ಬಾಗಿಲು ತೆರೆದ ಬದರಿನಾಥ ದೇಗುಲ: ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಮೊದಲ ಪೂಜೆ

|

Updated on: May 18, 2021 | 3:46 PM

Badrinath shrine: ರಾವಲ್ ಎಂದು ಕರೆಯಲ್ಪಡುವ ಅರ್ಚಕರ ನೇತೃತ್ವದಲ್ಲಿ ಬದರಿನಾಥ ದೇವಾಲಯದ ಬಾಗಿಲನ್ನು ಮುಂಜಾನೆ 4.15 ಕ್ಕೆ ತೆರೆಯಲಾಯಿತು. ಈ ದೇವಾಲಯವನ್ನು 20 ಕ್ವಿಂಟಾಲ್ ಹೂವುಗಳಿಂದ ಅಲಂಕರಿಸಲಾಗಿದೆ. ಚಾರ್ ಧಾಮ್ ಯಾತ್ರೆ ಮುಂದೂಡಲ್ಪಟ್ಟಿದ್ದರಿಂದ, ಸಮಾರಂಭದಲ್ಲಿ ಅರ್ಚಕರು ಮತ್ತು ಕೆಲವು ಅಧಿಕಾರಿಗಳು ಮಾತ್ರ ಹಾಜರಿದ್ದರು.

ಬಾಗಿಲು ತೆರೆದ ಬದರಿನಾಥ ದೇಗುಲ: ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಮೊದಲ ಪೂಜೆ
ಬದರಿನಾಥ ದೇಗುಲ
Follow us on

ಚಮೋಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯ ಬದರೀನಾಥ ದೇವಾಲಯದ ಬಾಗಿಲುಗಳನ್ನು ಮಂಗಳವಾರ ತೆರೆಯಲಾಗಿದ್ದು, ಎಲ್ಲರ ಕಲ್ಯಾಣ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಮೊದಲ ಪ್ರಾರ್ಥನೆ ನಡೆದಿದೆ. ಎಲ್ಲಾ ಚಾರ್ ಧಾಮಗಳು, ಬದರೀನಾಥ, ಕೇದಾರನಾಥ, ಯಮುನೋತ್ರಿ ಮತ್ತು ಗಂಗೋತ್ರಿಗಳ ಬಾಗಿಲು ಕೂಡಾ ತೆರೆದಿದೆ.

ರಾವಲ್ ಎಂದು ಕರೆಯಲ್ಪಡುವ ಅರ್ಚಕರ ನೇತೃತ್ವದಲ್ಲಿ ಬದರಿನಾಥ ದೇವಾಲಯದ ಬಾಗಿಲನ್ನು ಮುಂಜಾನೆ 4.15 ಕ್ಕೆ ತೆರೆಯಲಾಯಿತು. ಈ ದೇವಾಲಯವನ್ನು 20 ಕ್ವಿಂಟಾಲ್ ಹೂವುಗಳಿಂದ ಅಲಂಕರಿಸಲಾಗಿದೆ. ಚಾರ್ ಧಾಮ್ ಯಾತ್ರೆ ಮುಂದೂಡಲ್ಪಟ್ಟಿದ್ದರಿಂದ, ಸಮಾರಂಭದಲ್ಲಿ ಅರ್ಚಕರು ಮತ್ತು ಕೆಲವು ಅಧಿಕಾರಿಗಳು ಮಾತ್ರ ಹಾಜರಿದ್ದರು.

ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಅವರು ದೇಗುಲದ ಬಾಗಿಲು ತೆರೆದುದಕ್ಕೆ ಎಲ್ಲ ಭಕ್ತರನ್ನು ಅಭಿನಂದಿಸಿದ್ದು ಅವರ ಮನೆಗಳಿಂದ ಪ್ರಾರ್ಥನೆ ಸಲ್ಲಿಸುವಂತೆ ಮನವಿ ಮಾಡಿದರು.


ಕೊವಿಡ್ -19 ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಸಾಂಪ್ರದಾಯಿಕ ಆಚರಣೆಗಳು ಮತ್ತು ಸುರಕ್ಷತಾ ಪ್ರೋಟೋಕಾಲ್‌ಗಳ ನಂತರ ಕಳೆದ ವರ್ಷ ನವೆಂಬರ್‌ನಲ್ಲಿ ಬದರಿನಾಥ ದೇವಾಲಯದ ಬಾಗಿಲು ಮುಚ್ಚಲಾಗಿತ್ತು.
ಚಾರ್ ಧಾಮ್ ದೇವಸ್ಥಾನಂ ಮ್ಯಾನೇಜ್ಮೆಂಟ್ ಬೋರ್ಡ್ ಅಧಿಕಾರಿಗಳ ಪ್ರಕಾರ, ಕಳೆದ ವರ್ಷ 145,000 ಕ್ಕೂ ಹೆಚ್ಚು ಯಾತ್ರಿಕರು ಬದರಿನಾಥ ದೇಗುಲಕ್ಕೆ ಭೇಟಿ ನೀಡಿದ್ದರು. ಚಾರ್ ಧಾಮ್ ಯಾತ್ರೆಗೆ ತೆರಳಿದ 310,000 ಯಾತ್ರಾರ್ಥಿಗಳಲ್ಲಿ 134,000 ಮಂದಿ ಕೇದಾರನಾಥಕ್ಕೆ, 23,837 ಮಂದಿ ಗಂಗೋತ್ರಿಗೆ ಮತ್ತು 7,731 ಮಂದಿ ಯಮುನೋತ್ರಿಗಳಿಗೆ ಭೇಟಿ ನೀಡಿದರು.


ಮೇ 14 ರಂದು ಪ್ರಾರಂಭವಾಗಬೇಕಿದ್ದ ರಾಜ್ಯದಲ್ಲಿರುವ ನಾಲ್ಕು ಪವಿತ್ರ ಹಿಂದೂ ದೇಗುಲಗಳಲ್ಲೊಂದಾದ ಚಾರ್ ಧಾಮ್ ತೀರ್ಥಯಾತ್ರೆಯನ್ನು ಏಪ್ರಿಲ್ 29 ರಂದು ರಾಜ್ಯ ಸರ್ಕಾರ ಮುಂದೂಡಿದೆ. ಆದರೆ ತೀರ್ಥಯಾತ್ರೆಯ ಸಮಯದಲ್ಲಿ ದೇವಾಲಯಗಳ ಬಾಗಿಲು ತೆರೆದಿರುತ್ತದೆ. ಯಮುನೋತ್ರಿ ದೇವಾಲಯದ ಬಾಗಿಲನ್ನು ಮೇ 14 ರಂದು ಮತ್ತು ಗಂಗೋತ್ರಿ ಅವರ ಮೇ 15 ರಂದು ತೆರೆಯಲಾಯಿತು. ಕೇದಾರನಾಥ ದೇವಾಲಯದ ಬಾಗಿಲು ಈ ಮೇ 17 ರ ಸೋಮವಾರ ತೆರೆಯಲಾಗಿತ್ತು.

ಕಳೆದ ವರ್ಷವೂ ಕೊವಿಡ್ -19 ರ ಹರಡುವಿಕೆಯನ್ನು ನಿಯಂತ್ರಿಸಲು ಲಾಕ್‌ಡೌನ್ ವಿಧಿಸಿದ್ದರಿಂದ ಚಾರ್ ಧಾಮ್ ಯಾತ್ರೆಯನ್ನು ನಿಗದಿತ ಸಮಯದಲ್ಲಿ ಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಕಳೆದ ವರ್ಷ ಜುಲೈ 1 ರಂದು ಸ್ಥಳೀಯ ಯಾತ್ರಾರ್ಥಿಗಳಿಗೆ ಮತ್ತು ಆ ತಿಂಗಳ ಕೊನೆಯ ವಾರದಲ್ಲಿ ಇತರ ರಾಜ್ಯಗಳಿಂದ ಬಂದವರಿಗೆ ಈ ದೇವಾಲಯಗಳನ್ನು ತೆರೆಯಲಾಯಿತು.

ಇದನ್ನೂ  ಓದಿ: ಐತಿಹಾಸಿಕ ಕೇದಾರನಾಥ ದೇವಸ್ಥಾನ ನಾಳೆ ತೆರೆಯಲಿದೆ; ಕೊವಿಡ್ ಸಂಕಷ್ಟ ಹಿನ್ನೆಲೆ ಭಕ್ತರಿಗೆ ಪ್ರವೇಶ ನಿಷೇಧ

(Uttarakhand Badrinath shrine opens first prayers being held on behalf of Prime Minister Narendra Mod)