AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಕೊವಿಡ್‌ಗೆ 50 ಲಕ್ಷ ಜನ ಬಲಿ, ಆದ್ರೆ 100 ಕೋಟಿ ಡೋಸ್ ನೀಡಿದ್ದಕ್ಕೆ ಸಂಭ್ರಮಿಸುತ್ತಿದ್ದಾರೆ: ಸಿದ್ದರಾಮಯ್ಯ ವ್ಯಂಗ್ಯ

ವಿಶ್ವ ಆರೋಗ್ಯ ಸಂಸ್ಥೆಯೇ (WHO) ದೇಶದ ಪ್ರಧಾನಿ ಮೋಡಿ ಮತ್ತು ಲಸಿಕೆ ನೀಡಿದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯೇ ಅಭಿನಂದನೆ ಸಲ್ಲಿಸಿದ ಮೇಲೆ ಬೇರೆ ಯಾರೇ ಕಾಮೆಂಟ್ ಮಾಡಿದರೂ ಮೂರು ನಯಾ ಪೈಸೆಯ ಬೆಲೆ ಇರೋಲ್ಲ - ಸಚಿವ ಅಶೋಕ್

ಭಾರತದಲ್ಲಿ ಕೊವಿಡ್‌ಗೆ 50 ಲಕ್ಷ ಜನ ಬಲಿ, ಆದ್ರೆ 100 ಕೋಟಿ ಡೋಸ್ ನೀಡಿದ್ದಕ್ಕೆ ಸಂಭ್ರಮಿಸುತ್ತಿದ್ದಾರೆ: ಸಿದ್ದರಾಮಯ್ಯ ವ್ಯಂಗ್ಯ
R.ಅಶೋಕ್​(ಎಡ); ಸಿದ್ದರಾಮಯ್ಯ (ಬಲ) ಪ್ರಾತಿನಿಧಿಕ ಚಿತ್ರ
TV9 Web
| Edited By: ಸಾಧು ಶ್ರೀನಾಥ್​|

Updated on:Oct 22, 2021 | 10:33 AM

Share

ಹುಬ್ಬಳ್ಳಿ: ದೇಶದಲ್ಲಿ 50 ಲಕ್ಷ ಜನ ಕೊವಿಡ್‌ಗೆ ಬಲಿಯಾಗಿದ್ದಾರೆ. ಆದ್ರೆ 100 ಕೋಟಿ ಲಸಿಕೆ ಹಾಕಿದ್ದೀವಚಿ ಅಂತಾ ಬಿಜೆಪಿಯವರು ಸಂಭ್ರಮಿಸುತ್ತಿದ್ದಾರೆ. ಇದರಲ್ಲಿ 29 ಕೋಟಿ ಜನರು 2 ಡೋಸ್ ಪಡೆದಿದ್ದಾರೆ. 42 ಕೋಟಿ ಜನರು ಸಿಂಗಲ್ ಡೋಸ್ ಪಡೆದಿದ್ದಾರೆ. ಇದು ವಿಪರ್ಯಾಸ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕೊರೊನಾದಿಂದ ಸತ್ತವರ ಸಂಖ್ಯೆ ಎಷ್ಟು? ಆಕ್ಸಿಜನ್ ಬೆಡ್, ಔಷಧಿ ಕೊಡದೇ ಇರುವುದಕ್ಕೆ 50 ಲಕ್ಷ ಜನರು ಸತ್ತಿದ್ದಾರೆ. ರಾಜ್ಯದಲ್ಲಿ ನಾಲ್ಕು ಲಕ್ಷ ಜನರು ಮೃತಪಟ್ಟಿದ್ದಾರೆ. ಈಗ ಅತ್ಯವಸರದಲ್ಲಿ ಸಂಭ್ರಮಾಚರಣೆ ಮಾಡಿಕೊಳ್ತಿದೆ. ಖಾಲಿ ತಟ್ಟೆ ಬಡಿದು ಸಂಭ್ರಮಿಸ್ತಿರುವುದು ಹಾಸ್ಯಾಸ್ಪದ ಎಂದು ಸಿದ್ದರಾಮಯ್ಯ ಛೇಡಿಸಿದರು. ಯಾವ ಸಾಧನೆಗಾಗಿ ನೀವು ಸಂಭ್ರಮ ಮಾಡಿಕೊಳ್ತಿದ್ದೀರಿ? ‘ವೈಫಲ್ಯದ ವಿಶ್ವಗುರು’ ಕುಖ್ಯಾತಿಗಾಗಿಯೇ ಎಂದು ಟ್ವೀಟ್ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಟೀಕೆಗೆ ಮೂರು ನಯಾ ಪೈಸೆ ಬೆಲೆ ಇರೋಲ್ಲ: ಸಚಿವ ಅಶೋಕ್ ಇದೇ ವೇಳೆ ಕೊವಿಡ್ ಲಸಿಕಾ ಸಂಭ್ರಮಾಚಾರಣೆ ಬಗ್ಗೆ ಟ್ವೀಟ್ ಮಾಡಿ, ಟೀಕಿಸಿರುವ ವಿಚಾರವಾಗಿ ಸಿದ್ದರಾಮಯ್ಯ ವಿರುದ್ಧ ಸಚಿವ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯೇ (WHO) ದೇಶದ ಪ್ರಧಾನಿ ಮೋಡಿ ಮತ್ತು ಲಸಿಕೆ ನೀಡಿದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯೇ ಅಭಿನಂದನೆ ಸಲ್ಲಿಸಿದ ಮೇಲೆ ಬೇರೆ ಯಾರೇ ಕಾಮೆಂಟ್ ಮಾಡಿದರೂ ಮೂರು ನಯಾ ಪೈಸೆಯ ಬೆಲೆ ಇರೋಲ್ಲ. ಸಣ್ಣಪುಟ್ಟ ಜನ ಇದಕ್ಕೆ ಮಾತಾಡಿದ್ರೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ.

ಸಿದ್ದರಾಮಯ್ಯ ವಿರೋಧ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಸಿದ್ದರಾಮಯ್ಯ ಹೀಗೆ ಮಾತಾಡ್ತಿರಲಿ. ಅದಕ್ಕೆ ಇನ್ನೂ ಕಳೆ ಬರುತ್ತೆ. ಪ್ರಧಾನಿ ಮೋದಿಯನ್ನ ಟೀಕೆ ಮಾಡದೇ ಹೋದ್ರೆ ಕಾಂಗ್ರೆಸ್ ಅವ್ರಿಗೆ ತಿಂದಿದ್ದು ಜೀರ್ಣ ಆಗೊಲ್ಲ. ಕುಡಿಯುವ ನೀರು ಜೀರ್ಣ ಆಗೊಲ್ಲ. ಟೀಕೆ ಮಾಡೋದು ಕಾಂಗ್ರೆಸ್ ಅವ್ರ ಗುಣ. ಕಾಂಗ್ರೆಸ್ ಹೈಕಮಾಂಡ್ ಕೂಡಾ ಮೋದಿಯನ್ನ ಟೀಕೆ ಮಾಡಿ ಅಂತ ಹೇಳಿದೆ. ಯಾವುದಕ್ಕೆ ಟೀಕೆ ಮಾಡಬೇಕು ಅನ್ನೊ ಪರಿಜ್ಞಾನ ಸಿದ್ದರಾಮಯ್ಯಗೆ ಇಲ್ಲ. ಒಳ್ಳೆ ಕೆಲಸ ಮಾಡಿದಾಗ ಒಳ್ಳೆಯದನ್ನ ಹೇಳಬೇಕು. ಇಂತಹ ನಾಯಕನ ಬಗ್ಗೆ ನಮಗೆ ಬೇಸರ ಆಗ್ತಿದೆ ಎಂದು ಸಿದ್ದರಾಮಯ್ಯ ವಿರುದ್ಧ ಅಶೋಕ್ ಕಿಡಿಕಾರಿದರು.

ಇದನ್ನೂ ಓದಿ: PM Modi Speech LIVE: ಶತಕೋಟಿ ಲಸಿಕೆ ಸಾಧನೆ; ದೇಶವನ್ನು ಉದ್ದೇಶಿಸಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ

CM Basavaraja ಬೊಮ್ಮಾಯಿ ಬಂದಾಗ ಸುನಾಮಿ ಆಗಲಿಲ್ವಂತಾ? | Siddaramaiah |Tv9Kannada

(siddaramaiah criticize 100 crore covid 19 vaccination but minister ashoka lambasts him)

Published On - 10:23 am, Fri, 22 October 21

Follow Us
TV9 Web
TV9 Web

TV9 Kannada

Read More
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ