Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಕನನ್ನು ಬಲಿ ಪಡೆದ ಮೊಸಳೆ; ಮೊಸಳೆಯನ್ನು ಹಿಂಸಿಸಿ ಕೊಂದ ಜನ

14 ವರ್ಷದ ಬಾಲಕನನ್ನು ಮೊಸಳೆಯೊಂದು ಬಲಿ ಪಡೆದಿದೆ. ಆಕ್ರೋಶಗೊಂಡ ಸ್ಥಳೀಯರು ಮೊಸಳೆಯನ್ನು ಮೀನಿನ ಬಲೆಯಲ್ಲಿ ಹಿಡಿದು ತಂದು ಹೊಡೆದು ಬಡಿದು ಹಿಂಸಿಸಿ ಕೊಂದಿರುವ ಘಟನೆ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗಿದೆ.

ಬಾಲಕನನ್ನು ಬಲಿ ಪಡೆದ ಮೊಸಳೆ; ಮೊಸಳೆಯನ್ನು ಹಿಂಸಿಸಿ ಕೊಂದ ಜನ
ಬಾಲಕನನ್ನು ಬಲಿ ಪಡೆದ ಮೊಸಳೆ; ಮೊಸಳೆಯನ್ನು ಹಿಂಸಿಸಿ ಕೊಂದ ಜನImage Credit source: iStock
Follow us
ಅಕ್ಷತಾ ವರ್ಕಾಡಿ
|

Updated on: Jun 14, 2023 | 12:33 PM

ಪಾಟ್ನಾ: 14 ವರ್ಷದ ಬಾಲಕನನ್ನು ಮೊಸಳೆಯೊಂದು ಬಲಿ(Crocodile attack) ಪಡೆದಿದೆ. ಆಕ್ರೋಶಗೊಂಡ ಸ್ಥಳೀಯರು ಮೊಸಳೆಯನ್ನು ಮೀನಿನ ಬಲೆಯಲ್ಲಿ ಹಿಡಿದು ತಂದು ಹೊಡೆದು ಬಡಿದು ಹಿಂಸಿಸಿ ಕೊಂದಿರುವ ಘಟನೆ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗಿದೆ. ಬಿಹಾರದ ವೈಶಾಲಿ ಜಿಲ್ಲೆಯ ಅಂಕಿತ್​​ ಕುಮಾರ್​​(14) ಎಂಬ ಬಾಲಕ ಹಾಗೂ ಆತನ ಪೋಷಕರು ಹೊಸ ವಾಹನ ಖರೀದಿಸಿದ ಖುಷಿಯಲ್ಲಿ ವಾಹನಕ್ಕೆ ಪೂಜೆ ಸಲ್ಲಿಸಲು ವೈಶಾಲಿ ಜಿಲ್ಲೆಯ ರಾಘೋಪುರ ದಿಯಾರಾ ದ್ವೀಪದ ಖಾಲ್ಸಾ ಘಾಟ್‌ಗೆ ಬಂದಿದ್ದಾರೆ. ಈ ಸಮಯದಲ್ಲಿ ಗಂಗಾ ನದಿಯಿಂದ ನೀರು ತರಲು ಪುಟ್ಟ ಬಾಲಕ ನೀರಿಗೆ ಇಳಿದಿದ್ದಾನೆ. ಕೆಲವೇ ಕ್ಷಣಗಳಲ್ಲಿ ನೀರಿನಲ್ಲಿದ್ದ ಮೊಸಳೆಯೊಂದು ಪುಟ್ಟ ಬಾಲಕನನ್ನು ಬಲಿ ಪಡೆದುಕೊಂಡಿದೆ.

ಇದನ್ನೂ ಓದಿ: ಉದ್ಯೋಗಿಗಳ ಮಾತು ನಂಬಿ ಮ್ಯಾನೇಜರ್ ಹುದ್ದೆಗಳನ್ನೇ ತೊಲಗಿಸಿದ ಕಂಪನಿ; ಆಮೇಲಾಯಿತು ನೋಡಿ ಅಚ್ಚರಿ

ಬಾಲಕನ ಕಿರುಚಾಟ ಕೇಳಿ ಪಾಲಕರ ಭಯ ಬಿದ್ದಿದ್ದಾರೆ. ಕುಟುಂಬಸ್ಥರು ಅಂಕಿತ್​ನನ್ನು ರಕ್ಷಿಸಲು ಯತ್ನಿಸಿದರಾದರೂ ಮೊಸಳೆ ದಾಳಿಯಿಂದ ಸಾವನ್ನಪ್ಪಿದ್ದಾನೆ. ಒಂದು ಗಂಟೆಯ ನಂತರ ಗಂಗಾ ನದಿಯಿಂದ ಬಾಲಕನ ಅವಶೇಷಗಳನ್ನು ಹೊರತೆಗೆಯಲಾಗಿದೆ. ಆದರೆ ಆಕ್ರೋಶಗೊಂಡ ಸ್ಥಳೀಯರು ಮೀನು ಹಿಡಿಯುವ ಬಲೆಯಿಂದ ಮೊಸಳೆಯನ್ನು ಹಿಡಿದು ದಡಕ್ಕೆ ತಂದು ದೊಣ್ಣೆ ಮತ್ತು ರಾಡ್‌ಗಳಿಂದ ಬರ್ಬರವಾಗಿ ಹೊಡೆದು ಸಾಯಿಸಿಬಿಟ್ಟಿದ್ದಾರೆ. ಮೊಸಳೆಯನ್ನು ಹಿಂಸಿಸಿ ಕೊಂದಿರುವ ದೃಶ್ಯಗಳು ಮೊಬೈಲ್​​​ನಲ್ಲಿ ಸೆರೆಹಿಡಿಯಾಗಿದ್ದು, ಇದೀಗಾ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: