100 ಕಿಲೋ ಮೀಟರ್ ತಲುಪಿದ ಪಾದಯಾತ್ರೆ; ಕೇಕ್ ಕಟ್ ಮಾಡಿದ ನಿಖಿಲ್
ಮುಡಾ ಹಗರಣ ಖಂಡಿಸಿ ಬಿಜೆಪಿ-ಜೆಡಿಎಸ್ ಬೆಂಗಳೂರಿನಿಂದ ಮೈಸೂರು ಪಾದಯಾತ್ರೆ ಹಮ್ಮಿಕೊಂಡಿದೆ. ಆರನೇ ದಿನವಾದ ಇಂದಿಗೆ 100 ಕಿಲೋಮೀಟರ್ ತಲುಪಿ ಪಾದಯಾತ್ರೆ ಮುನ್ನುಗ್ಗುತ್ತಿದೆ. ಈ ಹಿನ್ನಲೆ ನಿಖಿಲ್ ಕುಮಾರಸ್ವಾಮಿ ಅವರು ಕೇಕ್ ಕಟ್ ಮಾಡಿ ಸಂಭ್ರಮಿಸಿ, ಸಂತಸ ಹಂಚಿಕೊಂಡರು.
ಮಂಡ್ಯ, ಆ.08: ಮುಡಾ ಹಗರಣ ಖಂಡಿಸಿ ಬಿಜೆಪಿ-ಜೆಡಿಎಸ್ ಬೆಂಗಳೂರಿನಿಂದ ಮೈಸೂರು ಪಾದಯಾತ್ರೆ ಹಮ್ಮಿಕೊಂಡಿದೆ. ಇಂದಿಗೆ 100 ಕಿಲೋಮೀಟರ್ ತಲುಪಿ ಪಾದಯಾತ್ರೆ ಮುನ್ನುಗ್ಗುತ್ತಿದೆ. ಅದರಂತೆ ಇಂದು(ಗುರುವಾರ) 100 ಕಿಲೋಮೀಟರ್ ಪಾದಯಾತ್ರೆ ಕಂಪ್ಲಿಟ್ ಆದ ಹಿನ್ನೆಲೆ ನಿಖಿಲ್ ಕುಮಾರಸ್ವಾಮಿ ಅವರು ಕೇಕ್ ಕಟ್ ಮಾಡಿ ಸಂಭ್ರಮಿಸಿದರು. ಹೌದು, ಜೆಡಿಎಸ್ ಕಾರ್ಯಕರ್ತರು ಕೇಕ್ ಮೇಲೆ ನೂರು ಕಿಲೋಮೀಟರ್ ಎಂದು ಬರೆಸಿಕೊಂಡು ತಂದಿದ್ದು, ನಿಖಿಲ್ ಸಂಭ್ರಮದಿಂದ ಕೇಕ್ ಕಟ್ ಮಾಡಿದರು. ಇದೇ ವೇಳೆ ‘ಇಂದು ನೂರು ಕಿಮಿ ಪಾದಯಾತ್ರೆ ಪೂರೈಸಿದೆ. ಮಂಡ್ಯದಲ್ಲಿ ಒಟ್ಲು ಹಾಕುವ ಸಮಯ ಇದ್ದರೂ ರೈತರು ನಮ್ಮ ಹೆಜ್ಜೆ ಹಾಕ್ತಿದ್ದಾರೆ ಎಂದು ಸಂತಸ ಹಂಚಿಕೊಂಡರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

