ವೈಕುಂಠ ಏಕಾದಶಿ: ತಿರುಮಲದಲ್ಲಿ 10 ದಿನ ವೈಕುಂಠ ದ್ವಾರ ತೆರೆಯಲು ನಿರ್ಧಾರ

ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ತಿರುಮಲ ತಿರುಪತಿ ದೇಗುಲದ ವೈಕುಂಠ ದ್ವಾರವನ್ನು ಡಿ.25ರಿಂದ ಜನವರಿ 3ರವರೆಗೂ ಓಪನ್ ಮಾಡಲಾಗುತ್ತೆ ಎಂದು ಟಿಟಿಡಿ ಚೇರ್ಮನ್ ವೈ.ವಿ.ಸುಬ್ಬಾರೆಡ್ಡಿ ಮಾಹಿತಿ ನೀಡಿದ್ದಾರೆ.

ವೈಕುಂಠ ಏಕಾದಶಿ: ತಿರುಮಲದಲ್ಲಿ 10 ದಿನ ವೈಕುಂಠ ದ್ವಾರ ತೆರೆಯಲು ನಿರ್ಧಾರ

Updated on: Nov 29, 2020 | 7:56 AM

ತಿರುಮಲ: ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ತಿರುಮಲದಲ್ಲಿ 10 ದಿನ ವೈಕುಂಠ ದ್ವಾರ ತೆರೆಯಲು ನಿರ್ಧರಿಸಲಾಗಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ತಿರುಮಲ ತಿರುಪತಿ ದೇಗುಲದ ವೈಕುಂಠ ದ್ವಾರ ಡಿಸೆಂಬರ್ 25ರಿಂದ ಜನವರಿ 3ರವರೆಗೂ ಓಪನ್ ಆಗಿರಲಿದೆ ಎಂದು ಟಿಟಿಡಿ ಚೇರ್ಮನ್ ವೈ.ವಿ.ಸುಬ್ಬಾರೆಡ್ಡಿ ಮಾಹಿತಿ ನೀಡಿದ್ದಾರೆ.

ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನ ಆಲಯದಲ್ಲಿ ವೈಕುಂಠ ಏಕಾದಶಿಯಂದು ತಿಮ್ಮಪ್ಪನ ಸನ್ನಿಧಾನಕ್ಕೆ ಭಕ್ತಸಾಗರವೇ ಹರಿದು ಬರುತ್ತೆ. ವೈಕುಂಠ ದ್ವಾರದ ಮೂಲಕ ಬಾಲಾಜಿ ದರ್ಶನ ಮಾಡುವುದು ಪ್ರತಿಯೊಬ್ಬ ಭಕ್ತನ ಮಹದಾಸೆಯಾಗಿರುತ್ತೆ.

ಅಲ್ಲದೆ ಇನ್ನು ಮುಂದೆ ವೈಕುಂಠ ಏಕಾದಶಿಯಿಂದ 10 ದಿನಗಳ ಕಾಲ ವೈಕುಂಠ ದ್ವಾರ ತೆರೆಯುವ ಸಾಧ್ಯತೆ ಇದೆ. ಇದರಿಂದ ಉತ್ತರದ ಬಾಗಿಲ ಮೂಲಕ ದೇವರ ದರ್ಶನಕ್ಕೆ ಅವಕಾಶ ದೊರೆಯಲಿದೆ.

ಪ್ರತಿ ವರ್ಷ ಕೇವಲ ಎರಡು ದಿನಗಳು ಮಾತ್ರ ವೈಕುಂಠ ದ್ವಾರ ತೆರೆದು ಸ್ವಾಮಿಯ ದರ್ಶನ ಮಾಡಲು ಅವಕಾಶ ನೀಡಲಾಗುತ್ತಿತ್ತು. ಆದರೆ ಈ ಬಾರಿ ದರ್ಶನವನ್ನು 10ದಿನಗಳಿಗೆ ಏರಿಸಲಾಗಿದೆ.

ಇದನ್ನೂ ಓದಿ: ತಿರುಮಲದಲ್ಲಿ ವೈಕುಂಠ ದ್ವಾರದ ಮೂಲಕ ಸಿಗಲಿದೆ ‘ವೆಂಕಟೇಶ್ವರ’ನ ದರ್ಶನ

Published On - 7:48 am, Sun, 29 November 20