ಮತ್ತೊಮ್ಮೆ ಯೋಗಿ ಸರ್ಕಾರದ ವಿರುದ್ಧ ತಿರುಗಿಬಿದ್ದ ಬಿಜೆಪಿ ಸಂಸದ ವರುಣ್​ ಗಾಂಧಿ !

| Updated By: Lakshmi Hegde

Updated on: Oct 22, 2021 | 11:23 AM

ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ವಿಡಿಯೋ ಶೇರ್​ ಮಾಡಿಕೊಂಡು ಸರ್ಕಾರದ ವಿರುದ್ಧ ವರುಣ್​ ಗಾಂಧಿ ಎರಡು ಟ್ವೀಟ್​ ಮಾಡಿದ್ದರು. ಅದಾದ ನಂತರ ವರುಣ್​ ಗಾಂಧಿ ಮತ್ತು ಅವರ ತಾಯಿ ಮನೇಕಾ ಗಾಂಧಿಯವರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಕೈಬಿಡಲಾಗಿದೆ. 

ಮತ್ತೊಮ್ಮೆ ಯೋಗಿ ಸರ್ಕಾರದ ವಿರುದ್ಧ ತಿರುಗಿಬಿದ್ದ ಬಿಜೆಪಿ ಸಂಸದ ವರುಣ್​ ಗಾಂಧಿ !
ವರುಣ್​ ಗಾಂಧಿ
Follow us on

ಲಖನೌ: ಪಿಲಿಭಿತ್​ನ  ಬಿಜೆಪಿ ಸಂಸದ ವರುಣ್​ ಗಾಂಧಿ (BJP MP Varun Gandhi) ಈಗೀಗ ಯೋಗಿ ಆದಿತ್ಯನಾಥ್​ ಸರ್ಕಾರ (Yogi Adityanath Government)ದ ವಿರುದ್ಧ ಜಾಸ್ತಿ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ಉತ್ತರಪ್ರದೇಶದ ಲಖಿಂಪುರ ಖೇರಿ(Lakhimpur Kheri)ಯಲ್ಲಿ ರೈತರ ಮೇಲೆ ನಡೆದ ಹಿಂಸಾಚಾರವನ್ನು ಖಂಡಿಸಿ, ರೈತರ ಪರ ಮಾತನಾಡಿದ್ದರು. ಸರ್ಕಾರವನ್ನು ಪರೋಕ್ಷವಾಗಿಯೇ ವಿರೋಧಿಸಿದ್ದರು. ಇದೀಗ ಪಿಲಿಭಿತ್​ ಮತ್ತು ಬರೇಲಿಗಳಲ್ಲಿ ವಿಪರೀತ ಮಳೆ ಸುರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇದರ ಬಗ್ಗೆಯೂ ಈಗ ವರುಣ್​ ಗಾಂಧಿ ಸರ್ಕಾರದ ವಿರುದ್ಧ ಮಾತನಾಡಿದ್ದಾರೆ.  

ಫಿಲಿಬಿತ್ ಮತ್ತು ಬರೇಲಿಗಳಲ್ಲಿ ಬಹುತೇಕ ಕೆಳ ಪ್ರದೇಶಗಳಲ್ಲಿ ನೀರು ತುಂಬಿ ನಿಂತಿದೆ. ಈ ವಿಪತ್ತು ಮುಗಿಯುವವರಿಗೆ ಯಾರೂ ಹಸಿವಿನಿಂದ ಇರಬಾರದು ಎಂದು ರೇಶನ್​​ಗಳನ್ನು ನೀಡಲಾಗುತ್ತಿದೆ. ಸಂಕಷ್ಟದಲ್ಲಿರುವ ಸಾಮಾನ್ಯ ಜನರು ವ್ಯವಸ್ಥೆಯಿಂದ ಸಹಾಯವನ್ನು ಬಯಸುತ್ತಾರೆ..ಆದರೆ ಅವರು ತಮ್ಮ ರಕ್ಷಣೆಗೆ ತಾವೇ ಗುದ್ದಾಡುವ ಪರಿಸ್ಥಿತಿ ಇದೆ. ಹೀಗೆ ವೈಯಕ್ತಿಕವಾಗಿಯೇ ಎಲ್ಲವನ್ನೂ ಮಾಡಿಕೊಳ್ಳಬೇಕು ಎಂದಾದರೆ ಆಡಳಿತ ಇರುವುದು ಯಾತಕ್ಕೆ? ಅದರ ಅರ್ಥವೇನು? ಎಂದು ವರುಣ್​ ಗಾಂಧಿ ಟ್ವೀಟ್​ ಮಾಡಿದ್ದಾರೆ.  ಎರಡೂ ಜಿಲ್ಲೆಗಳಲ್ಲಿ ವಿಪರೀತ ಮಳೆಯಿಂದಾಗಿ ಮೂವರು ಮೃತಪಟ್ಟಿದ್ದಾರೆ. 100ಕ್ಕೂ ಹೆಚ್ಚು ಜನರು ಸಂಕಷ್ಟಕ್ಕೀಡಾಗಿದ್ದಾರೆ.  ಶಾರದಾ ಮತ್ತು ದೇವೋಹ ನದಿಗಳು ತುಂಬಿ ಹರಿಯುತ್ತಿದ್ದು, ನದಿ ದಡದ ಜನರ ಸ್ಥಳಾಂತರವಾಗಿದೆ. ಈ ಹೊತ್ತಲ್ಲೇ ವರುಣ್​ ಗಾಂಧಿ ಆಡಳಿತವನ್ನು ಟೀಕಿಸಿ ಟ್ವೀಟ್​ ಮಾಡಿದ್ದಾರೆ. ಪ್ರವಾಹದಿಂದ ಸಂಕಷ್ಟಕ್ಕೀಡಾದ ಜನರಿಗೆ ಪರಿಹಾರ ನೀಡಲು ಯೋಗಿ ಆದಿತ್ಯನಾಥ್​​ರನ್ನು ಆಗ್ರಹಿಸಿದ್ದಾರೆ.

ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ವಿಡಿಯೋ ಶೇರ್​ ಮಾಡಿಕೊಂಡು ಸರ್ಕಾರದ ವಿರುದ್ಧ ವರುಣ್​ ಗಾಂಧಿ ಎರಡು ಟ್ವೀಟ್​ ಮಾಡಿದ್ದರು. ಅದಾದ ನಂತರ ವರುಣ್​ ಗಾಂಧಿ ಮತ್ತು ಅವರ ತಾಯಿ ಮನೇಕಾ ಗಾಂಧಿಯವರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಕೈಬಿಡಲಾಗಿದೆ.  ಉತ್ತರಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಆದರೆ ಈ ಬೆನ್ನಲ್ಲೇ ವರುಣ್​ ಗಾಂಧಿ ಪದೇಪದೆ ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡುತ್ತಿರುವುದು ಅನುಮಾನ ಹುಟ್ಟಿಸಿದೆ.

ಇದನ್ನೂ ಓದಿ: ಭಾರತದಲ್ಲಿ ಕೊವಿಡ್‌ಗೆ 50 ಲಕ್ಷ ಜನ ಬಲಿ, ಆದ್ರೆ 100 ಕೋಟಿ ಡೋಸ್ ನೀಡಿದ್ದಕ್ಕೆ ಸಂಭ್ರಮಿಸುತ್ತಿದ್ದಾರೆ: ಸಿದ್ದರಾಮಯ್ಯ ವ್ಯಂಗ್ಯ

ಭಾರತದಲ್ಲಿ ಕೊವಿಡ್‌ಗೆ 50 ಲಕ್ಷ ಜನ ಬಲಿ, ಆದ್ರೆ 100 ಕೋಟಿ ಡೋಸ್ ನೀಡಿದ್ದಕ್ಕೆ ಸಂಭ್ರಮಿಸುತ್ತಿದ್ದಾರೆ: ಸಿದ್ದರಾಮಯ್ಯ ವ್ಯಂಗ್ಯ

Published On - 11:22 am, Fri, 22 October 21