AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ರಾಮಯ್ಯ ಮನೆಗೆ ಹೋಗೋ ಕಾಲ ಹತ್ತಿರವಾಗಿದೆ -ಬಿಎಸ್​ ಯಡಿಯೂರಪ್ಪ ಹೀಗೆ ಹೇಳಿದ್ದೇಕೆ?

ಸಿದ್ರಾಮಯ್ಯ ಮನೆಗೆ ಹೋಗೋ ಕಾಲ ಹತ್ತಿರವಾಗಿದೆ -ಬಿಎಸ್​ ಯಡಿಯೂರಪ್ಪ ಹೀಗೆ ಹೇಳಿದ್ದೇಕೆ?

ದಿಲೀಪ್​, ಚೌಡಹಳ್ಳಿ
| Updated By: ಆಯೇಷಾ ಬಾನು

Updated on: Aug 09, 2024 | 11:17 AM

ಮುಡಾ ಹಗರಣದ ವಿರುದ್ಧ ಮತ್ತು ಸಿಎಂ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ, ಜೆಡಿಎಸ್‌ನ ಮೈಸೂರು ಚಲೋ ಪಾದಯಾತ್ರೆ 7ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಬಿಎಸ್​ ಯಡಿಯೂರಪ್ಪನವರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದು ಮೈಸೂರಿಗೆ ಆಗಮಿಸಿದ್ದಾರೆ. ಈ ವೇಳೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೈಸೂರು, ಆಗಸ್ಟ್​.09: ಮುಡಾದಲ್ಲಿ (MUDA) ಅಕ್ರಮ ಖಂಡಿಸಿ ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ಭಾಗಿಯಾಗಲು ಮೈಸೂರಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ (BS Yediyurappa) ಆಗಮಿಸಿದ್ದು ಚಾಮುಂಡೇಶ್ವರಿ ದರ್ಶನ ಪಡೆದು ನಂತರ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಫೇವರೆಟ್ ಮೈಲಾರಿ ಹೋಟೆಲ್​ನಲ್ಲಿ ದೋಸೆ ಸೇವಿದ್ರು. ಈ ವೇಳೆ ಬಿಎಸ್​ ಯಡಿಯೂರಪ್ಪನವರು ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಯಾರು ನಿವೃತ್ತಿಯಾಗ್ತಾರೆ, ಏನಾಗ್ತಾರೆ ಅಂತಾ ಮುಂದೆ ಗೊತ್ತಾಗುತ್ತದೆ. ಅವರು ನಿವೃತ್ತಿ ಪಡೆಯುವಾಗ ಇನ್ನೊಬ್ಬರ ಬಗ್ಗೆ ಹೇಳೋದು ಸ್ವಾಭಾವಿಕ. ಸಿದ್ದರಾಮಯ್ಯ ಈಗ ಮನಬಂದಂತೆ ಮಾತಾಡುತ್ತಿದ್ದಾರೆ, ಮಾತಾಡಲಿ ಎಂದು ಗುಡುಗಿದರು.

ನಾಳೆ ಮೂರು ಲಕ್ಷಕ್ಕೂ ಅಧಿಕ ಜನ ನಮ್ಮ ಬೃಹತ್ ಸಮಾವೇಶದಲ್ಲಿ ಭಾಗವಹಿಸುತ್ತಾರೆ. ಪಾದಯಾತ್ರೆಗೆ ಜನರಿಂದ‌ ಉತ್ತಮ ಪ್ರತಿಕ್ರಿಯೆ ಸಿಕ್ತಾ ಇದೆ. ಭ್ರಷ್ಟ ಸರ್ಕಾರ‌ ಕಿತ್ತೋಗೆಯಲು ಪಾದಯಾತ್ರೆ ಮಾಡ್ತಾ ಇದ್ದೀವಿ. ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದರು. ಇದೇ ವೇಳೆ ಯಡಿಯೂರಪ್ಪ ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿಎಸ್​ವೈ, ಸಿದ್ದರಾಮಯ್ಯ ಅವರು ಹೇಳಬೇಕು ಪಾಪ. ಅವರು ನಿವೃತ್ತಿ ತಗೊಂಡು ಮನೆಗೆ ಹೋಗುವಾಗ ಇನ್ನೊಬ್ಬರ ಬಗ್ಗೆ ಹೇಳೋದು ಸ್ವಾಭಾವಿಕ. ಯಾರು ನಿವೃತ್ತಿಯಾಗ್ತಾರೆ, ಏನ್ ಆಗ್ತಾರೆ ಅನ್ನೊದು ಮುಂದೆ ಗೊತ್ತಾಗುತ್ತದೆ. ಪೊಕ್ಸೋ ಕೇಸ್‌ನಲ್ಲಿ ನಾಳೆ ಕೋರ್ಟ್‌ನಲ್ಲಿ ತೀರ್ಮಾನ ಆದಾಗ ಎಲ್ಲಾ ಬಹಿರಂಗವಾಗುತ್ತೆ. ಅಲ್ಲಿಯವರೆಗೆ ನಾನು ಏನು ಮಾತಾಡಲ್ಲ. ಅದಾದ ಬಳಿಕ ಸಿದ್ದರಾಮಯ್ಯಗೆ ಉತ್ತರ ಸಿಗುತ್ತೆ. ಅವರು ಈಗ ಮನಬಂದಂತೆ ಮಾತಾಡುತ್ತಿದ್ದಾರೆ ಮಾತಾಡಲಿ. ಹತಾಶೆಯ ಮನೋಭಾವದಲ್ಲಿ ಇರೋದನ್ನು ಜನರೇ ತೀರ್ಮಾನ ಮಾಡ್ತಾರೆ ಎಂದರು.

ನಾನು ತಪ್ಪು ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರ ಸಂಬಂಧ ಮಾತನಾಡಿದ ಬಿಎಸ್​ವೈ, ಸಿಎಂ ತಮ್ಮ ಪತ್ನಿಗೆ ಬೆಲೆ ಬಾಳುವ ಸೈಟ್​ಗಳನ್ನು ಕೊಟ್ಟಿದ್ದಾರೆ. ಮನೆಯವರಿಗೆ ಬೆಲೆ ಬಾಳುವ ಸೈಟ್ ಕೊಟ್ಟ ಉದಾಹರಣೆ ಇದ್ಯಾ? ಇದು ಅಕ್ಷಮ್ಯ ಅಪರಾಧ, ಅದಕ್ಕಾಗಿ ಹೋರಾಟ ಮಾಡ್ತಿದ್ದೇವೆ ಎಂದರು.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ