Kerala: ಟಿಕೆಟ್ ಇಲ್ಲದೇ ವಂದೇ ಭಾರತ್ ರೈಲು ಏರಿ, ವಾಶ್​ ರೂಂನಲ್ಲಿ ಲಾಕ್​ ಮಾಡಿ ಕುಳಿತ ಯುವಕ, ಬಾಗಿಲು ಮುರಿದು ಹೊರಗೆಳೆದ ಅಧಿಕಾರಿಗಳು

|

Updated on: Jun 26, 2023 | 9:55 AM

ಕೇರಳದ ವಂದೇ ಭಾರತ್ ರೈಲಿನಲ್ಲಿ ಭಾನುವಾರ ವಿಚಿತ್ರ ಘಟನೆಯೊಂದು ನಡೆದಿದೆ. ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಟಿಕೆಟ್ ಇಲ್ಲದೇ ವಂದೇ ಭಾರತ್ ಎಕ್ಸ್‌ಪ್ರೆಸ್ ಹತ್ತಿದ ಯುವಕನೊಬ್ಬ ರೈಲಿನ ವಾಶ್‌ರೂಮ್‌ಗೆ ಹೋಗಿ ಚಿಲಕ ಹಾಕಿಕೊಂಡು ಹೊರಗೆ ಬರಲು ನಿರಾಕರಿಸಿದ ಘಟನೆ ನಡೆದಿದೆ.

Kerala: ಟಿಕೆಟ್ ಇಲ್ಲದೇ ವಂದೇ ಭಾರತ್ ರೈಲು ಏರಿ, ವಾಶ್​ ರೂಂನಲ್ಲಿ ಲಾಕ್​ ಮಾಡಿ ಕುಳಿತ ಯುವಕ, ಬಾಗಿಲು ಮುರಿದು ಹೊರಗೆಳೆದ ಅಧಿಕಾರಿಗಳು
ವಂದೇ ಭಾರತ್ ಎಕ್ಸ್​ಪ್ರೆಸ್​
Follow us on

ಕೇರಳದ ವಂದೇ ಭಾರತ್ ರೈಲಿನಲ್ಲಿ ಭಾನುವಾರ ವಿಚಿತ್ರ ಘಟನೆಯೊಂದು ನಡೆದಿದೆ. ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಟಿಕೆಟ್ ಇಲ್ಲದೇ ವಂದೇ ಭಾರತ್ ಎಕ್ಸ್‌ಪ್ರೆಸ್(Vande Bharat Express) ಹತ್ತಿದ ಯುವಕನೊಬ್ಬ ರೈಲಿನ ವಾಶ್‌ರೂಮ್‌ಗೆ ಹೋಗಿ ಚಿಲಕ ಹಾಕಿಕೊಂಡು ಹೊರಗೆ ಬರಲು ನಿರಾಕರಿಸಿದ ಘಟನೆ ನಡೆದಿದೆ. ಅಧಿಕಾರಿಗಳ ಪ್ರಕಾರ, ವಂದೇ ಭಾರತ್ ಎಕ್ಸ್‌ಪ್ರೆಸ್ ಹತ್ತಿದ ಈ ಯುವಕ ವಾಶ್ ರೂಂನಲ್ಲಿ ಹೋಗಿ ಲಾಕ್ ಮಾಡಿಕೊಂಡು ಕುಳಿತಿದ್ದ.

ರೈಲು ಪಾಲಕ್ಕಾಡ್‌ನ ಶೋರನೂರ್ ರೈಲು ನಿಲ್ದಾಣವನ್ನು ತಲುಪಿದಾಗ, ವಾಶ್‌ರೂಮ್‌ನ ಬಾಗಿಲು ಮುರಿದು ವ್ಯಕ್ತಿಯನ್ನು ಹೊರತೆಗೆಯಲಾಯಿತು ಎನ್ನುವ ಮಾಹಿತಿ ಲಭ್ಯವಾಗಿದೆ.

ವಾಶ್ ರೂಂನಿಂದ ಹೊರಗೆ ಕರೆದೊಯ್ದ ನಂತರ ರೈಲ್ವೆ ರಕ್ಷಣಾ ಪಡೆ ಅಧಿಕಾರಿಗಳು ಯುವಕನನ್ನು ವಿಚಾರಣೆ ನಡೆಸಿದ್ದಾರೆ.
ರೈಲ್ವೆ ಅಧಿಕಾರಿಗಳ ಪ್ರಕಾರ, ಮೊದಲಿಗೆ ಯುವಕ ಮಹಾರಾಷ್ಟ್ರದ ನಿವಾಸಿ ಎಂದು ಹೇಳಿದ್ದಾನೆ. ಯುವಕ ಹಿಂದಿಯಲ್ಲಿ ಮಾತನಾಡುತ್ತಿದ್ದ. ಬಳಿಕ ತಾನು ಕಾಸರಗೋಡು ನಿವಾಸಿ ಎಂದು ತಿಳಿಸಿದ್ದಾನೆ.

ಮತ್ತಷ್ಟು ಓದಿ: Vande Bharat Express: ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್​​ಪ್ರೆಸ್ ರೈಲು ಸಂಚಾರ ಜೂನ್​ 27ರಿಂದ ಆರಂಭ; ಇಲ್ಲಿದೆ ವೇಳಾಪಟ್ಟಿ

ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕ
ಯುವಕನ ಗುರುತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯುವಕ ಟಿಕೆಟ್ ತೆಗೆದುಕೊಳ್ಳದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ವಿಚಾರಣೆ ವೇಳೆ ಯುವಕ ತನ್ನನ್ನು ಯಾರೋ ಹಿಂಬಾಲಿಸಿಕೊಂಡು ಬರುತ್ತಿದ್ದು, ಆತನಿಂದ ತಪ್ಪಿಸಿಕೊಳ್ಳಲು ಮೊದಲು ವಾಶ್‌ರೂಮ್‌ಗೆ ಹೋಗಿ ಕುಳಿತುಕೊಂಡಿರುವುದಾಗಿ ತಿಳಿಸಿದ್ದಾನೆ.

ಅಧಿಕಾರಿಗಳು ಪದೇ ಪದೇ ಸೂಚನೆ ನೀಡಿದರೂ ಕೋಳಿಗೋಡು ಮತ್ತು ಕಣ್ಣೂರಿನಲ್ಲಿ ರೈಲು ನಿಂತಾಗ ಹೊರಗೆ ಬರುವಂತೆ ಹೇಳಿದರೂ, ಆತ ಉದ್ದೇಶಪೂರ್ವಕವಾಗಿ ವಾಶ್ ರೂಂನಲ್ಲಿ ಕುಳಿತುಕೊಂಡಿದ್ದ. ಹೀಗಾಗಿ ಅನಿವಾರ್ಯವಾಗಿ ವಾಶ್​ರೂಂ ಲಾಕ್​ ಮುರಿದು ಅಧಿಕಾರಿಗಳು ಒಳಗೆ  ತೆರಳಿ ಆತನನ್ನು ಹೊರಗೆ ಕರೆತಂದಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ