AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಾರಂ-7 ದುರ್ಬಳಕೆ ಆರೋಪ: ಕಾಂಗ್ರೆಸ್​​ ಹೋರಾಟದ ಬೆನ್ನಲ್ಲೇ ಕಾನೂನು ಪ್ರಕಾರ ಕ್ರಮ‌ ಕೈಗೊಳ್ಳುವಂತೆ EROಗಳಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸೂಚನೆ

ಫಾರಂ-7 ದುರ್ಬಳಕೆ ಖಂಡಿಸಿ ಸಿಎಂ ನೇತೃತ್ವದಲ್ಲಿ ಕಾಂಗ್ರೆಸ್ ಧರಣಿ ನಡೆಸಿದ ಬೆನ್ನಲ್ಲೇ, ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಸಿಇಒ ಅನ್ಬುಕುಮಾರ್ ಸೂಚಿಸಿದ್ದಾರೆ. ಮತದಾನದ ಹಕ್ಕು ಇದ್ದವರನ್ನೇ ತೆಗೆಯಲು ವಿಪಕ್ಷಗಳಿಂದ ಕುತಂತ್ರ ನಡೆದಿದೆ. ಆದರೆ ಇಡೀ ದೇಶಕ್ಕೆ ಇವತ್ತು ಐತಿಹಾಸಿಕ ದಿನ ಎಂದು ಡಿಕೆ ಶಿವಕುಮಾರ್​​ ಹೇಳಿದ್ದರೆ, ನೀವೆಲ್ಲಾ ಚುನಾವಣಾ ಅಕ್ರಮದ ವಂಶದಿಂದ ಬಂದವರು. ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಅಧ್ಯಕ್ಷರಲ್ಲ, ಅವರು ರಾಜ್ಯದ ಸಿಎಂ ಎಂದು ವಿಪಕ್ಷ ನಾಯಕ ಅಶೋಕ್​​ ವಾಗ್ದಾಳಿ ನಡೆಸಿದ್ದಾರೆ.

ಫಾರಂ-7 ದುರ್ಬಳಕೆ ಆರೋಪ: ಕಾಂಗ್ರೆಸ್​​ ಹೋರಾಟದ ಬೆನ್ನಲ್ಲೇ ಕಾನೂನು ಪ್ರಕಾರ ಕ್ರಮ‌ ಕೈಗೊಳ್ಳುವಂತೆ EROಗಳಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸೂಚನೆ
ಕಾಂಗ್ರೆಸ್​​ ಹೋರಾಟದ ಬೆನ್ನಲ್ಲೇ ಕಾನೂನು ಪ್ರಕಾರ ಕ್ರಮ‌ ಕೈಗೊಳ್ಳುವಂತೆ EROಗಳಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸೂಚನೆ Image Credit source: Tv9 Kannada
ಪ್ರಮೋದ್​ ಶಾಸ್ತ್ರಿ ಜಿ.
| Edited By: |

Updated on: Oct 01, 2026 | 9:50 PM

Share

ಬೆಂಗಳೂರು, ಅಕ್ಟೋಬರ್​​ 01: ಫಾರಂ-7 ದುರ್ಬಳಕೆ ಆರೋಪ ಸಂಬಂಧ ಚುನಾವಣಾ ಆಯೋಗದ ಕಚೇರಿ ಮುಂದೆ ಸಿಎಂ ಡಿಕೆ ಶಿವಕುಮಾರ್​​ ಮತ್ತು ಸಚಿವರ ಧರಣಿ ನಡೆಸಿದ ಬೆನ್ನಲ್ಲೇ, ಕಾನೂನು ಪ್ರಕಾರ ಕ್ರಮ‌ಕೈಗೊಳ್ಳುವಂತೆ EROಗಳಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಸೂಚನೆ ನೀಡಿದ್ದಾರೆ. ಸ್ಥಳ ಕದಲದೆ ಕಾಂಗ್ರೆಸಿಗರ ಪ್ರತಿಭಟನೆ ಹಿನ್ನೆಲೆ ಸಿಇಸಿ ಜ್ಞಾನೇಶ್ ಕುಮಾರ್ ಸೇರಿ ಮೂವರು ಆಯುಕ್ತರ ಜೊತೆಗೆ ಅನ್ಬುಕುಮಾರ್ ವಿಡಿಯೋ ಕಾನ್ಫ​ರೆನ್ಸ್ ಮೂಲಕ ಸಭೆ ನಡೆಸಿದ್ದು, ಮುಖ್ಯಮಂತ್ರಿಗಳು ಹಾಗೂ ಸಚಿವರು ಕಚೇರಿ ಬಳಿ ಧರಣಿ ಕೂತಿದ್ದಾರೆ. ತನಿಖೆಗೆ ಆದೇಶ ನೀಡುವಂತೆ ಸಿಎಂ, ಸಚಿವರು ಪಟ್ಟು ಹಿಡಿದಿದ್ದಾರೆ ಎಂದುದನ್ನು ವಿವರಿಸಿದ್ದರು ಎನ್ನಲಾಗಿದೆ.

‘ಇಡೀ ದೇಶಕ್ಕೆ ಇವತ್ತು ಐತಿಹಾಸಿಕ ದಿನ’

ಇನ್ನು ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್‌ ಜತೆ ಚರ್ಚಿಸಿದ ಬಳಿಕ ಸಿಎಂ ಡಿಕೆ ಶಿವಕುಮಾರ್​​ ಸುದ್ದಿಗೋಷ್ಠಿ ನಡೆಸಿದ್ದು, ನಾವು ಅನೇಕ ವಿಚಾರಗಳನ್ನು ರಾಜ್ಯದ ಜನತೆಯ ಗಮನಕ್ಕೆ ತಂದಿದ್ದೇವೆ. 1 ಕೋಟಿಗೂ ಹೆಚ್ಚು ಮತಗಳನ್ನು ಅನೇಕ ಸಂದರ್ಭದಲ್ಲಿ ತೆಗೆದಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್​​ನವರು ದೊಡ್ಡ ಕುತಂತ್ರ ನಡೆಸಿದ್ದಾರೆ. ಮತದಾನದ ಹಕ್ಕು ಇದ್ದವರನ್ನೇ ತೆಗೆಯಲು ವಿಪಕ್ಷಗಳಿಂದ ಕುತಂತ್ರ ನಡೆದಿದೆ. ಇಡೀ ದೇಶಕ್ಕೆ ಇವತ್ತು ಐತಿಹಾಸಿಕ ದಿನ. 50 ಲಕ್ಷಕ್ಕೂ ಹೆಚ್ಚು ಜನರಿಗೆ ಸಮಸ್ಯೆ ಅಂತ ನೋಟಿಸ್ ಕೊಟ್ಟಿದ್ದಾರೆ. ಸುಮಾರು ಜನ ಬೇರೆ ಜಾಗಕ್ಕೆ ಶಿಫ್ಟ್ ಆಗಿದ್ದಾರೆ, ಮರಣ ಹೊಂದಿದ್ದಾರೆ. ಆದರೆ ಇದೆಲ್ಲಾ ಆದ್ಮೇಲೆ ಯಾರಿಗೆ ಮತದಾನದ ಹಕ್ಕು ಇದೆಯೋ ಅವರನ್ನು ತೆಗೆಯಲು ಬಿಜೆಪಿ, ಜೆಡಿಎಸ್​ನವರು ಫಾರ್ಮ್​-7 ಕೊಟ್ಟರು. ಕೊನೆ 3 ದಿನ ಎಲ್ಲೋ ಒಂದ್ಕಡೆ ಫಾರ್ಮ್​ ಪ್ರಿಂಟ್ ತೆಗೆದು ಕೊಟ್ಟಿದ್ದಾರೆ ಎಂದು ಸಿಎಂ ಆರೋಪಿಸಿದ್ದಾರೆ.

LIVE TV

ಇದನ್ನೂ ಓದಿ:  ಅಕ್ರಮವಾಗಿ ಫಾರ್ಮ್-7 ಸಲ್ಲಿಸಿಕೆ ಆರೋಪ: ಚುನಾವಣಾ ಆಯೋಗದ ಕಚೇರಿಯಲ್ಲೇ ಪ್ರತಿಭಟನೆ ಕುಳಿತ ಸಿಎಂ ಆ್ಯಂಡ್​ ಟೀಮ್​

‘ನೀವೆಲ್ಲ ಚುನಾವಣಾ ಅಕ್ರಮದ ವಂಶದಿಂದ ಬಂದವರು’

ಮತ್ತೊಂದೆಡೆ ಆಡಳಿತ ಪಕ್ಷದ ನಡೆಗೆ ವಿಪಕ್ಷ ನಾಯಕ ಆರ್​​. ಅಶೋಕ್​​ ತೀವ್ರ ವಾಗ್ದಾಳಿ ನಡೆಸಿದ್ದು, ಇಂದಿರಾ ಗಾಂಧಿಯವರನ್ನು ಚುನಾವಣಾ ಅಕ್ರಮ ಮಾಡಿದ್ದೀರೆಂದು ಪ್ರಧಾನಿ ಹುದ್ದೆಯಿಂದ ಕತ್ತು ಹಿಡಿದು ತಳ್ಳಿದ್ದರು. ನೀವೆಲ್ಲಾ ಚುನಾವಣಾ ಅಕ್ರಮದ ವಂಶದಿಂದ ಬಂದವರು. ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಅಧ್ಯಕ್ಷರಲ್ಲ, ಅವರು ರಾಜ್ಯದ ಸಿಎಂ. ಗೌರವಾನ್ವಿತ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣ ಮಾಡಿದ್ದಾರೆ. ಫ್ರೀಡಂಪಾರ್ಕ್‌ನಲ್ಲಿ ಹೊರತುಪಡಿಸಿ ಬೇರೆಡೆ ಪ್ರತಿಭಟನೆ ನಡೆಸುವಂತಿಲ್ಲ. ಆದರೆ ಕೋರ್ಟ್ ಆದೇಶ ಗಾಳಿಗೆ ತೂರಿ, ಕ್ಯಾಬಿನೆಟ್ ಮುಂದೂಡಿ ಸಿಎಂ ಪ್ರತಿಭಟನೆ ನಡೆಸಿದ್ದಾರೆ. ದೆಹಲಿ ದೊರೆಗಳ ಸೂಚನೆಯಂತೆ ನಾಟಕ ಮಾಡುತ್ತಿದ್ದಾರೆ ಎಂದವರು ಕಿಡಿ ಕಾರಿದ್ದಾರೆ.

ತಪ್ಪಾಗಿದ್ದರೆ ಕೋರ್ಟ್ ಆಯೋಗಕ್ಕೆ ಛೀಮಾರಿ ಹಾಕುತ್ತದೆ, ನೀವು ಯಾರು? ಮತದಾನದ ಹಕ್ಕು ರಕ್ಷಿಸಬೇಕು. ಹಾಗೆಯೇ ಬಾಂಗ್ಲಾದೇಶ, ಪಾಕಿಸ್ತಾನದವರು ಕೂಡಾ ಇರಬಾರದು. ಅದು ಭಾರತಕ್ಕೆ ಗಂಡಾಂತರ, ಅರ್ಹರು ಡಿಲೀಟ್ ಆಗಬಾರದೆಂಬುದು ನಮ್ಮ ಪಕ್ಷದ ನಿಲುವು. ನಾಲ್ಕೈದು ಕಡೆ ಮತ ಹಾಕುವವರ ಪರ ನೀವು ನಿಲ್ಲುವುದು ಸರಿಯೇ? ಎಂದವರು ಪ್ರಶ್ನಿಸಿದ್ದಾರೆ. ನನ್ನ ಮಾಹಿತಿ ಪ್ರಕಾರ ಯಾವುದೇ ಮತ ಡಿಲೀಟ್ ಆಗಿಲ್ಲ. ಬೆಳಗಾವಿಯಲ್ಲಿ ಸಾಮೂಹಿಕ ಅಂತಾ ರಿಜೆಕ್ಟ್ ಮಾಡಿದ್ದಾರೆ. ಗ್ಯಾರಂಟಿ ಹೆಸರಲ್ಲಿ ನಿಮ್ಮ ತಾತ ಯಾರು, ಮಾವ ಯಾರು ಅಂತೆಲ್ಲ ನೀವು ಕೇಳಬಹುದು. ಆದರೆ ಚುನಾವಣಾ ಆಯೋಗ ಕೇಳಬಾರದಾ? ಎಂದವರು ಪ್ರಶ್ನಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಮೋದ್​ ಶಾಸ್ತ್ರಿ ಜಿ.
ಪ್ರಮೋದ್​ ಶಾಸ್ತ್ರಿ ಜಿ.
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ