PM Modi To Address Nation: ಕೊವಿಡ್ ಲಸಿಕಾ ಅಭಿಯಾನದಲ್ಲಿ ಹೊಸ ಮೈಲಿಗಲ್ಲು, ದೇಶವನ್ನು ಉದ್ದೇಶಿಸಿ ಇಂದು ಪ್ರಧಾನಿ ಮೋದಿ ಭಾಷಣ
ನರೇಂದ್ರ ಮೋದಿ ಭಾಷಣ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಿ ಕಚೇರಿ ಟ್ವೀಟ್ ಮಾಡಿದೆ.
ದೆಹಲಿ: ದೇಶವನ್ನು ಉದ್ದೇಶಿಸಿ ಇಂದು ಬೆಳಗ್ಗೆ 10 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಈ ಬಗ್ಗೆ ಪ್ರಧಾನಿ ಕಚೇರಿಯಿಂದ ಟ್ವೀಟ್ ಮಾಡುವ ಮೂಲಕ ತಿಳಿಸಲಾಗಿದೆ. ಚೀನಾದ ನಂತರ ಒಂದು ಶತಕೋಟಿ ಕೋವಿಡ್ -19 ಲಸಿಕೆ ಮೈಲಿಗಲ್ಲನ್ನು ತಲುಪಿದ ಎರಡನೇ ರಾಷ್ಟ್ರವಾಗಿ ಭಾರತ ಇತಿಹಾಸ ಬರೆದಿದೆ. ಕೊವಿಡ್ ಲಸಿಕಾ ಅಭಿಯಾನದಲ್ಲಿ 100 ಕೋಟಿ ಡೋಸ್ ವ್ಯಾಕ್ಸಿನೇಷನ್ ದಾಖಲೆ ಬರೆದಿದ್ದು ಇಂದು ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಭಾಷಣ ತೀವ್ರ ಕುತೂಹಲ ಮೂಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಿ ಕಚೇರಿ ಟ್ವೀಟ್ ಮಾಡಿದೆ. ಗುರುವಾರ ಬೆಳಿಗ್ಗೆ 10 ಗಂಟೆಗೂ ಮುನ್ನ ದೇಶವು 100 ಕೋಟಿ ವ್ಯಾಕ್ಸಿನೇಷನ್ ಮೈಲಿಗಲ್ಲು ಗಡಿಯನ್ನು ತಲುಪಿದ ಬಳಿಕ, ಪ್ರಧಾನಿ ಮೋದಿ ದೇಶದ ಆರೋಗ್ಯ ಸಾಧಕರಿಗೆ ದೇಶದಲ್ಲಿ ಹೊರ ಇತಿಹಾಸ ಬರೆಯಲು ಸಹಾಯ ಮಾಡಿದ್ದಕ್ಕಾಗಿ ಅಭಿನಂದಿಸಿದರು. ಈ ಮೈಲಿಗಲ್ಲು ಭಾರತೀಯ ವಿಜ್ಞಾನ, ಉದ್ಯಮ ಮತ್ತು 130 ಕೋಟಿ ಭಾರತೀಯರ ಸಾಮೂಹಿಕ ಮನೋಭಾವದ ವಿಜಯವಾಗಿದೆ ಎಂದು ಅವರು ಹೇಳಿದ್ದರು.
PM @narendramodi will address the nation at 10 AM today.
— PMO India (@PMOIndia) October 22, 2021
ನಂತರ ದೆಹಲಿಯ ಎಐಐಎಂಎಸ್ ಕ್ಯಾಂಪಸ್‌ನಲ್ಲಿ ಹೊಸ ಕಟ್ಟಡವನ್ನು ಉದ್ಘಾಟಿಸಿದ ನಂತರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ, “ಅಕ್ಟೋಬರ್ 21, 2021 ರ ಈ ದಿನವನ್ನು ಇತಿಹಾಸದಲ್ಲಿ ದಾಖಲಿಸಲಾಗಿದೆ. ಭಾರತವು 100 ಕೋಟಿ ಲಸಿಕೆ ಪ್ರಮಾಣವನ್ನು ದಾಟಿದೆ. 100 ವರ್ಷಗಳಲ್ಲಿ ಅತಿದೊಡ್ಡ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಿ, ದೇಶವು ಈಗ 100 ಕೋಟಿ ಲಸಿಕೆ ಡೋಸ್‌ಗಳ ಬಲವಾದ ರಕ್ಷಣಾತ್ಮಕ ಗುರಾಣಿಯನ್ನು ಹೊಂದಿದೆ. ಈ ಸಾಧನೆಯು ಭಾರತದ ಪ್ರತಿಯೊಬ್ಬ ನಾಗರಿಕನದ್ದಾಗಿದೆ ಎಂದಿದ್ದರು. ವ್ಯಾಕ್ಸಿನೇಷನ್ ಅಭಿಯಾನವನ್ನು ಮುನ್ನಡೆಸಿದ್ದಕ್ಕಾಗಿ ಪ್ರಧಾನಿ ಮೋದಿ ಆರೋಗ್ಯ ಕಾರ್ಯಕರ್ತರನ್ನು ಹೊಗಳಿದ್ದಾರೆ.
ಸರ್ಕಾರದ ಪ್ರಕಾರ, 1.3 ಶತಕೋಟಿ ಜನರಿರುವ ದೇಶದಲ್ಲಿ ಸುಮಾರು ಮುಕ್ಕಾಲು ಭಾಗ ವಯಸ್ಕರು ಮೊದಲ ಲಸಿಕೆ ಪಡೆದಿದ್ದಾರೆ. ಮತ್ತು ಸುಮಾರು 30 ಪ್ರತಿಶತದಷ್ಟು ಜನರು ಸಂಪೂರ್ಣವಾಗಿ ಲಸಿಕೆ ಹಾಕಿದ್ದಾರೆ.
ಬ್ಲೂಮ್‌ಬರ್ಗ್ ಪ್ರಕಾರ, ಭಾರತಕ್ಕಿಂತ ಹೆಚ್ಚು ಲಸಿಕೆ ಪ್ರಮಾಣವನ್ನು ನೀಡುತ್ತಿರುವ ಏಕೈಕ ರಾಷ್ಟ್ರವೆಂದರೆ ಅದು ಚೀನಾ. ಚೀನಾವು 1.05 ಶತಕೋಟಿ ಅಥವಾ 75% ತನ್ನ ನಾಗರಿಕರಿಗೆ ಸಂಪೂರ್ಣವಾಗಿ ಲಸಿಕೆಯನ್ನು ನೀಡಿದೆ.
ಇದನ್ನೂ ಓದಿ: 100 ಕೋಟಿ ಡೋಸ್ ಲಸಿಕೆ ನೀಡಿಕೆ; ಸರ್ಕಾರ ಭಾಗಶಃ ತನ್ನನ್ನು ತಾನು ಉದ್ಧಾರ ಮಾಡಿಕೊಂಡಿತು ಎಂದ ಶಶಿ ತರೂರ್
Published On - 8:03 am, Fri, 22 October 21