PM Modi Speech highlights: ಶತಕೋಟಿ ಲಸಿಕೆ ನೀಡಿಕೆ; ದೇಶದ ಸಾಧನೆ ಶ್ಲಾಘಿಸಿದ ಪ್ರಧಾನಿ ಮೋದಿ
PM Narendra Modi Addressing the Nation highlights: ಭಾರತವು 100 ಕೋಟಿ ಲಸಿಕೆ ನೀಡಿಕೆಯ ಸಾಧನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯವಿದೆ.
ಭಾರತವು ಕೊವಿಡ್ ಲಸಿಕಾ ಅಭಿಯಾನದಲ್ಲಿ 100 ಕೋಟಿ ಡೋಸ್ ಲಸಿಕೆ ನೀಡಿದ ಸಾಧನೆ ಮಾಡಿದೆ. ಚೀನಾದ ನಂತರ ಈ ಸಾಧನೆ ಮಾಡಿದ ವಿಶ್ವದ ಎರಡನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಪ್ರಧಾನಿ ಭಾಷಣದ ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯವಿದೆ.
ಭಾರತವು ನಿನ್ನೆ (ಅಕ್ಟೋಬರ್ 21) ಶತಕೋಟಿ ಡೋಸ್ ಲಸಿಕೆ ನೀಡಿಕೆಯ ಮೈಲಿಗಲ್ಲನ್ನು ತಲುಪಿತ್ತು. ಆಗ ಪ್ರಧಾನಿ ಮೋದಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದರು. ‘ದೇಶದ 130 ಕೋಟಿ ಭಾರತೀಯರ ಸಾಮೂಹಿಕ ಚೈತನ್ಯ, ಉದ್ಯಮಶೀಲತೆ, ಭಾರತೀಯ ವಿಜ್ಞಾನದ ಸಾಧನೆಗೆ 100 ಕೋಟಿ ಡೋಸ್ ಲಸಿಕೆ ನೀಡಿಕೆಯ ಮೈಲಿಗಲ್ಲು ಸಾಕ್ಷಿಯಾಗಿದೆ. ಈ ಸಾಧನೆ ಮಾಡಿದ ಭಾರತಕ್ಕೆ ಅಭಿನಂದನೆ. ಇದಕ್ಕೆ ಕಾರಣರಾದ ವೈದ್ಯರು, ನರ್ಸ್‌ಗಳು, ದಾದಿಯರಿಗೂ ಅಭಿನಂದನೆಗಳು’ ಎಂದು ಟ್ವೀಟ್ ಮೂಲಕ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದರು.
ಇಂದು ಪ್ರಧಾನಿ ಭಾಷಣದಲ್ಲಿ, ಕಡಿಮೆ ಸಮಯದಲ್ಲಿ 100 ಕೋಟಿ ಡೋಸ್ ಲಸಿಕೆ ನೀಡಲಾಗಿದ್ದು, ಭಾರತದ ಲಸಿಕೆ ನೀಡಿಕೆ ವೈಜ್ಞಾನಿಕ ಆಧಾರದಲ್ಲಿ ನಡೆದಿದೆ ಎಂದು ನುಡಿದಿದ್ದಾರೆ. ಸವಾಲುಗಳಿಗೆ ಅನುಗುಣವಾಗಿ ಸಾಮರ್ಥ್ಯವನ್ನು ಹೆಚ್ಚಿಸಿದ್ದೇವೆ. ದೇಶದಲ್ಲಿ ವಿಶ್ವಾಸ, ಉತ್ಸಾಹ, ಹುಮ್ಮಸ್ಸಿನ ವಾತಾವರಣ ಇದೆ. ಸ್ಟಾರ್ಟ್ ಅಪ್‌ನಲ್ಲಿ ದಾಖಲೆ ಮಟ್ಟದಲ್ಲಿ ಹೂಡಿಕೆ ಆಗುತ್ತಿದೆ. ಕೊವಿನ್ ಪೋರ್ಟಲ್ ಈಗ ವಿಶ್ವದ ಆಕರ್ಷಣೆಯಾಗಿದೆ. ಮೇಡ್ ಇನ್ ಇಂಡಿಯಾದ ಶಕ್ತಿ ಬಹಳ ದೊಡ್ಡದಾಗಿದೆ. ದೇಶದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸಕಾರಾತ್ಮಕ ವಾತಾವರಣ ಇದೆ. ವ್ಯವಹಾರದಲ್ಲಿ ವೋಕಲ್ ಫಾರ್ ಲೋಕಲ್ ಜಾರಿಗೆ ತರಬೇಕು. ಕಳೆದ ವರ್ಷ ದೀಪಾವಳಿ ವೇಳೆ ಆತಂಕದ ಕಾರ್ಮೋಡ ಇತ್ತು. ಆದರೆ ಈ ಬಾರಿ 100 ಕೋಟಿ ಡೋಸ್ ನೀಡಿಕೆ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ ಎಂದು ಅವರು ಹೇಳಿದ್ದಾರೆ.
LIVE NEWS & UPDATES
-
‘ಭಾರತಕ್ಕೆ ದೊಡ್ಡ ಗುರಿಗಳನ್ನು ಸೃಷ್ಟಿಸಿ ಅದನ್ನು ಸಾಧಿಸುವುದು ತಿಳಿದಿದೆ’
ಭಾರತಕ್ಕೆ ದೊಡ್ಡ ಗುರಿಗಳನ್ನು ಸೃಷ್ಟಿಸಿ ಅದನ್ನು ಸಾಧಿಸುವುದು ತಿಳಿದಿದೆ. ಆದರೆ ಈ ಸಂದರ್ಭದಲ್ಲಿ ನಾವು ಜಾಗರೂಕರಾಗಿರಬೇಕು. ಯಾವುದೇ ಕಾರಣಕ್ಕೂ ಎಚ್ಚರ ತಪ್ಪಬಾರದು ಎಂದು ಪ್ರಧಾನಿ ನುಡಿದಿದ್ದಾರೆ.
-
‘ಹಬ್ಬದ ವೇಳೆ ಎಚ್ಚರ ತಪ್ಪಬೇಡಿ’; ಪ್ರಧಾನಿ ಸಲಹೆ
ದೀಪಾವಳಿ ವೇಳೆ ಜನರಲ್ಲಿ ಹೊಸ ನಿರೀಕ್ಷೆ ಸೃಷ್ಟಿಯಾಗಿದೆ ಎಂದಿರುವ ಪ್ರಧಾನಿ ಹಬ್ಬದ ವೇಳೆ ಎಚ್ಚರ ತಪ್ಪಬೇಡಿ ಎಂದಿದ್ದಾರೆ. ‘‘ಯುದ್ಧ ನಡೆಯುವಾಗ ಶಸ್ತ್ರಾಸ್ತ್ರವನ್ನು ತ್ಯಜಿಸಬಾರದು. ನಾವು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಹಬ್ಬಗಳನ್ನು ಸಂಪೂರ್ಣ ಸುರಕ್ಷತೆಯೊಂದಿಗೆ ಆಚರಿಸಬೇಕು. ಮುಂಬರುವ ಹಬ್ಬಗಳಿಗೆ ದೇಶದ ಜನರಿಗೆ ಶುಭಾಶಯಗಳು. ಮಾಸ್ಕ್ ಸಹಜವಾಗಿ ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಿ’’ ಎಂದು ಪ್ರಧಾನಿ ಸಲಹೆ ನೀಡಿದ್ದಾರೆ.
-
‘ಕೊರೊನಾ ಸಮಯದಲ್ಲಿ ಕೃಷಿ ಕ್ಷೇತ್ರ ದೇಶವನ್ನು ಕಾಪಾಡಿದೆ’
ದೀಪಾವಳಿ ವೇಳೆ ಜನರಲ್ಲಿ ಹೊಸ ನಿರೀಕ್ಷೆ ಸೃಷ್ಟಿಯಾಗಿದೆ. ಕೊರೊನಾ ಸಮಯದಲ್ಲಿ ಕೃಷಿ ಕ್ಷೇತ್ರ ದೇಶವನ್ನು ಕಾಪಾಡಿದೆ. ಭಾರತೀಯರು ಉತ್ಪಾದಿಸುವ ವಸ್ತುಗಳನ್ನು ಖರೀದಿಸಿ ಎಂದು ಪ್ರಧಾನಿ ಕರೆನೀಡಿದ್ದಾರೆ.
‘ಕಳೆದ ವರ್ಷ ದೀಪಾವಳಿ ವೇಳೆ ಆತಂಕದ ಕಾರ್ಮೋಡವಿತ್ತು. ಆದರೆ ಈ ಬಾರಿ 100 ಕೋಟಿ ಡೋಸ್ ನೀಡಿಕೆ ಸಂಭ್ರಮ ಮನೆ ಮಾಡಿದೆ’
ಮೇಡ್ ಇನ್ ಇಂಡಿಯಾದ ಶಕ್ತಿ ಬಹಳ ದೊಡ್ಡದಾಗಿದೆ. ದೇಶದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸಕಾರಾತ್ಮಕ ವಾತಾವರಣ ಇದೆ. ವ್ಯವಹಾರದಲ್ಲಿ ವೋಕಲ್ ಫಾರ್ ಲೋಕಲ್ ಜಾರಿಗೆ ತರಬೇಕು. ಕಳೆದ ವರ್ಷ ದೀಪಾವಳಿ ವೇಳೆ ಆತಂಕದ ಕಾರ್ಮೋಡವಿತ್ತು. ಆದರೆ ಈ ಬಾರಿ 100 ಕೋಟಿ ಡೋಸ್ ನೀಡಿಕೆ ಸಂಭ್ರಮ ಮನೆ ಮಾಡಿದೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದ್ದಾರೆ.
‘ಕೊವಿನ್ ಪೋರ್ಟಲ್ ಈಗ ವಿಶ್ವದ ಆಕರ್ಷಣೆಯಾಗಿದೆ’
ಭಾರತದಲ್ಲಿ ಸವಾಲುಗಳಿಗೆ ಅನುಗುಣವಾಗಿ ಸಾಮರ್ಥ್ಯವನ್ನು ಹೆಚ್ಚಿಸಿದ್ದೇವೆ. ದಾಖಲೆ ಸಂಖ್ಯೆಯಲ್ಲಿ ಯುನಿಕಾರ್ನ್‌ಗಳು ಆರಂಭವಾಗಿವೆ. ದೇಶದಲ್ಲಿ ವಿಶ್ವಾಸ, ಉತ್ಸಾಹ, ಹುಮ್ಮಸ್ಸಿನ ವಾತಾವರಣ ಇದೆ. ಸ್ಟಾರ್ಟ್ ಅಪ್‌ನಲ್ಲಿ ದಾಖಲೆ ಮಟ್ಟದಲ್ಲಿ ಹೂಡಿಕೆ ಆಗುತ್ತಿದೆ. ಕೊವಿನ್ ಪೋರ್ಟಲ್ ಈಗ ವಿಶ್ವದ ಆಕರ್ಷಣೆಯಾಗಿದೆ ಎಂದು ಪ್ರಧಾನಿ ನುಡಿದಿದ್ದಾರೆ.
‘ಕೊವಿಡ್ ಲಸಿಕಾ ಅಭಿಯಾನ ದೇಶದಲ್ಲಿ ಏಕತೆ ಕಂಡಿದೆ’; ಪಿಎಂ ಮೋದಿ
ಕೊವಿಡ್ ಲಸಿಕಾ ಅಭಿಯಾನ ದೇಶದಲ್ಲಿ ಏಕತೆ ಕಂಡಿದೆ. ಕಡಿಮೆ ಸಮಯದಲ್ಲಿ 100 ಕೋಟಿ ಡೋಸ್ ಲಸಿಕೆ ನೀಡಲಾಗಿದ್ದು, ಒಂದೇ ದಿನದಲ್ಲಿ 1 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಭಾರತದ ಕೊವಿಡ್ ಲಸಿಕೆ ನೀಡಿಕೆಯು ವಿಜ್ಞಾನ ಆಧಾರಿತವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
100 ಕೋಟಿ ಡೋಸ್ ಲಸಿಕೆ ನವ ಭಾರತದ ಶಕ್ತಿ ತೋರಿಸಿದೆ; ಪ್ರಧಾನಿ ಸಂತಸ
100 ಕೋಟಿ ಡೋಸ್ ಲಸಿಕೆ ನವ ಭಾರತದ ಶಕ್ತಿ ತೋರಿಸಿದೆ. ಸಾಂಕ್ರಾಮಿಕ ರೋಗ ಯಾವುದೇ ತಾರತಮ್ಯ ಮಾಡುವುದಿಲ್ಲ. ಅದೇ ರೀತಿ ಲಸಿಕೆಯಲ್ಲೂ ತಾರತಮ್ಯ ಮಾಡಬಾರದು. ವಿಐಪಿಗಳಿಗೂ ಸಾಮಾನ್ಯರಂತೆಯೇ ಲಸಿಕೆಯನ್ನು ನೀಡಲಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲೂ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ಧಾರೆ. ಆದರೆ ಭಾರತದಲ್ಲಿ ಜನರ ಪಾಲುದಾರಿಕೆಯನ್ನ ನಮ್ಮ ಶಕ್ತಿಯಾಗಿ ಬಳಸಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ.
‘100 ಕೋಟಿ ಡೋಸ್ ಲಸಿಕೆ ನೀಡಿಕೆ ಅನೇಕ ಪ್ರಶ್ನೆಗಳಿಗೆ ಉತ್ತರವಾಗಿದೆ’: ಪ್ರಧಾನಿ ಮೋದಿ
ಲಸಿಕೆ ಸಂಶೋಧನೆಯಲ್ಲಿ ಬೇರೆ ದೇಶಗಳಿಗೆ ಪರಿಣತಿ ಇತ್ತು. ಭಾರತ ಸಹ ಲಸಿಕೆಗಾಗಿ ಬೇರೆ ದೇಶಗಳನ್ನು ಅವಲಂಬಿಸಿತ್ತು. ಭಾರತ ಕೊರೊನಾ ವಿರುದ್ಧ ಹೋರಾಡಲು ಸಾಧ್ಯವೇ ಎಂಬ ಪ್ರಶ್ನೆ ಇತ್ತು. ಭಾರತದಲ್ಲಿ ಲಸಿಕೆ ಯಾವಾಗ ತರುತ್ತೆ, ಹಣ ಎಲ್ಲಿಂದ ತರುತ್ತೆ ಎಂಬ ಪ್ರಶ್ನೆ ಇತ್ತು. 100 ಕೋಟಿ ಡೋಸ್ ಲಸಿಕೆ ಎಲ್ಲ ಪ್ರಶ್ನೆಗಳಿಗೆ ಭಾರತವು ಉತ್ತರಿಸಿದೆ ಎಂದು ಪ್ರಧಾನಿ ನುಡಿದಿದ್ದಾರೆ. ಭಾರತದಲ್ಲಿ ಉಚಿತವಾಗಿ ಕೊವಿಡ್ ಲಸಿಕೆ ನೀಡಲಾಗಿದೆ. ಇಡೀ ವಿಶ್ವ ಭಾರತದ ಈ ಸಾಮರ್ಥ್ಯವನ್ನು ನೋಡುತ್ತಿದೆ. 100 ಕೋಟಿ ಡೋಸ್ ಲಸಿಕೆ ಕೇವಲ ಅಂಕಿಸಂಖ್ಯೆಯಲ್ಲ ಎಂದು ಅವರು ಹೇಳಿದ್ದಾರೆ.
‘ಕಠಿಣ ಗುರಿ ಇಟ್ಟುಕೊಂಡು ಸಾಧಿಸುವುದು ಭಾರತಕ್ಕೆ ಗೊತ್ತಿದೆ’; ಪ್ರಧಾನಿ
100 ಕೋಟಿ ಡೋಸ್ ಲಸಿಕೆ ನೀಡಿಕೆ ದೇಶದ ಸಾಮರ್ಥ್ಯದ ಪ್ರತಿಬಿಂಬ. ಕಠಿಣ ಗುರಿ ಇಟ್ಟುಕೊಂಡು ಸಾಧಿಸುವುದು ಭಾರತಕ್ಕೆ ಗೊತ್ತಿದೆ ಎಂದು ಹೊಗಳಿರುವ ಪ್ರಧಾನಿ ಮೋದಿ, ಬೇರೆ ದೇಶಗಳ ಜತೆಗೆ ಭಾರತದ ಲಸಿಕಾ ಅಭಿಯಾನವನ್ನು ಹೋಲಿಸಿದ್ದಾರೆ.
ಪ್ರಧಾನಿ ಮೋದಿ ಭಾಷಣವನ್ನು ಇಲ್ಲಿ ನೇರವಾಗಿ ವೀಕ್ಷಿಸಬಹುದು
100 ಕೋಟಿ ಡೋಸ್ ಲಸಿಕೆ ಪ್ರತಿಯೊಬ್ಬ ಭಾರತೀಯನ ಯಶಸ್ಸು; ಪ್ರಧಾನಿ ಮೋದಿ ಸಂತಸ
ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭಿಸಿದ್ದು, ‘ನಮ್ಮ ದೇಶ ಕರ್ತವ್ಯ ಪಾಲಿಸಿದೆ, ಅದಕ್ಕೆ ಯಶಸ್ಸೂ ಸಿಕ್ಕಿದೆ. 100 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿದೆ. ಇದು ಪ್ರತಿಯೊಬ್ಬ ಭಾರತೀಯನ ಯಶಸ್ಸು’ ಎಂದು ನುಡಿದಿದ್ದಾರೆ.
ಪ್ರಧಾನಿ ಮೋದಿ ಭಾಷಣದ ಲೈವ್ ಇಲ್ಲಿದೆ
Addressing the nation. Watch LIVE. https://t.co/eFdmyTnQZi
— Narendra Modi (@narendramodi) October 22, 2021
10 ಗಂಟೆಗೆ ಪ್ರಧಾನಿ ಮೋದಿ ಭಾಷಣ ಆರಂಭ
ಪ್ರಧಾನಿ ನರೇಂದ್ರ ಮೋದಿ 10 ಗಂಟೆಗೆ ದೇಶವನ್ನು ಉದ್ದೇಶಿಸಿ ಭಾಷಣ ಆರಂಭಿಸಲಿದ್ದಾರೆ. ಈ ಕುರಿತು ಪ್ರಧಾನ ಮಂತ್ರಿಗಳ ಕಾರ್ಯಾಲಯವು ಟ್ವೀಟ್ ಮಾಡಿದೆ.
PM @narendramodi will address the nation at 10 AM today.
— PMO India (@PMOIndia) October 22, 2021
ಭಾರತದಲ್ಲಿ 75 ಪ್ರತಿಶತ ಜನರಿಗೆ ಮೊದಲ ಲಸಿಕೆ ಪೂರ್ಣ
ಸರ್ಕಾರದ ದಾಖಲೆಗಳ ಪ್ರಕಾರ, 1.3 ಶತಕೋಟಿ ಜನರಿರುವ ಭಾರತದಲ್ಲಿ ಸುಮಾರು ಮುಕ್ಕಾಲು ಭಾಗ ವಯಸ್ಕರು ಮೊದಲ ಲಸಿಕೆ ಪಡೆದಿದ್ದಾರೆ. ಮತ್ತು ಸುಮಾರು 30 ಪ್ರತಿಶತದಷ್ಟು ಜನರು ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡಿದ್ದಾರೆ.
ಶತಕೋಟಿ ಲಸಿಕೆ ಸಾಧನೆ ಭಾರತದ ಪ್ರತಿಯೊಬ್ಬ ನಾಗರಿಕನದ್ದು; ಪ್ರಧಾನಿ ಮೋದಿ
ದೆಹಲಿಯಲ್ಲಿ ನಿನ್ನೆ (ಗುರುವಾರ) ಮಾತನಾಡುತ್ತಾ ಸಂತಸ ವ್ಯಕ್ತಪಡಿಸಿದ ಪ್ರಧಾನಿ
ನಿನ್ನೆ(ಅಕ್ಟೋಬರ್ 21) ದೆಹಲಿಯ ಎಐಐಎಂಎಸ್ ಕ್ಯಾಂಪಸ್‌ನಲ್ಲಿ ಹೊಸ ಕಟ್ಟಡವನ್ನು ಉದ್ಘಾಟಿಸಿದ ನಂತರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದ್ದ ಪ್ರಧಾನಿ ಮೋದಿ, “ಅಕ್ಟೋಬರ್ 21, 2021 ರ ಈ ದಿನವನ್ನು ಇತಿಹಾಸದಲ್ಲಿ ದಾಖಲಿಸಲಾಗಿದೆ. ಭಾರತವು 100 ಕೋಟಿ ಲಸಿಕೆ ಪ್ರಮಾಣವನ್ನು ದಾಟಿದೆ. 100 ವರ್ಷಗಳಲ್ಲಿ ಅತಿದೊಡ್ಡ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಿ, ದೇಶವು ಈಗ 100 ಕೋಟಿ ಲಸಿಕೆ ಡೋಸ್‌ಗಳ ಬಲವಾದ ರಕ್ಷಣಾತ್ಮಕ ಗುರಾಣಿಯನ್ನು ಹೊಂದಿದೆ. ಈ ಸಾಧನೆಯು ಭಾರತದ ಪ್ರತಿಯೊಬ್ಬ ನಾಗರಿಕನದ್ದಾಗಿದೆ ಎಂದಿದ್ದರು.
100 ಕೋಟಿ ಲಸಿಕೆ ನೀಡಿಕೆ ಪೂರ್ಣಗೊಂಡಿದ್ದಕ್ಕೆ ಪ್ರಧಾನಿ ಹೇಳಿದ್ದೇನು?
ಭಾರತದಲ್ಲಿ 100 ಕೋಟಿ ಡೋಸ್ ಕೊವಿಡ್ ಲಸಿಕೆ ನೀಡಿಕೆ ಪೂರ್ಣಗೊಂಡಿದ್ದು, ಭಾರತ ಇತಿಹಾಸ ರಚಿಸಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದರು. ‘ದೇಶದ 130 ಕೋಟಿ ಭಾರತೀಯರ ಸಾಮೂಹಿಕ ಚೈತನ್ಯ, ಉದ್ಯಮಶೀಲತೆ, ಭಾರತೀಯ ವಿಜ್ಞಾನದ ಸಾಧನೆಗೆ ಈ ಮೈಲಿಗಲ್ಲು ಸಾಕ್ಷಿಯಾಗಿದೆ. 100 ಕೋಟಿ ಡೋಸ್ ಲಸಿಕೆ ನೀಡಿದ ಭಾರತಕ್ಕೆ ಅಭಿನಂದನೆ. ಇದಕ್ಕೆ ಕಾರಣರಾದ ವೈದ್ಯರು, ನರ್ಸ್‌ಗಳು, ದಾದಿಯರಿಗೂ ಅಭಿನಂದನೆಗಳು’ ಎಂದು ಟ್ವೀಟ್ ಮೂಲಕ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದರು.
India scripts history.
We are witnessing the triumph of Indian science, enterprise and collective spirit of 130 crore Indians.
Congrats India on crossing 100 crore vaccinations. Gratitude to our doctors, nurses and all those who worked to achieve this feat. #VaccineCentury
— Narendra Modi (@narendramodi) October 21, 2021
ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಲಸಿಕಾ ಅಭಿಯಾನದ ಸಾಧನೆಯ ಬಗ್ಗೆ ಹೇಳಿದ್ದೇನು?
ಭಾರತದಲ್ಲಿ 100 ಕೋಟಿ ಡೋಸ್ ಕೊವಿಡ್ ಲಸಿಕೆ ನೀಡಿರುವುದು ಪ್ರಧಾನಿ ನರೇಂದ್ರ ಮೋದಿ ಸಮರ್ಥ ನಾಯಕತ್ವದ ಪ್ರತಿಫಲ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಟ್ವೀಟ್ ಮಾಡಿದ್ದರು. ಇದೇ ವೇಳೆ ಅವರು ದೆಹಲಿ ಕೊವಿಡ್ ವಾರ್ ರೂಂಗೆ ಭೇಟಿ ನೀಡಿ, ಕೊರೊನಾ ವಾರಿಯರ್ಸ್‌ಗೆ ಅಭಿನಂದನೆ ಸಲ್ಲಿಸಿದ್ದರು.
ಲಸಿಕೆಯ ಫಲಾನುಭವಿಗಳ ಅಂಕಿ ಅಂಶ ಇಲ್ಲಿದೆ
ಭಾರತದಲ್ಲಿ 18- 44 ವಯಸ್ಸಿನವರಿಗೆ 55.44 ಕೋಟಿ ಡೋಸ್ ಲಸಿಕೆ, 45-60 ವಯಸ್ಸಿನವರಿಗೆ 26.95 ಕೋಟಿ ಡೋಸ್ ಲಸಿಕೆ, 60 ವರ್ಷ ಮೇಲ್ಪಟ್ಟವರಿಗೆ 17.03 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಲಸಿಕಾ ಅಭಿಯಾನದಲ್ಲಿ ಒಟ್ಟಾರೆ 51.55 ಕೋಟಿ ಪುರುಷರು ಹಾಗೂ 47.86 ಕೋಟಿ ಮಹಿಳೆಯರು ಫಲಾನುಭವಿಗಳಾಗಿದ್ದಾರೆ.
ಭಾರತದಲ್ಲಿ ಲಸಿಕೆ ನೀಡಿಕೆಯ ಮೈಲಿಗಲ್ಲುಗಳನ್ನು ದಾಟಿದ್ದು ಹೀಗೆ..
ಫೆಬ್ರವರಿ 19ಕ್ಕೆ 1 ಕೋಟಿ ಡೋಸ್ ಲಸಿಕೆ ನೀಡಲಾಗಿತ್ತು. ಏಪ್ರಿಲ್ 10ರ ವೇಳೆಗೆ 10 ಕೋಟಿ ಡೋಸ್ ಲಸಿಕೆ ನೀಡಲಾಗಿತ್ತು. ಇದೀಗ ಇಂದು (ಅ.21) 100 ಕೋಟಿ ಡೋಸ್ ಲಸಿಕೆ ನೀಡಿಕೆ ಪೂರ್ಣಗೊಂಡಿದ್ದು, ಲಸಿಕಾ ಅಭಿಯಾನದಲ್ಲಿ ಭಾರತ ಮತ್ತೊಂದು ಮೈಲಿಗಲ್ಲನ್ನು ದಾಟಿದೆ.
ಜನವರಿ 16ರಂದು ಆರಂಭಗೊಂಡಿದ್ದ ಕೊವಿಡ್ ಲಸಿಕಾ ಅಭಿಯಾನ
ಭಾರತದಲ್ಲಿ ಕೊವಿಡ್ ಲಸಿಕಾ ಅಭಿಯಾನವು 2021ರ ಜನವರಿ 16ರಂದು ಆರಂಭಗೊಂಡಿತ್ತು. 3,006 ಲಸಿಕಾ ಕೇಂದ್ರಗಳ ಮುಖಾಂತರ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು.
Published On - Oct 22,2021 9:13 AM