ಕಾಂಗ್ರೆಸ್ ಪಕ್ಷ ನಡೆಸಿದ್ದು ಜನಾಂದೋಲನ ಅಲ್ಲ ಧನಾಂದೋಲನ: ಪ್ರಲ್ಹಾದ್ ಜೋಶಿ ವಾಗ್ದಾಳಿ
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕಾಂಗ್ರೆಸ್ ಪಕ್ಷ ನಡೆಸಿದ್ದು ಜನಾಂದೋಲನ ಅಲ್ಲ ಧನಾಂದೋಲನ. ಕಾಂಗ್ರೆಸ್ ಹೈಕಮಾಂಡ್‌ಗೆ ಹಣ ಕೊಡಲು ಮಾಡಿದ ಧನಾಂದೋಲನ ಎಂದು ವಾಗ್ದಾಳಿ ಮಾಡಿದ್ದಾರೆ.
ಮೈಸೂರು, ಆಗಸ್ಟ್ 10: ಕಾಂಗ್ರೆಸ್ (Congress) ನಡೆಸಿದ್ದು ಜನಾಂದೋಲ ಅಲ್ಲ ಧನಾಂದೋನ. ಕಾಂಗ್ರೆಸ್ ಹೈಕಮಾಂಡ್‌ಗೆ ಹಣ ಕೊಡಲು ಮಾಡಿದ ಧನಾಂದೋಲನ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ವಾಗ್ದಾಳಿ ಮಾಡಿದ್ದಾರೆ, ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ಒಂದು ಕಪ್ಪು ಚುಕ್ಕೆ ಅಲ್ಲ. ನಿಮ್ಮ ಮೈ ತುಂಬಾ ಬರೀ ಕಪ್ಪು ಚುಕ್ಕೆ ಇವೆ ನೋಡಿಕೊಳ್ಳಿ ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಒಳಗಡೆ ಹೊಡೆದಾಡುತ್ತಾರೆ, ಆದರೆ ಹೊರಗಡೆ ನಾವು ಬಂಡೆ ಎನ್ನುತ್ತಾರೆ. 14 ಸೈಟ್ ವಾಪಾಸ್ ಕೊಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಕಳ್ಳ ಮಾಲು ವಾಪಸ್ಸು ಕೊಟ್ಟ ತಕ್ಷಣ ಎಲ್ಲಾ ಮುಗಿಯಲ್ಲ. ಕಳ್ಳತನಕ್ಕೂ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆಗೆ ಇಂದು ತೆರೆ, ಲೈವ್ ಇಲ್ಲಿದೆ
ಕಾಂಗ್ರೆಸ್ ಡಿಎನ್ಎನಲ್ಲಿ ಭ್ರಷ್ಟಾಚಾರವಿದೆ ಅಂತಾ ಹೇಳಿದ್ದೆ. ದಲಿತರು, ಹಿಂದುಳಿದವರಿಗೆ ಅನ್ಯಾಯ ಅಪಮಾನ ಮಾಡುವ ಅಂಶ ಸಹಾ ಕಾಂಗ್ರೆಸ್ ಡಿಎನ್ಎ ನಲ್ಲಿದೆ ಎಂದರು. ಕಾನೂನಿನ ಪ್ರಕಾರವೂ ಸಿದ್ದರಾಮಯ್ಯ ವಿರುದ್ದ ಹೋರಾಟ ಮಾಡಲಾಗುವುದು ಅವರನ್ನು ಮನೆಗೆ ಕಳುಹಿಸುವವರೆಗೂ ನಾವು ವಿರಮಿಸಲ್ಲ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ರಾಜೀನಾಮೆ ಕೊಡುವವರೆಗೂ ಹೋರಾಟ ನಿಲ್ಲಲ್ಲ: ಶ್ರೀರಾಮುಲು
ಮಾಜಿ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯ ರಾಜೀನಾಮೆ ಕೊಡುವವರೆಗೂ ಹೋರಾಟ ನಿಲ್ಲಲ್ಲ. ಸಿದ್ದರಾಮಯ್ಯ ನೈತಿಕಹೊಣೆ ಹೊತ್ತು ರಾಜೀನಾಮೆ ನೀಡಬೇಕು. ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣದಲ್ಲಿ ಧ್ವನಿ ಕುಗ್ಗುತ್ತಿತ್ತು. ನಿಮ್ಮನ್ನು ಅಧಿಕಾರದಿಂದ ಇಳಿಸುವುದಕ್ಕೆ ಯತ್ನಿಸುತ್ತಿರುವುದು ಡಿಕೆ ಶಿವಕುಮಾರ್ ಎಂದಿದ್ದಾರೆ.
ಇದನ್ನೂ ಓದಿ: ಸಿಎಂ ವಿರುದ್ಧದ ಮುಡಾ ಪ್ರಕರಣದ ಆದೇಶ ಕಾಯ್ದಿರಿಸಿದ ಕೋರ್ಟ್: ವಾದ-ಪ್ರತಿವಾದ ಹೇಗಿತ್ತು? ಇಲ್ಲಿದೆ ನೋಡಿ
ವಾಲ್ಮೀಕಿ ನಿಗಮದ ಒಂದೊಂದು ಪೈಸೆಯೂ ವಾಪಸ್ ಬರಬೇಕು. ಎಸ್ಸಿಎಸ್ಪಿ-ಟಿಎಸ್ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿದ್ದಾರೆ. 14 ವರ್ಷದ ಹಿಂದೆ ನಮ್ಮ ವಿರುದ್ಧ ಬಳ್ಳಾರಿ ಪಾದಯಾತ್ರೆ ಮಾಡಿದ್ರಿ. ಈಗ ನಿಮ್ಮ ಹಗರಣದ ವಿರುದ್ಧ ನಾವು ಪಾದಯಾತ್ರೆ ಮಾಡುತ್ತಿದ್ದೇವೆ. ಸಿದ್ದರಾಮಯ್ಯನವರೇ ಚಾಮುಂಡಿ ತಾಯಿ ನಿಮ್ಮನ್ನು ಬಿಡುವುದಿಲ್ಲ. ಕೆಲವರು ಬಂಡೆ ಎಂದು ಹೇಳಿಕೊಳ್ಳುತ್ತಾರೆ. ನಮ್ಮ ಕಾರ್ಯಕರ್ತರ ಶಕ್ತಿ ಮುಂದೆ ಬಂಡೆಗಳು ಪುಡಿ ಆಗಲೇಬೇಕು ಎಂದು ವಾಗ್ದಾಳಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.