ಡೆಹ್ರಾಡೂನ್ : ಉತ್ತರಾಖಂಡದನ ಚಮೋಲಿ ಜಿಲ್ಲೆಯಲ್ಲಿ ವ್ಯಾಪಕ ಹಿಮಕುಸಿತ (Uttarakhand Glacier Burst) ಉಂಟಾಗಿದೆ. ಇದರಿಂದ ಉಂಟಾದ ಪ್ರವಾಹದಿಂದ 150ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ. ಅನೇಕರ ಶವ ಈಗಾಗಲೇ ದೊರೆತಿದ್ದು, ಇನ್ನೂ ಅನೇಕರಿಗಾಗಿ ಹುಡುಕಾಟ ಮುಂದುವರಿದೆ. ಕೆಲ ಗ್ರಾಮಗಳಿಗೆ ನೀರು ಅಪ್ಪಳಿಸಿದೆ. ಈ ಘಟನೆಯನ್ನು ಕಣ್ಣಾರೆ ಕಂಡ ವ್ಯಕ್ತಿಯೋರ್ವ ಭಯಾನಕ ದೃಶ್ಯದ ಬಗ್ಗೆ ವಿವರಣೆ ನೀಡಿದ್ದಾರೆ.
ಉತ್ತರಾಖಂಡದಲ್ಲಿ ವಾಸಿಸುವ ಸಂಜಯ್ ಸಿಂಗ್ ರಾಣಾ ಎನ್ನುವ ವ್ಯಕ್ತಿ ಈ ಭಯಾನಕ ದೃಶ್ಯವನ್ನು ಕಣ್ಣಾರೆ ಕಂಡಿದ್ದಾರೆ. ಅವರು ಈ ಬಗ್ಗೆ ವಿವರಣೆ ನೀಡಿದ್ದಾರೆ. ನಾನು ಪ್ರವಾಹ ಉಂಟಾಗುವ ಪ್ರದೇಶಕ್ಕಿಂತ ಮೇಲಿದ್ದೆ. ನೋಡ ನೋಡುತ್ತಿದ್ದಂತೆ ಭಾರೀ ನೀರು ಬಂದಿತ್ತು. ಯಾರಿಗೂ ಅಲರ್ಟ್ ಮಾಡಲು ಸಾಧ್ಯವೇ ಆಗಲಿಲ್ಲ. ನೀರು ಬರುವ ವೇಗ ನೋಡಿದರೆ, ನಾವು ಕೊಚ್ಚಿ ಹೋಗುತ್ತೇವೆ ಎಂದು ಭಾವಿಸಿದ್ದೆ ಎಂದು ಸಂಜಯ್ ಸಿಂಗ್ ವಿವರಿಸಿದ್ದಾರೆ.
ನೀರು ಬರುವುದಕ್ಕೂ ಮೊದಲು ಇಲ್ಲಿ ಅನೇಕು ತಾವು ಸಾಕಿದ ಕುರಿ-ದನಗಳನ್ನು ಮೇಯಿಸುತ್ತಿದ್ದರು. ಇನ್ನೂ ಅನೇಕರು ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಅವರೆಲ್ಲರೂ ಕೊಚ್ಚಿ ಹೋಗಿರುವ ಭಯ ಕಾಡುತ್ತಿದೆ. ಎಷ್ಟು ಜನ ಕಾಣೆ ಆಗಿದ್ದಾರೆ ಎನ್ನುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಈ ಭಯಾನಕ ದೃಶ್ಯವನ್ನು ಶಬ್ದಗಳಲ್ಲಿ ಹೇಳುವದೇ ಕಷ್ಟ ಎಂದಿದ್ದಾರೆ ಸಂಜಯ್ ಸಿಂಗ್.
ಈಗಾಗಲೇ ಉತ್ತರಾಖಂಡದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ನೀರು ಬರುವ ವೇಗ ಎಲ್ಲರನ್ನು ಬೆಚ್ಚಿ ಬೀಳಿಸುವಂತಿದೆ.
#WATCH | Water level in Dhauliganga river rises suddenly following avalanche near a power project at Raini village in Tapovan area of Chamoli district. #Uttarakhand pic.twitter.com/syiokujhns
— ANI (@ANI) February 7, 2021
Uttarakhand Glacier Burst: ಧೌಲಿಗಂಗಾ ಪ್ರವಾಹ; 9 ಮೃತದೇಹ ಪತ್ತೆ, ಆಪತ್ತಿನಲ್ಲಿ 150ಕ್ಕೂ ಹೆಚ್ಚು ಜನ