ಪ್ರಯಾಣಿಕರು ಹತ್ತಲು ಕಾಯುತ್ತಿದ್ದ ರೈಲು ನಿಲ್ದಾಣದಲ್ಲಿ ನಿಲುಗಡೆ ಮಿಸ್ ಮಾಡಿದ ಕೇರಳದ (Kerala) ರೈಲೊಂದು 500 ಮೀಟರ್‌ಗೂ ಹೆಚ್ಚು ಹಿಮ್ಮುಖವಾಗಿ ಚಲಿಸಿದ ಘಟನೆ ನಡೆದಿದೆ. ಕೇರಳದ ಆಲಪ್ಪುಳ (Alappuzha) ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಶೋರನೂರ್‌ಗೆ ತೆರಳುತ್ತಿದ್ದ ವೇನಾಡ್ ಎಕ್ಸ್‌ಪ್ರೆಸ್‌ನ(Venad Express) ಲೋಕೋ ಪೈಲಟ್, ಚೆರಿಯನಾಡ್ ಎಂಬ ಸಣ್ಣ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡಲು ಮರೆತಿದ್ದಾರೆ. ಈ ತಪ್ಪು ಅರಿವಿಗೆ ಬಂದ ಕೂಡಲೇ ಲೋಕೋ ಪೈಲಟ್ ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರಯಾಣಿಕರಿಗಾಗಿ ರೈಲನ್ನು 700 ಮೀಟರ್ ರಿವರ್ಸ್ ಚಲಾಯಿಸಿದ್ದಾರೆ.
ಮಾವೇಲಿಕ್ಕರ ಮತ್ತು ಚೆಂಗನ್ನೂರು ನಿಲ್ದಾಣಗಳ ನಡುವೆ ಇರುವ ಸಣ್ಣ ನಿಲ್ದಾಣವಾದ ಚೆರಿಯನಾಡ್ ನಿಲ್ದಾಣದಲ್ಲಿ ಬೆಳಿಗ್ಗೆ 7.45 ರ ಸುಮಾರಿಗೆ ಈ ಘಟನೆ ನಡೆದಿದೆ. ರೈಲ್ವೆ ಅಧಿಕಾರಿಗಳ ಪ್ರಕಾರ, ಪ್ರಯಾಣಿಕರಿಂದ ಯಾವುದೇ ದೂರುಗಳು ಬಂದಿಲ್ಲ. ಏಕೆಂದರೆ ಅವರಲ್ಲಿ ಯಾರೂ ಯಾವುದೇ ಅನಾನುಕೂಲತೆಯನ್ನು ಎದುರಿಸಲಿಲ್ಲ. ರೈಲು ಸರಿಯಾದ ಸಮಯಕ್ಕೆ ತನ್ನ ಗಮ್ಯಸ್ಥಾನವನ್ನು ತಲುಪಿತು.
ಇದನ್ನೂ ಓದಿ: ಕೇಂದ್ರ ಸರ್ಕಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅವಮಾನಿಸಿದೆ: ಸರಣಿ ಟ್ವೀಟ್ ಮೂಲಕ ಕಿಡಿಕಾರಿದ ಖರ್ಗೆ
ಚೆರಿಯನಾಡು ನಿಲ್ದಾಣದಲ್ಲಿ ಸಿಗ್ನಲ್ ಅಥವಾ ಸ್ಟೇಷನ್ ಮಾಸ್ಟರ್ ಇಲ್ಲ. ಹಾಗಾಗಿ ಲೊಕೊ ಪೈಲಟ್‌ನ ನಿಲ್ಲಿಸದೇ ಹೋಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲೋಕೋ ಪೈಲಟ್‌ಗಳಿಂದ ವಿವರಣೆ ಕೇಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ