V Senthil Balaji Profile: ಕರ್ನಾಟಕ ಕಾಂಗ್ರೆಸ್​ಗೆ ಡಿಕೆ ಶಿವಕುಮಾರ್ ಹೇಗೋ ತಮಿಳುನಾಡಿನ ಡಿಎಂಕೆಗೆ ಸೆಂಥಿಲ್ ಬಾಲಾಜಿ ಹಾಗೆ!

|

Updated on: Jun 14, 2023 | 11:50 AM

V Senthil Balaji: ಡಿಎಂಕೆ ಹಿರಿಯ ನಾಯಕ ಮತ್ತು ಎಂಕೆ ಸ್ಟಾಲಿನ್ ಸರ್ಕಾರದ ಸಚಿವ ವಿ ಸೆಂಥಿಲ್ ಬಾಲಾಜಿ ಅವರನ್ನು 18 ಗಂಟೆಗಳ ವಿಚಾರಣೆಯ ನಂತರ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ವಶಕ್ಕೆ ತೆಗೆದುಕೊಂಡಿದೆ.

V Senthil Balaji Profile: ಕರ್ನಾಟಕ ಕಾಂಗ್ರೆಸ್​ಗೆ ಡಿಕೆ ಶಿವಕುಮಾರ್ ಹೇಗೋ ತಮಿಳುನಾಡಿನ ಡಿಎಂಕೆಗೆ ಸೆಂಥಿಲ್ ಬಾಲಾಜಿ ಹಾಗೆ!
ವಿ ಸೆಂಥಿಲ್ ಬಾಲಾಜಿ
Image Credit source: India Today
Follow us on

V Senthil Balaji: ಡಿಎಂಕೆ ಹಿರಿಯ ನಾಯಕ ಮತ್ತು ಎಂಕೆ ಸ್ಟಾಲಿನ್ ಸರ್ಕಾರದ ಸಚಿವ ವಿ ಸೆಂಥಿಲ್ ಬಾಲಾಜಿ ಅವರನ್ನು 18 ಗಂಟೆಗಳ ವಿಚಾರಣೆಯ ನಂತರ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ವಶಕ್ಕೆ ತೆಗೆದುಕೊಂಡಿದೆ. ಸೆಂಥಿಲ್ ಬಾಲಾಜಿ ಬಂಧನದ ನಂತರ ರಾಜ್ಯದಲ್ಲಿ ರಾಜಕೀಯ ತಳಮಳ ಹೆಚ್ಚಾಗಿದೆ. ಸೆಂಥಿಲ್ ವಿರುದ್ಧದ ಕ್ರಮದ ನಂತರ ರಾಜ್ಯ ಮುಖ್ಯಮಂತ್ರಿ ಸ್ಟಾಲಿನ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯವರ ಬೆದರಿಕೆ ರಾಜಕಾರಣಕ್ಕೆ ನಾವು ಹೆದರುವುದಿಲ್ಲ, ಕಾನೂನಾತ್ಮಕವಾಗಿ ಹೋರಾಟ ನಡೆಸುತ್ತೇವೆ ಎಂದಿದ್ದಾರೆ.
ಗಂಟೆಗಳ ವಿಚಾರಣೆಯ ನಂತರ ಸೆಂಥಿಲ್ ಬಾಲಾಜಿಯನ್ನು ಇಡಿ ವಶಕ್ಕೆ ತೆಗೆದುಕೊಂಡ ರೀತಿಗೆ, ಸೆಂಥಿಲ್ ಕುಮಾರ್ ಅಳಲು ತೋಡಿಕೊಂಡಿದ್ದಾರೆ. ಇದಾದ ಬಳಿಕ ಸೆಂಥಿಲ್ ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಂಗ್ರೆಸ್​ನಲ್ಲಿ ಡಿಕೆ ಶಿವಕುಮಾರ್​ ಇದ್ದಂಗೆ, ಡಿಎಂಕೆಯಲ್ಲಿ ಸೆಂಥಿಲ್​ ಬಾಲಾಜಿ
ಸೆಂಥಿಲ್ ಬಾಲಾಜಿಯನ್ನು  ಡಿಎಂಕೆಯ ಡಿಕೆ ಶಿವಕುಮಾರ್ ಎಂದು ಪರಿಗಣಿಸಲಾಗಿದೆ. ಡಿಕೆ ಶಿವಕುಮಾರ್ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಟ್ರಬಲ್ ಶೂಟರ್ ಎಂದು ಹಲವು ಸಂದರ್ಭಗಳಲ್ಲಿ ಸಾಬೀತುಪಡಿಸಿದ ರೀತಿಯಲ್ಲಿಯೇ ಸೆಂಥಿಲ್ ಬಾಲಾಜಿ ಕೂಡ ಡಿಎಂಕೆಯ ಪ್ರಮುಖ ಚುನಾವಣಾ ತಂತ್ರಗಾರ ಎಂದು ಪ್ರಸಿದ್ಧರಾಗಿದ್ದಾರೆ.

ಸೆಂಥಿಲ್ ಬಾಲಾಜಿ ಅವರನ್ನು ಡಿಎಂಕೆ ಅಗ್ರ ನಾಯಕ ಎಂದು ಕರೆಯುತ್ತಾರೆ. ಅವರು ಪಕ್ಷದ ಪ್ರಮುಖ ತಂತ್ರಗಾರ ಎಂದು ಕರೆಯುತ್ತಾರೆ. ಅವರು ಹಲವಾರು ಸಂದರ್ಭಗಳಲ್ಲಿ ಪಕ್ಷಕ್ಕೆ ಟ್ರಬಲ್ ಶೂಟರ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಸೆಂಥಿಲ್ ಅವರನ್ನು ಪಕ್ಷದಲ್ಲಿ ನಂಬರ್ ಒನ್ ನಾಯಕ ಎಂದು ಪರಿಗಣಿಸಲಾಗಿದೆ.

ಜಯಲಲಿತಾ ಅವರ ಮರಣದ ನಂತರ, ಡಿಎಂಕೆಯಲ್ಲಿ ಬದಲಾವಣೆ ಪರ್ವದಲ್ಲಿ ಸೆಂಥಿಲ್ ಬಾಲಾಜಿ ಎಐಎಡಿಎಂಕೆ ತೊರೆದು ಡಿಎಂಕೆ ಸೇರಿದರು.
ಜಯಲಲಿತಾ ನಿಧನರಾದಾಗ ಅವರು ಡಿಎಂಕೆ ಸೇರಿದ್ದರು. ಎಐಡಿಎಂಕೆ ತೊರೆದ ನಂತರ, ಸೆಂಥಿಲ್ ಬಾಲಾಜಿ ಅವರ ಸ್ಥಾನಮಾನವು ಸ್ಟ್ಯಾಲಿನ್ ನೇತೃತ್ವದ ಡಿಎಂಕೆಯಲ್ಲಿ ಬೆಳೆಯುತ್ತಲೇ ಇತ್ತು. ವಾಸ್ತವವಾಗಿ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಕೆಲವು ಸ್ಥಾನಗಳನ್ನು ಗೆಲ್ಲಬಹುದು ಎಂದು ಬಿಜೆಪಿ ಭಾವಿಸುತ್ತಿದೆ.

ಸೆಂಥಿಲ್ ಬಾಲಾಜಿ ಅತ್ಯುತ್ತಮ ರಾಜಕೀಯ ತಂತ್ರಗಾರ ಎಂದು ಹೆಸರುವಾಸಿಯಾಗಿದ್ದಾರೆ, ಆದ್ದರಿಂದ ಅವರು ಬಿಜೆಪಿಗೆ ದೊಡ್ಡ ಸವಾಲಾಗಿ ಪರಿಣಮಿಸಬಹುದು.

ಇದೇ ಕಾರಣಕ್ಕೆ ಬಿಜೆಪಿ ಅವರನ್ನು ಟಾರ್ಗೆಟ್ ಮಾಡುತ್ತಿದೆ. ಕೇಂದ್ರದ ವಿರುದ್ಧ ಕಾಂಗ್ರೆಸ್-ಡಿಎಂಕೆ ವಾಗ್ದಾಳಿ ಸೆಂಥಿಲ್ ಬಾಲಾಜಿ ವಿರುದ್ಧದ ಕ್ರಮಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಡಿಎಂಕೆ ಅಧ್ಯಕ್ಷ ಎಂಕೆ ಸ್ಟ್ಯಾಲಿನ್ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಾಸ್ತವವಾಗಿ ಮುಂದಿನ ಲೋಕಸಭೆ ಚುನಾವಣೆಗೂ ಮುನ್ನ ಪ್ರತಿಪಕ್ಷಗಳು ಒಂದಾಗುವ ಕಸರತ್ತಿನಲ್ಲಿ ತೊಡಗಿವೆ. ಕರ್ನಾಟಕದ ಗೆಲುವಿನ ನಂತರ ಕಾಂಗ್ರೆಸ್ ಹುರುಪಿನಲ್ಲಿದೆ. ಡಿಎಂಕೆ ಜೊತೆ ಕೈಜೋಡಿಸಿ ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಒಗ್ಗಟ್ಟಿನ ಬಲವರ್ಧನೆಗೆ ಪಕ್ಷ ಪ್ರಯತ್ನಿಸುತ್ತಿದೆ.

ನಾಲ್ಕು ಬಾರಿ ಶಾಸಕ

ನಾಲ್ಕು ಬಾರಿ ಶಾಸಕರಾಗಿರುವ ಸೆಂಥಿಲ್ ಬಾಲಾಜಿ ಅವರು ಡಿಎಂಕೆ ಪಕ್ಷದಿಂದ ಅರ್ವಕುರುಚಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದಾರೆ.
2011 ಮತ್ತು 2015 ರ ನಡುವೆ ಅವರು ಎಐಎಡಿಎಂಕೆ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದರು. ಜಯಲಲಿತಾ ನಿಧನದ ನಂತರ ಸೆಂಥಿಲ್ ಎಎಂಎಂಕೆ ಸೇರಿದ್ದರು.

ಇದಾದ ನಂತರ ಅವರು ಡಿಎಂಕೆಗೆ ಸೇರ್ಪಡೆಗೊಂಡರು ಮತ್ತು ಡಿಎಂಕೆಯಲ್ಲಿ ಶಾಸಕರಾದರು. ಸೆಂಥಿಲ್ ಕುಮಾರ್ ತಮಿಳುನಾಡಿನಿಂದ ನಾಲ್ಕು ಬಾರಿ ಶಾಸಕರಾಗಿದ್ದಾರೆ. 21 ನೇ ವಯಸ್ಸಿನಲ್ಲಿ ರಾಜಕೀಯವನ್ನು ಪ್ರಾರಂಭಿಸಿದರು ಸೆಂಥಿಲ್ ಬಾಲಾಜಿ ಅವರು 21 ಅಕ್ಟೋಬರ್ 1975 ರಂದು ತಮಿಳುನಾಡಿನ ಕರೂರಿನಲ್ಲಿ ಜನಿಸಿದರು. ಅವರು ಓದಿದ್ದು 12ನೇ ತರಗತಿವರೆಗೆ ಮಾತ್ರ.

ಸೆಂಥಿಲ್ ಬಾಲಾಜಿ ಕರೂರ್ ಕಲಾ ಕಾಲೇಜಿನಲ್ಲಿ ಬಿ.ಕಾಂ.ಗೆ ಸೇರಿಕೊಂಡರು, ಆದರೆ ಅವರ ಅಧ್ಯಯನವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಕೇವಲ 21 ನೇ ವಯಸ್ಸಿನಲ್ಲಿ ಅವರು ರಾಜಕೀಯಕ್ಕೆ ಪ್ರವೇಶಿಸಿದರು.

ಸೆಂಥಿಲ್ ಕುಮಾರ್ ಅವರ ಒಟ್ಟು ಆಸ್ತಿ ಎಷ್ಟು, ಎಷ್ಟು ಆಸ್ತಿ, ಎಷ್ಟು ಪ್ರಕರಣಗಳು , ಅವರು ಒಟ್ಟು 2.84 ಕೋಟಿ ರೂ. ಅವರ ಒಟ್ಟು ಸಾಲ 9.05 ಲಕ್ಷ ರೂ. ಸೆಂಥಿಲ್ ಬಾಲಾಜಿ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ.

ಪ್ರಕರಣ ಏನು?
ಕಳೆದ ತಿಂಗಳು ಸೆಂಥಿಲ್ ವಿರುದ್ಧ ಉದ್ಯೋಗಕ್ಕಾಗಿ ಹಣ ಪಡೆದ ಹಗರಣದಲ್ಲಿ ಪೊಲೀಸ್ ಮತ್ತು ಇಡಿ ತನಿಖೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು ಎಂಬುವುದು ಉಲ್ಲೇಖನೀಯ. ಇನ್ನು ಈ ವಿಷಯವು 2014 ರದ್ದಾಗಿದ್ದು, ಆಗ ಸೆಂಥಿಲ್ ಅವರು ಎಐಎಡಿಎಂಕೆ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದರು. ಮೂಲಗಳ ಪ್ರಕಾರ, ಅಕ್ರಮ ಹಣ ವರ್ಗಾವಣೆ ಅಡಿಯಲ್ಲಿ ಅವರ ವಿರುದ್ಧ ದಾಳಿ ನಡೆಸಲಾಗಿದೆ.

ಡಿಕೆ ಶಿವಕುಮಾರ್​ ಮೇಲೂ ಇದೆ ಅಕ್ರಮ ಆಸ್ತಿ ಗಳಿಕೆ ಪ್ರಕರಣ
ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮೇಲೂ ಕೂಡ ಅಕ್ರಮ ಆಸ್ತಿ ಗಳಿಕೆ, ಹವಾಲಾ ಸೇರಿದಂತೆ ಅನೇಕ ಪ್ರಕರಣಗಳಿದ್ದು, ಅವರು ಕೂಡ ಇಡಿ ವಿಚಾರಣೆ ಎದುರಿಸಿದ್ದರು, ಅವರನ್ನು ಇಡಿ ಬಂಧನಕ್ಕೊಳಪಡಿಸಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:48 am, Wed, 14 June 23