ಉತ್ತರ ಪ್ರದೇಶ: ತಾಯಿ, ಮಗಳು ಶವವಾಗಿ ಪತ್ತೆ, ದರೋಡೆ ಶಂಕೆ

|

Updated on: Sep 29, 2024 | 8:33 AM

ಮನೆಯಲ್ಲಿ ತಾಯಿ,ಮಗಳು ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ನಡೆದಿದೆ. ಮನೆಯಲ್ಲಿ ದರೋಡೆ ಯತ್ನದ ಸಂದರ್ಭದಲ್ಲಿ ಅವರನ್ನು ಹತ್ಯೆಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಉತ್ತರ ಪ್ರದೇಶ: ತಾಯಿ, ಮಗಳು ಶವವಾಗಿ ಪತ್ತೆ, ದರೋಡೆ ಶಂಕೆ
ಪೊಲೀಸ್​
Follow us on

ಮನೆಯಲ್ಲಿ ತಾಯಿ,ಮಗಳು ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ನಡೆದಿದೆ. ಮನೆಯಲ್ಲಿ ದರೋಡೆ ಯತ್ನದ ಸಂದರ್ಭದಲ್ಲಿ ಅವರನ್ನು ಹತ್ಯೆಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಹತ್ಯೆಗೀಡಾದವರನ್ನು ಹಾಪುರದ ಖಿಚಾರ ಗ್ರಾಮದ ಕೌಸರ್ ಜಹಾನ್ (60) ಮತ್ತು ಖುಷ್ಬೂ (25) ಎಂದು ಗುರುತಿಸಲಾಗಿದೆ.
ಘಟನೆಯ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯ ಬಾಗಿಲು ಒಡೆದು ನೋಡಿದಾಗ ಒಳಗಿದ್ದ ಶವಗಳು ಪತ್ತೆಯಾಗಿವೆ.

ಹಾಪುರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿನೀತ್ ಭಟ್ನಾಗರ್ ಅವರು ನಾಲ್ಕೈದು ದಿನಗಳ ಹಿಂದೆ ಕತ್ತು ಹಿಸುಕಿ ಇಬ್ಬರನ್ನೂ ಕೊಂದಿರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: ಕಂಠಪೂರ್ತಿ ಕುಡಿದು ಅಪ್ಪನ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಂದ ಮಗ

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಕೌಸರ್ ಅವರ ಪತಿ ತೀರಿಕೊಂಡಿದ್ದು, ಕೌಸರ್ ಮತ್ತು ಖುಷ್ಬೂ ಮಾತ್ರ ಮನೆಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

500 ರೂ. ಕದ್ದನೆಂಬ ಅನುಮಾನದಿಂದ 10 ವರ್ಷದ ಮಗನಿಗೆ ಹೊಡೆದು ಕೊಂದ ತಂದೆ
ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಭೋಜ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ತಂದೆಯೊಬ್ಬ ತನ್ನ 10 ವರ್ಷದ ಮಗನನ್ನು ಹೊಡೆದು ಕೊಂದಿದ್ದಾನೆ. ತಂದೆಯೇ ಮಗನನ್ನು ಕೊಲೆ ಮಾಡಿದ್ದಾನೆ. ಈ ಕೊಲೆಗೆ ಅನುಮಾನವೇ ಕಾರಣ. ತನ್ನ ಬಳಿಯಿದ್ದ 500 ರೂ.ಗಳನ್ನು ಮಗ ಕದ್ದಿದ್ದಾನೆ ಎಂದು ತಂದೆ ಶಂಕಿಸಿದ್ದಾರೆ. ಈ ಅನುಮಾನದ ಆಧಾರದ ಮೇಲೆ ತಂದೆ ಮಗನಿಗೆ ಬೆಲ್ಟ್ ಮತ್ತು ಕಿಚನ್ ರೋಲಿಂಗ್ ಪಿನ್ ನಿಂದ ಹೊಡೆದು ಕೊಂದಿದ್ದಾನೆ.

ಈ ಹತ್ಯೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಅಪರಾಧಕ್ಕೆ ಬಳಸಿದ ರೋಲಿಂಗ್ ಪಿನ್ ಅನ್ನು ವಶಪಡಿಸಿಕೊಂಡರು. ಮಗುವಿನ ದೇಹವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮಗುವಿನ ಸಾವಿನಿಂದ ಇಡೀ ಕುಟುಂಬವು ದುಃಖಿತವಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ