‘ರೈತರ ಸಮಸ್ಯೆ ಪರಿಹರಿಸಿ’ ಎಂಬ ಟ್ವೀಟ್ ಡಿಲೀಟ್ ಮಾಡಿ ಸ್ಪಷ್ಟನೆ ನೀಡಿದ ನಟ ಧರ್ಮೇಂದ್ರ

|

Updated on: Dec 04, 2020 | 3:33 PM

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬಗ್ಗೆ ಟ್ವೀಟ್ ಮಾಡಿ ಆಮೇಲೆ ಡಿಲೀಟ್ ಮಾಡಿದ್ದಾರೆ.

‘ರೈತರ ಸಮಸ್ಯೆ ಪರಿಹರಿಸಿ ಎಂಬ ಟ್ವೀಟ್ ಡಿಲೀಟ್ ಮಾಡಿ ಸ್ಪಷ್ಟನೆ ನೀಡಿದ ನಟ ಧರ್ಮೇಂದ್ರ
ನಟ ಧರ್ಮೇಂದ್ರ
Follow us on

ಮುಂಬೈ: ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬಗ್ಗೆ ಟ್ವೀಟ್ ಮಾಡಿ ಆಮೇಲೆ ಡಿಲೀಟ್ ಮಾಡಿದ್ದಾರೆ.

ಗುರುವಾರ ರಾತ್ರಿ ಟ್ವೀಟ್ ಮಾಡಿದ ಧರ್ಮೇಂದ್ರ ರೈತ ಸಹೋದರರ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಿ ಎಂದು ನಾನು ಸರ್ಕಾರದಲ್ಲಿ ಮನವಿ ಮಾಡುತ್ತೇನೆ. ದೆಹಲಿಯಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಲೇ ಇವೆ. ಇದು ನೋವಿನ ಸಂಗತಿ ಎಂದಿದ್ದರು. ಆಮೇಲೆ ಆ ಟ್ವೀಟ್ ಡಿಲೀಟ್ ಮಾಡಿದ್ದಾರೆ.

ಈ ಬಗ್ಗೆ ಟ್ವೀಟಿಗರು ಪ್ರಶ್ನಿಸಿದ್ದಕ್ಕೆ ಶುಕ್ರವಾರ ಬೆಳಗ್ಗೆ ಸ್ಪಷ್ಟನೆ ನೀಡಿದ ಅವರು, ನಿಮ್ಮ ಈ ರೀತಿಯ ಕಾಮೆಂಟ್​ಗಳಿಂದ ಬೇಸರಗೊಂಡು ನಾನು ಟ್ವೀಟ್ ಡಿಲೀಟ್ ಮಾಡಿದ್ದೆ. ನೀವು ಮನಸೋ ಇಚ್ಛೆ ಬೈದು ಬಿಡಿ. ನಿಮ್ಮ ಖುಷಿಯಲ್ಲಿಯೇ ನಮ್ಮ ಖುಷಿ ಇದೆ. ನಾನು ನಮ್ಮ ರೈತ ಸಹೋದರರ ವಿಷಯದಲ್ಲಿ ದುಃಖಿತನಾಗಿದ್ದೇನೆ. ಸರ್ಕಾರ ಆದಷ್ಟು ಬೇಗ ಇದಕ್ಕೆ ಪರಿಹಾರ ಕಲ್ಪಿಸಬೇಕು. ನಮ್ಮ ಮಾತುಗಳನ್ನು  ಯಾರು ಕೇಳುವವರೇ ಇಲ್ಲ ಎಂದಿದ್ದಾರೆ.

Published On - 3:29 pm, Fri, 4 December 20