ಉತ್ತರಾಖಂಡ: ರೈಲ್ವೆ ಹಳಿಯಲ್ಲಿ ವಿದ್ಯುತ್ ತಂತಿ ಪತ್ತೆ, ತಪ್ಪಿದ ದೊಡ್ಡ ಅನಾಹುತ

|

Updated on: Oct 15, 2024 | 1:03 PM

ರೈಲ್ವೆ ಹಳಿಯಲ್ಲಿ ವಿದ್ಯುತ್​ ತಂತಿ ಪತ್ತೆಯಾಗಿದ್ದು, ದೊಡ್ಡ ಅನಾಹುತವೊಂದು ತಪ್ಪಿದೆ. ಉತ್ತರಾಖಂಡದಲ್ಲಿ ಈ ಘಟನೆ ನಡೆದಿದೆ. ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯಲ್ಲಿ ರೈಲಿನ ಲೊಕೊ ಪೈಲಟ್‌ಗಳು ರೈಲು ಹಳಿಯಲ್ಲಿ ವಿದ್ಯುತ್ ತಂತಿ ಬಿದ್ದಿದ್ದನ್ನು ಕಂಡ ತಕ್ಷಣವೇ ಬ್ರೇಕ್​ ಹಾಕಿದ್ದಾರೆ ಹೀಗಾಗಿ ಸಂಭವಿಸಬೇಕಾದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಉತ್ತರಾಖಂಡ: ರೈಲ್ವೆ ಹಳಿಯಲ್ಲಿ ವಿದ್ಯುತ್ ತಂತಿ ಪತ್ತೆ, ತಪ್ಪಿದ ದೊಡ್ಡ ಅನಾಹುತ
ರೈಲು
Image Credit source: India Today
Follow us on

ರೈಲ್ವೆ ಹಳಿಯಲ್ಲಿ ವಿದ್ಯುತ್​ ತಂತಿ ಪತ್ತೆಯಾಗಿದ್ದು, ದೊಡ್ಡ ಅನಾಹುತವೊಂದು ತಪ್ಪಿದೆ. ಉತ್ತರಾಖಂಡದಲ್ಲಿ ಈ ಘಟನೆ ನಡೆದಿದೆ. ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯಲ್ಲಿ ರೈಲಿನ ಲೊಕೊ ಪೈಲಟ್‌ಗಳು ರೈಲು ಹಳಿಯಲ್ಲಿ ವಿದ್ಯುತ್ ತಂತಿ ಬಿದ್ದಿದ್ದನ್ನು ಕಂಡ ತಕ್ಷಣವೇ ಬ್ರೇಕ್​ ಹಾಕಿದ್ದಾರೆ ಹೀಗಾಗಿ ಸಂಭವಿಸಬೇಕಾದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಅಕ್ಟೋಬರ್ 15, ಮಂಗಳವಾರ ಮುಂಜಾನೆ ಡೆಹ್ರಾಡೂನ್-ತನಕ್‌ಪುರ್ ವೀಕ್ಲಿ ಎಕ್ಸ್‌ಪ್ರೆಸ್ ಖತಿಮಾ ರೈಲು ನಿಲ್ದಾಣವನ್ನು ದಾಟಿದಾಗ ಈ ಘಟನೆ ಸಂಭವಿಸಿದೆ.

ರೈಲ್ವೆ ಹಳಿಯಲ್ಲಿ 15 ಮೀಟರ್ ಉದ್ದದ ಹೈಟೆನ್ಷನ್ ತಂತಿ ಬಿದ್ದಿರುವುದನ್ನು ಲೋಕೋ ಪೈಲಟ್‌ಗಳು ಗುರುತಿಸಿದರು, ತಕ್ಷಣ ರೈಲು ನಿಲ್ಲಿಸಿದ್ದರು. ಘಟನೆಯ ಬಗ್ಗೆ ಎಚ್ಚರಿಕೆಯನ್ನು ಸ್ವೀಕರಿಸಿದ ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಹಳಿಯಿಂದ ತಂತಿಯನ್ನು ತೆಗೆದ ನಂತರ ರೈಲು ತನ್ನ ಪ್ರಯಾಣವನ್ನು ಮುಂದುವರೆಸಿತು.

ಈ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಮತ್ತು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಮತ್ತು ಉತ್ತರಾಖಂಡ ಪೊಲೀಸರ ಹಿರಿಯ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಮತ್ತಷ್ಟು ಓದಿ: ಕಾಳಿಂದಿ ರೈಲು ಹಳಿ ತಪ್ಪಿಸಲು ಯತ್ನ, ಹಳಿಯಲ್ಲಿ ಸಿಲಿಂಡರ್​, ಪೆಟ್ರೋಲ್​ ಬಾಟಲಿಗಳು ಪತ್ತೆ

ಘಟನೆಯ ನಂತರ ಭಾರತೀಯ ನ್ಯಾಯ್ ಸಂಹಿಯಾತ್ (BNS) ನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.

ಈ ವರ್ಷದ ಸೆಪ್ಟೆಂಬರ್‌ನಲ್ಲಿ, ಪ್ರಯಾಗರಾಜ್‌ನಿಂದ ಭಿವಾನಿಗೆ ಪ್ರಯಾಣಿಸುತ್ತಿದ್ದ ಕಾಳಿಂದಿ ಎಕ್ಸ್‌ಪ್ರೆಸ್ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಹಳಿಗಳ ಮೇಲೆ ಇರಿಸಲಾಗಿದ್ದ ಎಲ್‌ಪಿಜಿ ಸಿಲಿಂಡರ್‌ಗೆ ಡಿಕ್ಕಿ ಹೊಡೆದಿತ್ತು ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿರಲಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ