ಜೈಪುರ, ನವೆಂಬರ್ 04: ಮುಂಬರುವ ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿದ್ದು, ಝಲರ್‌ಪತನ್ ವಿಧಾನಸಭಾ ಕ್ಷೇತ್ರದಿಂದ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕಿ ಶ್ರೀಮತಿ ವಸುಂಧರಾ ರಾಜೆ (Vasundhara Raje) ಅವರು ಶನಿವಾರ ನಾಮಪತ್ರ ಸಲ್ಲಿದ್ದಾರೆ. ವೇಳೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಉಪಸ್ಥಿತರಿದ್ದರು. ಈ ಕುರಿತಾಗಿ ಟ್ವೀಟ್ ಮಾಡಿರುವ ಸಚಿವ ಪ್ರಲ್ಹಾದ್ ಜೋಶಿ, ರಾಜಸ್ಥಾನ ಝಲ್ರಾಪಾಟನ್ ವಿಧಾನಸಭಾ ಕ್ಷೇತ್ರದಿಂದ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕಿ ಶ್ರೀಮತಿ ವಸುಂಧರಾ ರಾಜೆ ಅವರು ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಜೊತೆಗೆ ಭಾಗವಹಿಸಿದೆನು ಎಂದು ಬರೆದುಕೊಂಡಿದ್ದಾರೆ.
ರಾಜಸ್ಥಾನದಲ್ಲಿ ಸುಸ್ಥಿರ ಸರಕಾರ ಹಾಗೂ ಜನಪರ ಆಡಳಿತ ನೀಡಲು ಈ ಬಾರಿ ಭಾರತೀಯ ಜನತಾ ಪಕ್ಷದ ಸರಕಾರ ರಚಿಸುವತ್ತ, ಇಂದು ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ನಾಯಕಿ ಶ್ರೀಮತಿ ವಸುಂಧರಾ ರಾಜೆ ಸೇರಿದಂತೆ ನಮ್ಮ ಪಕ್ಷದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಿದೆನು. ನಾಮನಿರ್ದೇಶನಕ್ಕೆ ನಮ್ಮ ಉತ್ಸಾಹಿ ಕಾರ್ಯಕರ್ತರೊಂದಿಗೆ ಅವರು ಮತ್ತು ಇತರೆ ಹಿರಿಯ ನಾಯಕರೊಂದಿಗೆ ಭಾಗವಹಿಸಿದ್ದು ನನ್ನ ಸೌಭಾಗ್ಯ ಎಂದಿದ್ದಾರೆ.
Former Chief Minister of Rajasthan and senior leader of @BJP4India Smt. @VasundharaBJP Ji filed her nomination from Jhalrapatan. It was my privilege to accompany her and other senior leaders with our enthusiastic karyakartas to the nomination.
राजस्थान की पूर्व मुख्यमंत्री और… pic.twitter.com/xrpVA6D6VU
— Pralhad Joshi (@JoshiPralhad) November 4, 2023
ಐದು ವರ್ಷ ಆಡಳಿತ ನಡೆಸಿದ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರಕಾರ ಜನರಿಗೆ ಅನುಕೂಲವಾಗುವಂತೆ ಯಾವ ಕೆಲಸವನ್ನೂ ಮಾಡಿಲ್ಲ. ಈಗ ಚುನಾವಣೆ ಬಂದಾಗ ಉಚಿತ ಘೋಷಣೆ ಮಾಡಿ ಜನರನ್ನು ಆಕರ್ಷಿಸುವ ಕೆಲಸ ಮಾಡುತ್ತಿದೆ. ಇದು ಖಂಡಿತವಾಗಿಯೂ ಫಲಿಸುವುದಿಲ್ಲ, ಯಾಕೆಂದರೆ ಜನರು ಬುದ್ಧಿವಂತರಿದ್ದಾರೆ ಮತ್ತು ಕಾಂಗ್ರೆಸಿಗರ ಜನವಿರೋಧಿ ಆಡಳಿತಕ್ಕೆ ಮುಕ್ತಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕಿ ಶ್ರೀಮತಿ ವಸುಂಧರಾ ರಾಜೆ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:00 pm, Sat, 4 November 23