ಮೇ 15ರಿಂದ ಭಾರತ್ ಮಿಷನ್ 2.O: 7 ದೇಶಗಳಿಂದ ಮರಳಲಿದ್ದಾರೆ ಭಾರತೀಯರು

|

Updated on: May 10, 2020 | 7:28 AM

ನವದೆಹಲಿ: ಕೊರೊನಾ ಸಂಕಷ್ಟದಲ್ಲಿ ವಿದೇಶದಲ್ಲಿರುವ ಅನಿವಾಸಿ ಭಾರತೀಯರ ನೆರವಿಗೆ ಕೇಂದ್ರ ಸರ್ಕಾರ ನಿಂತಿದೆ. ಮೊದಲ ಹಂತದಲ್ಲಿ 15 ಸಾವಿರ ಜನರನ್ನ ಕರೆತರಲು ಮುಂದಾಗಿರುವ ಸರ್ಕಾರ ಈಗ 2ನೇ ಹಂತದಲ್ಲಿದೆ. ಮತ್ತಷ್ಟು ದೇಶಗಳಿಂದ ಭಾರತೀಯರನ್ನ ಕರೆತರೋ ಸಾಧ್ಯತೆಯಿದೆ. ಹಾಗಿದ್ರೆ ಇವ್ಯಾವ ದೇಶಗಳಿಂದ ಅನಿವಾಸಿ ಭಾರತೀಯರನ್ನ ಕರೆತರೋಕೆ ಸರ್ಕಾರ ಮುಂದಾಗಿದೆ ಅನ್ನೋದ್ರ ಡಿಟೇಲ್ಸ್ ಇಲ್ಲಿದೆ. 7 ದೇಶಗಳಿಂದ ತಾಯ್ನಾಡಿಗೆ ಮರಳಲಿದ್ದಾರೆ ಭಾರತೀಯರು: ಯೆಸ್.. ಸದ್ಯಕ್ಕೆ. ಭಾರತ ಸೇರಿದಂತೆ ಇಡೀ ವಿಶ್ವದಾದ್ಯಂತ ಕೊರೊನಾ ಅನ್ನೋ ಹೆಮ್ಮಾರಿ ತನ್ನ ಕ್ರೂರತ್ವವನ್ನ ಮೆರೀತಿದೆ. ನಿತ್ಯ […]

ಮೇ 15ರಿಂದ ಭಾರತ್ ಮಿಷನ್ 2.O: 7 ದೇಶಗಳಿಂದ ಮರಳಲಿದ್ದಾರೆ ಭಾರತೀಯರು
Follow us on

ನವದೆಹಲಿ: ಕೊರೊನಾ ಸಂಕಷ್ಟದಲ್ಲಿ ವಿದೇಶದಲ್ಲಿರುವ ಅನಿವಾಸಿ ಭಾರತೀಯರ ನೆರವಿಗೆ ಕೇಂದ್ರ ಸರ್ಕಾರ ನಿಂತಿದೆ. ಮೊದಲ ಹಂತದಲ್ಲಿ 15 ಸಾವಿರ ಜನರನ್ನ ಕರೆತರಲು ಮುಂದಾಗಿರುವ ಸರ್ಕಾರ ಈಗ 2ನೇ ಹಂತದಲ್ಲಿದೆ. ಮತ್ತಷ್ಟು ದೇಶಗಳಿಂದ ಭಾರತೀಯರನ್ನ ಕರೆತರೋ ಸಾಧ್ಯತೆಯಿದೆ. ಹಾಗಿದ್ರೆ ಇವ್ಯಾವ ದೇಶಗಳಿಂದ ಅನಿವಾಸಿ ಭಾರತೀಯರನ್ನ ಕರೆತರೋಕೆ ಸರ್ಕಾರ ಮುಂದಾಗಿದೆ ಅನ್ನೋದ್ರ ಡಿಟೇಲ್ಸ್ ಇಲ್ಲಿದೆ.

7 ದೇಶಗಳಿಂದ ತಾಯ್ನಾಡಿಗೆ ಮರಳಲಿದ್ದಾರೆ ಭಾರತೀಯರು:
ಯೆಸ್.. ಸದ್ಯಕ್ಕೆ. ಭಾರತ ಸೇರಿದಂತೆ ಇಡೀ ವಿಶ್ವದಾದ್ಯಂತ ಕೊರೊನಾ ಅನ್ನೋ ಹೆಮ್ಮಾರಿ ತನ್ನ ಕ್ರೂರತ್ವವನ್ನ ಮೆರೀತಿದೆ. ನಿತ್ಯ ಸಾವಿರಾರು ಜನರ ಮೈ ಹೊಕ್ಕು ರುದ್ರನರ್ತನ ಮಾಡ್ತಿದೆ. ಆದ್ರೆ ಕೊರೊನಾದಿಂದಾಗಿ ಅನ್ಯ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿರೋ ಭಾರತೀಯರು ತಾಯ್ನಾಡಿಗೆ ವಾಪಸ್ ಆಗಲು ಹಂಬಲಿಸುತ್ತಿದ್ದಾರೆ.

ಇಂತಹ ಅನಿವಾಸಿ ಭಾರತೀಯರ ನೆರವಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಒಂದೇ ಭಾರತ್ ಮಿಷನ್‌ ಮತ್ತು ಸಮುದ್ರ ಸೇತು ಹೆಸರಿನಲ್ಲಿ 12 ದೇಶಗಳಲ್ಲಿರುವ ಅನಿವಾಸಿ ಭಾರತೀಯರನ್ನ 64 ವಿಶೇಷ ವಿಮಾನಗಳು, 11 ಹಡಗುಗಳ ಮೂಲಕ 15 ಸಾವಿರ ಜನರನ್ನ ವಾಪಸ್ ಕರೆತರೋ ಕೆಲ್ಸವನ್ನ ಈಗಾಗಲೇ ಆರಂಭಿಸಿದೆ. ಮೊದಲ ಹಂತದ ಈ ಮೆಗಾ ಏರ್‌ಲಿಫ್ಟ್‌ ಕಾರ್ಯಾಚರಣೆ ಮೇ 13ಕ್ಕೆ ಪೂರ್ಣಗೊಳ್ಳಲಿದೆ.

ನಮ್ಮನ್ನೂ ವಾಪಸ್ ಕರೆಸಿಕೊಳ್ಳುವಂತೆ ಸರ್ಕಾರಕ್ಕೆ ಮನವಿ:
ತಾಯ್ನಾಡಿಗೆ ಭಾರತೀಯರನ್ನ ಕರೆಸಿಕೊಳ್ತಿದ್ದಂತೆ ಭಾರತಕ್ಕೆ ಬರಲು ಮತ್ತಷ್ಟು ಅನಿವಾಸಿ ಭಾರತೀಯರು ಮುಂದಾಗಿದ್ದಾರೆ. ರಷ್ಯಾ, ಜರ್ಮನಿ, ಥಾಯ್‌ಲ್ಯಾಂಡ್, ಫ್ರಾನ್ಸ್, ಸ್ಪೇನ್, ಖಜಕಿಸ್ತಾನದಲ್ಲಿ ವಾಸವಿರೋ ಸಾವಿರಾರು ಭಾರತೀಯರು ನಮ್ಮನ್ನೂ ವಾಪಸ್ ಕರೆಸಿಕೊಳ್ಳಿ ಅಂತ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ಎರಡನೇ ಹಂತದ ಏರ್‌ಲಿಫ್ಟ್‌ಗೂ ಮುಂದಾಗಿದ್ದು, ಒಂದೇ ಭಾರತ್ ಮಿಷನ್‌ ಮತ್ತೆ ವಿಸ್ತರಿಸಲು ನಿರ್ಧರಿಸಿದೆ. ಅದರಂತೆ ಮೇ 15ರ ಬಳಿಕ ಮತ್ತೊಂದು ದೊಡ್ಡ ಕಾರ್ಯಾಚರಣೆಯನ್ನ ಆರಂಭಿಸೋ ಸಾಧ್ಯತೆಯಿದೆ.

7 ಹೊರ ದೇಶಗಳಲ್ಲಿರುವ ಸುಮಾರು 60 ಸಾವಿರ ಭಾರತೀಯರು ದೇಶದ 19 ವಿವಿಧ ರಾಜ್ಯಗಳಿಗೆ ತಲುಪಿಸುವಂತೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 10 ರಾಜ್ಯಗಳಿಂದ ವೃದ್ಧರು, ವಿದ್ಯಾರ್ಥಿಗಳು, ಉದ್ಯೋಗಿಗಳು, ವಲಸೆ ಕಾರ್ಮಿಕರು ಸೇರಿ 60 ಸಾವಿರ ಭಾರತೀಯರಿದ್ದಾರೆ.

ಈ ಪೈಕಿ ಆದ್ಯತೆ ಮೇರೆಗೆ ಅವರನ್ನ ಕರೆತರಲು ಸರ್ಕಾರ ಮುಂದಾಗುವ ಸಾಧ್ಯತೆ ಇದೆ. ರಷ್ಯಾ, ಜರ್ಮನಿ, ಥಾಯ್‌ಲ್ಯಾಂಡ್, ಫ್ರಾನ್ಸ್, ಸ್ಪೇನ್‌ ಸೇರಿದಂತೆ ಇತರೆ ರಾಷ್ಟ್ರಗಳಲ್ಲಿರೋ ಭಾರತೀಯರು ಸ್ವದೇಶಕ್ಕೆ ಮರಳೋದಕ್ಕೆ ಅವಕಾಶ ಸಿಕ್ಕಂತಾಗಿದೆ.

Published On - 7:08 am, Sun, 10 May 20