Uttarkashi: ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ಮೊದಲ ಫೋಟೊ ಬಿಡುಗಡೆ

ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸಲು ದಿನದ 24 ಗಂಟೆಯೂ ಕಾರ್ಯಾಚರಣೆ ನಡೆಯುತ್ತಿದೆ. ಅದೇ ಸಮಯದಲ್ಲಿ, ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ಮೊದಲ ಚಿತ್ರ ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿ ಎಲ್ಲ ಕಾರ್ಮಿಕರು ಸುರಕ್ಷಿತವಾಗಿದ್ದಾರೆ. ಅಮೆರಿಕದ ಆಗರ್ ಯಂತ್ರದೊಂದಿಗೆ ಸಿಲ್ಕ್ಯಾರಾ ಸುರಂಗದಿಂದ ಎಸ್ಕೇಪ್ ಟನಲ್ ಮಾಡುವ ಕೆಲಸ ಮತ್ತೆ ಆರಂಭವಾಗಲಿದೆ. ದೆಹಲಿಯ ಮೆಕ್ಯಾನಿಕಲ್ ತಂಡ ಅಮೆರಿಕದ ಆಗರ್ ಯಂತ್ರದ ಭಾಗಗಳನ್ನು ಬದಲಾಯಿಸಿದ್ದು, ಯಂತ್ರವನ್ನು ಕಾರ್ಯನಿರ್ವಹಿಸಲು ಸಿದ್ಧತೆ ನಡೆಸಲಾಗುತ್ತಿದೆ.

Uttarkashi: ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ಮೊದಲ ಫೋಟೊ ಬಿಡುಗಡೆ
ಕಾರ್ಮಿಕರುImage Credit source: Jagaran.com
Follow us
|

Updated on:Nov 21, 2023 | 1:50 PM

ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸಲು ದಿನದ 24 ಗಂಟೆಯೂ ಕಾರ್ಯಾಚರಣೆ ನಡೆಯುತ್ತಿದೆ. ಅದೇ ಸಮಯದಲ್ಲಿ, ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ಮೊದಲ ಚಿತ್ರ ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿ ಎಲ್ಲ ಕಾರ್ಮಿಕರು ಸುರಕ್ಷಿತವಾಗಿದ್ದಾರೆ. ಅಮೆರಿಕದ ಆಗರ್ ಯಂತ್ರದೊಂದಿಗೆ ಸಿಲ್ಕ್ಯಾರಾ ಸುರಂಗದಿಂದ ಎಸ್ಕೇಪ್ ಟನಲ್ ಮಾಡುವ ಕೆಲಸ ಮತ್ತೆ ಆರಂಭವಾಗಲಿದೆ. ದೆಹಲಿಯ ಮೆಕ್ಯಾನಿಕಲ್ ತಂಡ ಅಮೆರಿಕದ ಆಗರ್ ಯಂತ್ರದ ಭಾಗಗಳನ್ನು ಬದಲಾಯಿಸಿದ್ದು, ಯಂತ್ರವನ್ನು ಕಾರ್ಯನಿರ್ವಹಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಭೂಕುಸಿತದ ಅವಶೇಷಗಳಲ್ಲಿ ಆರು ಪೈಪ್‌ಗಳನ್ನು ಅಳವಡಿಸಿದ ನಂತರ ಮೊದಲ ಬಾರಿಗೆ ಕಾರ್ಮಿಕರಿಗೆ ಘನ ಆಹಾರವನ್ನು ವಿತರಿಸಲಾಯಿತು. ಇದರೊಂದಿಗೆ ಪೈಪ್ ಮೂಲಕ ಕ್ಯಾಮರಾವನ್ನೂ ಕಳುಹಿಸಲಾಗಿದೆ. ಇದರಿಂದಾಗಿ ಸುರಂಗದ ಒಳಗಿನ ಚಿತ್ರ ಬೆಳಕಿಗೆ ಬಂದಿದೆ. ಮೊದಲ ಬಾರಿಗೆ ಕಾರ್ಮಿಕರ ಚಿತ್ರ ಬೆಳಕಿಗೆ ಬಂದಿದೆ. ಒಳಗೆ ಸಿಲುಕಿರುವ ಕಾರ್ಮಿಕರು. ಅಧಿಕಾರಿಗಳೊಂದಿಗೆ ಮಾತನಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ.

ಅದೇ ಸಮಯದಲ್ಲಿ, ರಾತ್ರಿಯ ಸಮಯದಲ್ಲಿ, ವಿಪತ್ತು ನಿರ್ವಹಣಾ ಸಹಾಯ ಕೇಂದ್ರದಲ್ಲಿ ನೌಕರರು ಸಿದ್ಧರಾಗಿದ್ದಾರೆ. ಆದರೆ ಎನ್‌ಎಚ್‌ಐಡಿಸಿಎಲ್‌ನ ನಿಯಂತ್ರಣ ಕೊಠಡಿಯಲ್ಲಿ ಕೇವಲ ಒಬ್ಬ ಸೈಡ್ ಇಂಜಿನಿಯರ್ ಇರುವುದು ಕಂಡುಬಂದಿದೆ. ಕಂಟ್ರೋಲ್ ರೂಂ ಇನ್ ಚಾರ್ಜ್ ಬಿಟ್ಟರೆ ಇತರ ಜವಾಬ್ದಾರಿಯುತ ಅಧಿಕಾರಿಗಳು ಕಂಟ್ರೋಲ್ ರೂಂನಲ್ಲಿ ಕಾಣಿಸಲಿಲ್ಲ.

ಈ ಪರ್ಯಾಯ ಪೈಪ್​ಲೈನ್ ಮೂಲಕ ನಾವು ಆಹಾರ, ಮೊಬೈಲ್ ಮತ್ತು ಚಾರ್ಜರ್‌ಗಳನ್ನು ಸುರಂಗದೊಳಗೆ ಕಳುಹಿಸಬಹುದು ಎಂದು ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ಕರ್ನಲ್ ದೀಪಕ್ ಪಾಟೀಲ್ ಹೇಳಿದ್ದಾರೆ.

ಮತ್ತಷ್ಟು ಓದಿ: ಉತ್ತರಕಾಶಿ ಸುರಂಗ ಮಾರ್ಗಕ್ಕೆ ರಕ್ಷಣಾ ಸಾಧನಗಳನ್ನು ಸಾಗಿಸುತ್ತಿದ್ದ ಟ್ರಕ್ ಕಮರಿಗೆ ಬಿದ್ದು ಚಾಲಕ ಸಾವು

ಸಿಕ್ಕಿಬಿದ್ದ ಕಾರ್ಮಿಕರಿಗೆ ಯಾವ ಆಹಾರ ಪದಾರ್ಥಗಳನ್ನು ಕಳುಹಿಸಲಾಗುವುದು, ಕಾರ್ಮಿಕರ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಲಭ್ಯವಿರುವ ಆಹಾರ ಆಯ್ಕೆಗಳ ಕುರಿತು ವೈದ್ಯರ ಸಹಾಯದಿಂದ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು. ಹಾಗೆಯೇ ರಕ್ಷಣಾ ಕಾರ್ಯಾಚರಣೆಯ ವಿಡಿಯೋವನ್ನು ಕೂಡ ಬಿಡುಗಡೆ ಮಾಡಲಾಗಿದೆ. ಆದಷ್ಟು ಬೇಗ ಕಾರ್ಮಿಕರನ್ನು ರಕ್ಷಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:49 am, Tue, 21 November 23