‘ಅಮರಿಂದರ್ ಸಿಂಗ್ ಕೃಷಿ ಕಾನೂನುಗಳ ವಾಸ್ತುಶಿಲ್ಪಿ’ ಎಂದ ಸಿಧು; ಕೃಷಿ ಕಾನೂನುಗಳ ವಿರುದ್ಧ ಹೋರಾಡುವೆ ಎಂದ ಕ್ಯಾಪ್ಟನ್

TV9 Digital Desk

| Edited By: Rashmi Kallakatta

Updated on: Oct 22, 2021 | 11:34 AM

Navjot Singh Sidhu "ಮೂರು ಕಪ್ಪು ಕಾನೂನುಗಳ ವಾಸ್ತುಶಿಲ್ಪಿ. ಅಂಬಾನಿಯನ್ನು ಪಂಜಾಬ್‌ನ ಹೊಲಗಳಿಗೆ ಕರೆತಂದವರು. ಪಂಜಾಬ್‌ನ ರೈತರು, ಸಣ್ಣ ವ್ಯಾಪಾರಿಗಳು ಮತ್ತು ಕಾರ್ಮಿಕರನ್ನು ನಾಶಪಡಿಸಿದವರು. ಎರಡು ದೊಡ್ಡ ಕಾರ್ಪೊರೇಟ್‌ಗಳಿಗೆ ಲಾಭ ಮಾಡಿಕೊಟ್ಟವರು ಎಂದು ಸಿಧು ಟ್ವೀಟ್ ಮಾಡಿದ್ದಾರೆ.

'ಅಮರಿಂದರ್ ಸಿಂಗ್ ಕೃಷಿ ಕಾನೂನುಗಳ ವಾಸ್ತುಶಿಲ್ಪಿ' ಎಂದ ಸಿಧು; ಕೃಷಿ ಕಾನೂನುಗಳ ವಿರುದ್ಧ ಹೋರಾಡುವೆ ಎಂದ ಕ್ಯಾಪ್ಟನ್
ನವಜೋತ್ ಸಿಂಗ್ ಸಿಧು

ಚಂಡೀಗಢ: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಗುರುವಾರ ಅಮರಿಂದರ್ ಸಿಂಗ್ ಅವರನ್ನು ಕೇಂದ್ರದ ಮೂರು ಕೃಷಿ ಕಾನೂನುಗಳ “ವಾಸ್ತುಶಿಲ್ಪಿ” ಎಂದು ಕರೆದಿದ್ದಾರೆ. “ಮೂರು ಕಪ್ಪು ಕಾನೂನುಗಳ ವಾಸ್ತುಶಿಲ್ಪಿ. ಅಂಬಾನಿಯನ್ನು ಪಂಜಾಬ್‌ನ ಹೊಲಗಳಿಗೆ ಕರೆತಂದವರು. ಪಂಜಾಬ್‌ನ ರೈತರು, ಸಣ್ಣ ವ್ಯಾಪಾರಿಗಳು ಮತ್ತು ಕಾರ್ಮಿಕರನ್ನು ನಾಶಪಡಿಸಿದವರು. ಎರಡು ದೊಡ್ಡ ಕಾರ್ಪೊರೇಟ್‌ಗಳಿಗೆ ಲಾಭ ಮಾಡಿಕೊಟ್ಟವರು ಎಂದು ಸಿಧು ಟ್ವೀಟ್ ಮಾಡಿದ್ದಾರೆ. ಕೃಷಿ, ಬೀಜಗಳು ಮತ್ತು ಬೆಳೆಗಳನ್ನು ಖರೀದಿಸಲು ಅಂಬಾನಿ ಅವರನ್ನು ಮಾಜಿ ಸಿಎಂ ಪಂಜಾಬ್‌ಗೆ ಆಹ್ವಾನಿಸಿದ್ದರು ಎಂದು ಸಿಧು ಹೇಳಿದ್ದಾರೆ. ಈಗಲೂ ಕಾಂಗ್ರೆಸ್‌ನ ಭಾಗವಾಗಿರುವ ಅಮರಿಂದರ್ ಅವರು ತಮ್ಮದೇ ರಾಜಕೀಯ ಪಕ್ಷವನ್ನು ಆರಂಭಿಸುವುದಾಗಿ ಹೇಳಿದ್ದ ಎರಡು ದಿನಗಳ ನಂತರ ಸಿಧು ಈ ರೀತಿ ಟ್ವೀಟ್ ಮಾಡಿದ್ದಾರೆ. ಕ್ಯಾಪ್ಟನ್ ಬಿಜೆಪಿ ಜೊತೆ ಕೈಜೋಡಿಸಲಿದ್ದಾರೆ ಎಂದು ಹೇಳಲಾಗುತ್ತಿದ್ದು ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಹೋರಾಟಕ್ಕೆ ಪರಿಹಾರ ಕೈಗೊಳ್ಳಬೇಕು ಎಂದು ಅಮರಿಂದರ್ ಸಿಂಗ್  ಆಶಿಸಿದ್ದಾರೆ.

ಸಿಧುವನ್ನು “ವಂಚಕ ಮತ್ತು ಮೋಸಗಾರ” ಎಂದು ಕರೆದ ಅಮರಿಂದರ್ , ಪಿಪಿಸಿಸಿ ಮುಖ್ಯಸ್ಥರು ತಮ್ಮ 15 ವರ್ಷದ “ಬೆಳೆ ವೈವಿಧ್ಯೀಕರಣ ಉಪಕ್ರಮ” ವನ್ನು ಕೃಷಿ ಕಾನೂನುಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿದರು. ನಾನು ಇನ್ನೂ ಕೃಷಿ ಕಾನೂನುಗಳ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಹೇಳಿದ ಅಮರಿಂದರ್ ಈ ಹೋರಾಟದೊಂದಿಗೆ ನಾನು ನನ್ನ ಸ್ವಂತ ರಾಜಕೀಯ ಭವಿಷ್ಯವನ್ನು ಜೋಡಿಸಿದ್ದೇನೆ ಎಂದಿದ್ದಾರೆ.

ಪಂಜಾಬ್ ಮತ್ತು ಅದರ ರೈತರ ಹಿತಾಸಕ್ತಿಗಳ ಬಗ್ಗೆ ನಿಮಗೆ ತಿಳಿದಿಲ್ಲದ ಎಂಬುದು ಸ್ಪಷ್ಟವಾಗಿದೆ. ವೈವಿಧ್ಯೀಕರಣ ಮತ್ತು ಕೃಷಿ ಕಾನೂನು ನಡುವಿನ ವ್ಯತ್ಯಾಸ ನಿಮಗೆ ಸ್ಪಷ್ಟವಾಗಿ ತಿಳಿದಿಲ್ಲ. ಇನ್ನೂ ನೀವು ಪಂಜಾಬ್ ಅನ್ನು ಮುನ್ನಡೆಸುವ ಕನಸು ಕಾಣುತ್ತೀರಿ. ಅದು ಎಂದಾದರೂ ಸಂಭವಿಸಿದರೆ ಎಷ್ಟು ಭಯಾನಕ, ”ಎಂದು ಅಮರಿಂದರ್  ಸಿಂಗ್ ಅವರ ಮಾಧ್ಯಮ ಸಲಹೆಗಾರ ರವೀನ್ ತುಕ್ರಲ್  ಸಿಧು   ಟ್ವೀಟ್​ಗೆ  ಪ್ರತಿಕ್ರಿಯಿಸಿದ್ದಾರೆ.

ಪಂಜಾಬ್ ಸರ್ಕಾರವು ತನ್ನ ಮುಂಬರುವ ಪ್ರಗತಿಪರ ಪಂಜಾಬ್ ಹೂಡಿಕೆದಾರರ ಶೃಂಗಸಭೆಯನ್ನು ಉತ್ತೇಜಿಸಲು ಹೊರಟಿರುವ ಸಮಯದಲ್ಲಿ ಇದು ಬಂದಿದೆ ಎಂದು ಅಮರೀಂದರ್ ಅವರು ಸಿಧು ಅವರ ಟ್ವೀಟ್ ಸಮಯವನ್ನು ಪ್ರಶ್ನಿಸಿದರು. “ಅಥವಾ ನೀವು ಅದನ್ನೂ ವಿರೋಧಿಸುತ್ತೀರಾ” ಎಂದು ಅವರು ಸಿಧು ಅವರನ್ನು ಪ್ರಶ್ನಿಸಿದ್ದಾರೆ. ಪಂಜಾಬ್ ಸರ್ಕಾರ ಅಕ್ಟೋಬರ್ 26 ಮತ್ತು 27 ರಂದು ಹೂಡಿಕೆದಾರರ ಶೃಂಗಸಭೆಯನ್ನು ನಡೆಸಲಿದೆ.

ಇದನ್ನೂ ಓದಿ: PM Modi Speech: ಭಾರತ ಕೊರೊನಾ ವಿರುದ್ಧ ಹೋರಾಡಲು ಸಾಧ್ಯವೇ ಎಂಬ ಪ್ರಶ್ನೆಗೆ 100 ಕೋಟಿ ಲಸಿಕೆ ನೀಡಿಕೆ ಉತ್ತರ ನೀಡಿದೆ; ಪ್ರಧಾನಿ ಮೋದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada