Uttarakhand Glacier Burst: ಇಲ್ಲಿಯವರೆಗೆ 54 ಮೃತದೇಹಗಳು ಪತ್ತೆ, ಮುಂದುವರಿದ ರಕ್ಷಣಾ ಕಾರ್ಯಾಚರಣೆ

| Updated By: shruti hegde

Updated on: Feb 15, 2021 | 11:56 AM

Uttarakhand: ಚಮೋಲಿ ಜಿಲ್ಲೆಯ ಜೋಷಿಮಠದಲ್ಲಿರುವ ತಪೋವನ್ ಸುರಂಗ ಮಾರ್ಗದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎನ್​ಡಿಆರ್​ಎಫ್) ಹೇಳಿದೆ.

Uttarakhand Glacier Burst: ಇಲ್ಲಿಯವರೆಗೆ 54 ಮೃತದೇಹಗಳು ಪತ್ತೆ, ಮುಂದುವರಿದ ರಕ್ಷಣಾ ಕಾರ್ಯಾಚರಣೆ
ತಪೋವನ್ ಸುರಂಗ ಮಾರ್ಗದಲ್ಲಿ ರಕ್ಷಣಾ ಕಾರ್ಯಾಚರಣೆ
Follow us on

ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮ ಕುಸಿತ ದುರಂತದಲ್ಲಿ ಇಲ್ಲಿಯವರೆಗೆ 54 ಮೃತದೇಹಗಳನ್ನು ಹೊರತೆಗೆಯಲಾಗಿದೆ.  ಸೋಮವಾರ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, 174 ಮಂದಿ ನಾಪತ್ತೆಯಾಗಿದ್ದಾರೆ ಎಂದು ಚಮೋಲಿ ಪೊಲೀಸರು ಹೇಳಿದ್ದಾರೆ.

ಹಿಮಾಲಯದದಲ್ಲಿ ಹಿಮನದಿ ಸ್ಫೋಟಗೊಂಡ ಪರಿಣಾಮ ಹಿಮಪಾತವಾಗಿ ಧೌಲಿಗಂಗಾ, ಅಲಕಾನಂದ ನದಿಯಲ್ಲಿ ಪ್ರವಾಹವುಂಟಾಗಿತ್ತು. ಈ ಪ್ರವಾಹದಲ್ಲಿ ಜಲವಿದ್ಯುತ್ ಯೋಜನೆ ಮತ್ತು 5 ಸೇತುವೆಗಳು ಕೊಚ್ಚಿಹೋಗಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ಸೇನಾಪಡೆ, ಅರೆ ಸೇನಾಪಡೆ ಮತ್ತು ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಚಮೋಲಿ ಜಿಲ್ಲೆಯ ಜೋಷಿಮಠದಲ್ಲಿರುವ ತಪೋವನ್ ಸುರಂಗ ಮಾರ್ಗದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎನ್​ಡಿಆರ್​ಎಫ್) ಹೇಳಿರುವುದಾಗಿ ಎಎನ್​ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಸುರಂಗದಿಂದ ಮೃತದೇಹಗಳನ್ನು ಹೊರಕ್ಕೆ ತರುವುದು ಕಷ್ಟವಾಗುತ್ತಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಕಮಾಂಡೆಂಟ್ ಪಿ.ಕೆ.ತಿವಾರಿ ಹೇಳಿದ್ದಾರೆ.

ಇದನ್ನೂ ಓದಿ :  Uttarakhand Glacier Burst: ಏರಿಕೆಯಾಗುತ್ತಲೇ ಇದೆ ಹಿಮಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ; ಇಂದು 12 ಮೃತದೇಹಗಳು ಪತ್ತೆ

ಇಂಡೊ-ಟಿಬೆಟನ್ ಗಡಿ ಪೊಲೀಸರ ಪಡೆ ರೈನಿ ಎಂಬಲ್ಲಿ ಭಾನುವಾರ 6 ಮೃತದೇಹಗಳನ್ನು ಹೊರತೆಗೆದಿದೆ. ಅಲ್ಲಿರುವ ರಾಷ್ಟ್ರೀಯ ಉಷ್ಣ ವಿದ್ಯುತ್ ಸ್ಥಾವರದ ತಪೋವನ್- ವಿಷ್ಣುಗಡ್ ಹೈಡಲ್ ಯೋಜನೆಗೆ ಹೆಚ್ಚು ಹಾನಿಯಾಗಿದೆ. ಅಲ್ಲಿದ್ದ ಅಣೆಕಟ್ಟು ಸಂಪೂರ್ಣ ಕೊಚ್ಚಿಹೋಗಿದೆ.