Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳೆದ 15 ವರ್ಷಗಳಿಂದ ಕೇರಳದಲ್ಲಿ ಈ ಸಮುದಾಯದವರ ಮದುವೆಯೇ ನಡೆದಿಲ್ವಂತೆ, ಇದೇ ಮೊದಲ ವಿವಾಹ

ಕೇರಳದ ಸಮುದಾಯವು ಬರೋಬ್ಬರಿ 15 ವರ್ಷಗಳ ಬಳಿಕ ಮೊದಲ ವಿವಾಹವನ್ನು ನೆರವೇರಿಸಿತು. ಅಲ್ಲಿಯ ಖಾಸಗಿ ಹೋಟೆಲ್​ನ ರೆಸಾರ್ಟ್​ ಒಂದರಲ್ಲಿ ವಿವಾಹ ಸಮಾರಂಭ ನಡೆಯಿತು, ಸ್ನೇಹಿತರು, ಸಮುದಾಯದ ಸದಸ್ಯರು ಪಾಲ್ಗೊಂಡಿದ್ದರು.

ಕಳೆದ 15 ವರ್ಷಗಳಿಂದ ಕೇರಳದಲ್ಲಿ ಈ ಸಮುದಾಯದವರ ಮದುವೆಯೇ ನಡೆದಿಲ್ವಂತೆ, ಇದೇ ಮೊದಲ ವಿವಾಹ
ಮದುವೆ
Follow us
ನಯನಾ ರಾಜೀವ್
|

Updated on: May 22, 2023 | 2:04 PM

ಕೇರಳದ ಸಮುದಾಯವು ಬರೋಬ್ಬರಿ 15 ವರ್ಷಗಳ ಬಳಿಕ ಮೊದಲ ವಿವಾಹವನ್ನು ನೆರವೇರಿಸಿತು. ಅಲ್ಲಿಯ ಖಾಸಗಿ ಹೋಟೆಲ್​ನ ರೆಸಾರ್ಟ್​ ಒಂದರಲ್ಲಿ ವಿವಾಹ ಸಮಾರಂಭ ನಡೆಯಿತು, ಸ್ನೇಹಿತರು, ಸಮುದಾಯದ ಸದಸ್ಯರು ಪಾಲ್ಗೊಂಡಿದ್ದರು. ಮದುವೆಯು ಹುಪ್ಪಾ ಎಂಬ ಪ್ರದೇಶದಲ್ಲಿ ನಡೆಯಿತು, ಕೇರಳದ ಸಿನ್​ಗಾಗ್​ನ ಹೊರಗೆ ನಡೆದ ಮೊದಲ ಮದುವೆ ಇದಾಗಿದೆ.ಕೇರಳದಲ್ಲಿ ಈ ರೀತಿ ವಿವಾಹವು ಅಪರೂಪಕ್ಕೆ ನಡೆಯುವುದರಿಂದ ಇದು ಮಹತ್ವ ಪಡೆದುಕೊಂಡಿದೆ.

ರಾಜ್ಯದಲ್ಲಿ ಕೊನೆಯ ಯಹೂದಿಯ ವಿವಾಹವು 2008ರಲ್ಲಿ ನಡೆದಿತ್ತು, ಸುಮಾರು 15 ವರ್ಷಗಳ ಬಳಿಕ ಮಟ್ಟಂಚೇರಿಯ ತೆಕ್ಕುಂಭಾಗಂ ಸಿನಗಾಗ್​ನಲ್ಲಿ ಮದುವೆ ನಡೆದಿದೆ.

ಅಮೆರಿಕದಲ್ಲಿ ಡೇಟಾ ಸೈಂಟಿಸ್ಟ್​ ಆಗಿರುವ ರಾಚೆಲ್​ ಮಲಾಖೈ ಹಾಗೂ ನಾಸಾ ಎಂಜಿನಿಯರ್ ರಿಚರ್ಡ್​ ಜಕಾರಿ ರೋವ್ ಅವರನ್ನು ಮದುವೆಯಾದರು.

ಇತಿಹಾಸಕಾರರು ಹೇಳುವ ಪ್ರಕಾರ, ಯಹೂದಿಯಗಳು ವ್ಯಾಪಾರ ಮಾಡಲು ರಾಜ ಸೊಲೊಮನ್ ಕಾಲದಲ್ಲಿ ಕೇರಳಕ್ಕೆ ಬಂದಿದ್ದರು. ಇದು ನಡೆದದ್ದ 2 ಸಾವಿರ ವರ್ಷಗಳ ಹಿಂದೆ, ಈಗ ಇಲ್ಲಿ ಕೆಲವೇ ಕೆಲವು ಕುಟುಂಬಗಳು ಉಳಿದಿವೆ.

ನಾವು ಮದುವೆಯನ್ನು ಅಮೆರಿಕದಲ್ಲಿ ಆಯೋಜಿಸಬಹುದಿತ್ತು ಮತ್ತು ನಮ್ಮ ಕುಟುಂಬಗಳನ್ನು ಅಲ್ಲಿಗೆ ಬರಲು ಆಹ್ವಾನಿಸಬಹುದಿತ್ತು. ಆದರೆ ನಮ್ಮ ಸ್ನೇಹಿತರು ಮತ್ತು ಹಿತೈಷಿಗಳು, ಇಲ್ಲಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ನಮ್ಮ ಸಮುದಾಯದವರು ಸಹ ಅದರ ಭಾಗವಾಗಬೇಕೆಂದು ನಾವು ಇಲ್ಲಿಯೇ ಮದುವೆ ಮಾಡುವ ನಿರ್ಧಾರ ತೆಗೆದುಕೊಂಡಿದ್ದೆವು ಎಂದು ಪೋಷಕರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ