋಜನೆಗಾಗಿ ರಾಮನಗರದಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿದ್ದಾರೆ. ಇದೀಗ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕೇಳಿಬಂದ ವಾಲ್ಮೀಕಿ ಮತ್ತು ಮುಡಾ ಹಗರಣಗಳ ವಿರುದ್ಧ ಬಿಜೆಪಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡುತ್ತಿದೆ.
ಮೈಸೂರು ಚಲೋಗೆ ಬಿಜೆಪಿ ರೆಬೆಲ್ ನಾಯಕರ ಸೆಡ್ಡು. ಬಳ್ಳಾರಿ ಪಾದಯಾತ್ರೆಗೆ ಮುಹೂರ್ತ ಫಿಕ್ಸ್?
ಜೆಡಿಎಸ್ ಬಿಜೆಪಿ ಪಾದಯಾತ್ರೆ ಆರಂಭಕ್ಕೂ ಮುನ್ನವೇ ಕೇಸರಿ ಪಾಳಯದಲ್ಲಿ ಭಿನ್ನಮತ ಸ್ಫೋಟವಾಗಿತ್ತು. ಅಲ್ಲದೇ ವಿಜಯೇಂದ್ರ ನಾಯತ್ವದ ವಿರುದ್ಧ ಸಮರ ಸಾರಿದ್ದು, ಪಾದಯಾತ್ರೆಗೂ ಮುನ್ನವೇ ಎಚ್ಚರಿಕೆ ಕೊಟ್ಟಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರ ನಾಯಕತ್ವವನ್ನ ಒಪ್ಪೋದಿಲ್ಲ, ನಾವೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇವೆ ಎಂದು ಶಾಸಕ ಯತ್ನಾಳ್, ರಮೇಶ್ ಜಾರಕಿಹೊಳಿ ಪ್ರತ್ಯೇಕ ಸಮರ ಸಾರುವ ಸುಳಿವು ಕೊಟ್ಟಿದ್ದರು. ಕೂಡಲ ಸಂಗಮ ಅಥವಾ ಹುಬ್ಬಳ್ಳಿಯಿಂದ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡುತ್ತೇವೆ ಎಂದು ಹೇಳಿದ್ದರು. ಇದರ ಮುಂದುವರಿದ ಭಾಗದಲ್ಲಿ .ಮಹತ್ವದ ಬೆಳವಣಿಗೆ ಆಗಿದ್ದು, ಬೆಳಗಾವಿಯ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಸಭೆಯ ಇನ್ಸೈಡ್ ಮಾಹಿತಿ ಟಿವಿ9ಗೆ ಲಭ್ಯವಾಗಿದೆ.
- Sahadev Mane
- Updated on: Aug 11, 2024
- 4:41 pm
ಬಿಜೆಪಿ, ಜೆಡಿಎಸ್ ದೋಸ್ತಿ ಭರ್ಜರಿ ಶಕ್ತಿ ಪ್ರದರ್ಶನ: 8 ದಿನ, ಒಟ್ಟು 135 ಕಿಮೀ ಪಾದಯಾತ್ರೆ ಅಂತ್ಯ
ಬಿಜೆಪಿ-ಜೆಡಿಎಸ್ ಪಾದಯಾತ್ರೆ ಇಂದು ಅಂತ್ಯವಾಗಿದೆ. ಮೈಸೂರಿನ ಮಹಾರಾಜ ಮೈದಾನದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ದೋಸ್ತಿ ನಾಯಕರು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಎಂಟು ದಿನಗಳ ಕಾಲ ಒಟ್ಟು 135 ಕಿ.ಮೀ. ನಾಯಕರು ಪಾದಯಾತ್ರೆ ಮಾಡಿದ್ದಾರೆ. ಸಾಕಷ್ಟು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು.
- Gangadhar Saboji
- Updated on: Aug 10, 2024
- 8:48 pm
ಯಡಿಯೂರಪ್ಪ, ನನ್ನ ನಡುವೆ ಬಿರುಕು ಉಂಟು ಮಾಡಲು ಯತ್ನ; ಹೆಚ್ಡಿ ಕುಮಾರಸ್ವಾಮಿ
ಮುಡಾ ಹಗರಣ ಖಂಡಿಸಿ ಬಿಜೆಪಿ-ಜೆಡಿಎಸ್ ಮೈಸೂರು ಪಾದಯಾತ್ರೆ ಹಮ್ಮಿಕೊಂಡಿದ್ದು, ಇಂದು ತೆರೆ ಬಿಳಲಿದೆ. ಈ ಹಿನ್ನಲೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಯುತ್ತಿದ್ದು, ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ‘ಖಾಕಿ ಚಡ್ಡಿ ಹಾಕಿದ್ದಾರೆಂದು ನನ್ನ ಬಗ್ಗೆ ಹೇಳಿದ್ದಾರೆ. ಆದ್ರೆ, ಸಿದ್ದರಾಮಯ್ಯ ಚಡ್ಡಿಯೆಲ್ಲ ಕಪ್ಪು ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
- Ram
- Updated on: Aug 10, 2024
- 3:50 pm
ಕಾಂಗ್ರೆಸ್ ಪಕ್ಷ ನಡೆಸಿದ್ದು ಜನಾಂದೋಲನ ಅಲ್ಲ ಧನಾಂದೋಲನ: ಪ್ರಲ್ಹಾದ್ ಜೋಶಿ ವಾಗ್ದಾಳಿ
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕಾಂಗ್ರೆಸ್ ಪಕ್ಷ ನಡೆಸಿದ್ದು ಜನಾಂದೋಲನ ಅಲ್ಲ ಧನಾಂದೋಲನ. ಕಾಂಗ್ರೆಸ್ ಹೈಕಮಾಂಡ್ಗೆ ಹಣ ಕೊಡಲು ಮಾಡಿದ ಧನಾಂದೋಲನ ಎಂದು ವಾಗ್ದಾಳಿ ಮಾಡಿದ್ದಾರೆ.
- Ram
- Updated on: Aug 10, 2024
- 3:17 pm
ಸಿಎಂ ಸಿದ್ದರಾಮಯ್ಯಗೆ ಬಂಡೆಯೇ ಸಮಸ್ಯೆ: ಡಿಕೆ ಶಿವಕುಮಾರ್ಗೆ ನಿಖಿಲ್ ಟಾಂಗ್
ಬಿಜೆಪಿ ಜೆಡಿಎಸ್ ಪಾದಯಾತ್ರೆ ಅಂತಿಮ ಹಂತ ತಲುಪಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮೈತ್ರಿ ಪಕ್ಷಗಳ ಬೃಹತ್ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇದಕ್ಕೂ ಮುನ್ನ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
- Sunil MH
- Updated on: Aug 10, 2024
- 1:16 pm
ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆಗೆ ಇಂದು ತೆರೆ, ಲೈವ್ ಇಲ್ಲಿದೆ
MUDA Scam, Bangalore Mysore Padayatra Live: ಮುಡಾ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಿನಾಮೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ನಾಯಕರು ಮೈಸೂರು ಚಲೋ ಪಾದಯಾತ್ರೆ ನಡೆಸಿದರು. ಬಿಜೆಪಿ-ಜೆಡಿಎಸ್ ನಾಯಕರ ಪಾದಯಾತ್ರೆಗೆ ತೆರೆ ಬೀಳಲಿದೆ. ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಬಹೃತ್ ಸಮಾವೇಶ ಮೂಲಕ ಮೈತ್ರಿ ನಾಯಕರು ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಲಿದ್ದಾರೆ.
- Vivek Biradar
- Updated on: Aug 10, 2024
- 12:28 pm
ಸಿದ್ರಾಮಯ್ಯ ಮನೆಗೆ ಹೋಗೋ ಕಾಲ ಹತ್ತಿರವಾಗಿದೆ -ಬಿಎಸ್ ಯಡಿಯೂರಪ್ಪ ಹೀಗೆ ಹೇಳಿದ್ದೇಕೆ?
ಮುಡಾ ಹಗರಣದ ವಿರುದ್ಧ ಮತ್ತು ಸಿಎಂ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ, ಜೆಡಿಎಸ್‌ನ ಮೈಸೂರು ಚಲೋ ಪಾದಯಾತ್ರೆ 7ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಬಿಎಸ್ ಯಡಿಯೂರಪ್ಪನವರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದು ಮೈಸೂರಿಗೆ ಆಗಮಿಸಿದ್ದಾರೆ. ಈ ವೇಳೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
- Dileep CP
- Updated on: Aug 9, 2024
- 11:17 am
ಮುಡಾ ಹಗರಣ: ತನಿಖೆ ಮುಗಿದು ವರದಿ ಬರುವ ವರೆಗೆ ಆ ನಿವೇಶನಗಳು ನಮ್ಮದಲ್ಲವೆಂದ ಯತೀಂದ್ರ
ಮುಡಾ ಹಗರಣ ಪ್ರತಿಭಟಿಸಿ ಪ್ರತಿಪಕ್ಷಗಳ ಪ್ರತಿಭಟನೆಯ ಕಾವು ಜೋರಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಮುಡಾ ನಿವೇಶನ ಸಂಬಂಧ ಮಹತ್ವದ ಹೇಳಿಕೆ ನೀಡಿದ್ದಾರೆ. ತನಿಖೆಯಾಗಿ ವರದಿ ಬರುವವರೆಗೆ ಆ ನಿವೇಶನ ನಮ್ಮದಲ್ಲ ಎಂದು ಅವರು ಹೇಳಿದ್ದಾರೆ. ಅವರು ಹಾಗೆನ್ನಲು ಕಾರಣವೇನು? ಮುಂದಿನ ಕ್ರಮದ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ.
- Dileep CP
- Updated on: Aug 9, 2024
- 9:53 am
ಕಾಂಗ್ರೆಸ್ ಜನಾಂದೋಲನ, ಬಿಜೆಪಿ-ಜೆಡಿಎಸ್ ಸಮಾವೇಶ: ಅಪರೂಪದ ರಾಜಕೀಯ ವಿದ್ಯಮಾನಕ್ಕೆ ಸಾಕ್ಷಿಯಾದ ಮೈಸೂರು
ರಾಜ್ಯ ರಾಜಕಾರಣದಲ್ಲಿ ಮೈಸೂರು ಚಲೋ Vs ಜನಾಂದೋಲ ಸಮರ ಜೋರಾಗಿದೆ. ಮುಡಾ ಕೇಸ್ನಲ್ಲಿ ಸಿಎಂ ವಿರುದ್ಧ ಸಮರ ಸಾರಿರುವ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಆ. 10ರಂದು ಸಮಾರೋಪ ಮಾಡಲು ನಿರ್ಧರಿಸಿದರೆ, ನಾಳೆ ಕಾಂಗ್ರೆಸ್ ಜನಾಂದೋಲ ಸಮಾರೋಪ ನಡೆಯಲಿದೆ. ಇಂತಹ ರಾಜಕೀಯ ವಿದ್ಯಮಾನಕ್ಕೆ ಮೈಸೂರು ಸಾಕ್ಷಿಯಾಗುತ್ತಿದೆ.
- Dileep CP
- Updated on: Aug 8, 2024
- 8:23 pm
JDS ಕಾರ್ಯಕರ್ತರು, ಪ್ರೀತಂ ಗೌಡ ಬೆಂಬಲಿಗರ ನಡುವಿನ ಸಂಘರ್ಷ; ಅಸಲಿ ಕಾರಣ ಬಿಚ್ಚಿಟ್ಟ ನಿಖಿಲ್ ಕುಮಾರಸ್ವಾಮಿ ಆಪ್ತ
JDS ಕಾರ್ಯಕರ್ತರು ಮತ್ತು ಪ್ರೀತಂ ಗೌಡ ಬೆಂಬಲಿಗರ ನಡುವಿನ ಸಂಘರ್ಷಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ನಿಖಿಲ್ ಕುಮಾರಸ್ವಾಮಿ ಆಪ್ತ ಅವಿನಾಶ್, ‘ರಾಜಕೀಯದಲ್ಲಿ ಒಕ್ಕಲಿಗ ನಾಯಕತ್ವ ಇದ್ದರೆ ಅದು ದೇವೇಗೌಡರ ಕುಟುಂಬಕ್ಕೆ ಮಾತ್ರ, ಪ್ರೀತಂ ಗೌಡ ನಂತಹ ಎಷ್ಟೇ ಜನ ಹುಟ್ಟಿ ಬಂದರೂ ಒಕ್ಕಲಿಗ ನಾಯಕ ಆಗಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
- Kiran Hanumant Madar
- Updated on: Aug 8, 2024
- 7:40 pm