ನಾವು ಗಂಡಸರಲ್ಲ, ಅವರೊಬ್ಬರೇ ಗಂಡಸರು: ಕುಮಾರಸ್ವಾಮಿಗೆ ಡಿಕೆ ಶಿವಕುಮಾರ್ ತಿರುಗೇಟು
ರಾಜಕೀಯ ಮಾಡಿದರೆ ಗಂಡಸ್ತನದ ರಾಜಕೀಯ ಮಾಡಬೇಕು ಎಂದು ನಿನ್ನೆ ಹೆಚ್ ಕುಮಾರಸ್ವಾಮಿ ಡಿಕೆ ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದರು. ಇದೀಗ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ನಾವು ಗಂಡಸರಲ್ಲ, ಅವರೊಬ್ಬರೇ ಗಂಡಸರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಮಾರಸ್ವಾಮಿ ನಮ್ಮ ಮೇಲೆ ಸುಳ್ಳು ಕೇಸ್ ಹಾಕಿಸಿದ್ದರು ಎಂದು ಹೇಳಿದ್ದಾರೆ.
ಬೆಂಗಳೂರು, ಆಗಸ್ಟ್ 10: ನಾವು ಗಂಡಸರಲ್ಲ, ಅವರೊಬ್ಬರೇ ಗಂಡಸರು ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಹೇಳಿಕೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಂಡಸ್ತನದ ಎಲ್ಲಾ ಶಕ್ತಿ ಅವರಲ್ಲಿ ಇದೆ. ಕುಮಾರಸ್ವಾಮಿ ಈ ಹಿಂದೆ ಏನು ಮಾತನಾಡಿದ್ದಾರೆ ನೆನಪಿಟ್ಟುಕೊಳ್ಳಬೇಕು. ಮಿಲಿಟರಿಯವರು ಜೈಲಿಗೆ ಕರ್ಕೊಂಡು ಹೋಗ್ತಾರೆಂದು ಹೇಳಿದ್ದರು. ನಮ್ಮ ಮೇಲೆ ಸುಳ್ಳು ಕೇಸ್ ಹಾಕಿಸಿದ್ದರು. ಎಲ್ಲವನ್ನೂ ಮರೆತು ಹೆಚ್.ಡಿ.ಕುಮಾರಸ್ವಾಮಿರನ್ನು ಸಿಎಂ ಮಾಡಿದ್ದೆವು. ಮಗ ಸೋತಾ ಎಂದು ಗದಾಪ್ರಹಾರ, ಯಾರು ಸಹಿಸಿಕೊಳ್ಳುತ್ತಾರೆ? ನಾನು ಯೂಟರ್ನ್ ಮಾಡಿದವನಲ್ಲ, ಸ್ಟ್ರೈಟ್ ಯುದ್ಧ ಮಾಡಿದವನು. ಅವನ ಅಣ್ಣನ ಮಗನ ಪೆನ್ಡ್ರೈವ್ ಹಂಚಿದ್ದು ನಾನು ಎಂದಿದ್ದರು. ಈ ಹಿಂದೆ ಅವರು ಮೋದಿ, ಅಮಿತ್ ಶಾ ಬಗ್ಗೆ ಏನು ಮಾತಾಡಿದ್ರು? ನಾನು ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿ ಮಗ ಅಲ್ಲ. ದೆಹಲಿಯಲ್ಲಿ ಯಾರಿಗೆ ಪತ್ರ ಕೊಟ್ಟ, ನಿಮ್ಮ ತಂದೆ ಏನು ಮಾಡಿದ್ರು. ವಿಚಾರಗಳು ಇದೆ ಎಂದು ಹೇಳಿದೆ, ದಾಖಲೆ ಇದೆ ಎಂದು ಹೇಳಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.