ಮನೆಯಲ್ಲಿಯೇ ಧ್ವಜಾರೋಹಣ ಮಾಡಿದ LK ಆಡ್ವಾಣಿ

ನವದೆಹಲಿ: ಮಾಜಿ ಉಪಪ್ರಧಾನಿ ಹಾಗೂ ಹಿರಿಯ ಬಿಜೆಪಿ ನಾಯಕ ಲಾಲ್‌ ಕೃಷ್ಣ ಆಡ್ವಾಣಿ ಭಾರತದ 74ನೇ ಸ್ವಾತಂತ್ರ್ಯ ದಿನೋತ್ಸವವನ್ನು ತಮ್ಮ ಮನೆಯಲ್ಲಿಯೇ ಧ್ವಜಾರೋಹಣ ಮಾಡುವ ಮೂಲಕ ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಆಡ್ವಾಣಿಗೆ ಅವರ ಪುತ್ರಿ ಪ್ರತಿಭಾ ಆಡ್ವಾಣಿ ಸಾಥ್ ನೀಡಿದರು. ಇನ್ನುಳಿದಂತೆ ದ್ವಜಾರೋಹಣ ಕಾರ್ಯಕ್ರಮದಲ್ಲಿ ಆಡ್ವಾಣಿಯವರೊಂದಿಗೆ ಕೆಲ ಬಿಜೆಪಿ ಕಾರ್ಯಕರ್ತರು ಮತ್ತು ದೆಹಲಿ ಪೊಲೀಸರು ಉಪಸ್ಥಿತರಿದ್ದರು. ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಉಪ ಪ್ರಧಾನಿ ಹಾಗೂ ಗೃಹಸಚಿವರಾಗಿದ್ದ ಎಲ್‌ ಕೆ ಆಡ್ವಾಣಿ ಈಗ ಬಿಜೆಪಿಯ […]

ಮನೆಯಲ್ಲಿಯೇ ಧ್ವಜಾರೋಹಣ ಮಾಡಿದ LK ಆಡ್ವಾಣಿ
Edited By:

Updated on: Aug 15, 2020 | 3:52 PM

ನವದೆಹಲಿ: ಮಾಜಿ ಉಪಪ್ರಧಾನಿ ಹಾಗೂ ಹಿರಿಯ ಬಿಜೆಪಿ ನಾಯಕ ಲಾಲ್‌ ಕೃಷ್ಣ ಆಡ್ವಾಣಿ ಭಾರತದ 74ನೇ ಸ್ವಾತಂತ್ರ್ಯ ದಿನೋತ್ಸವವನ್ನು ತಮ್ಮ ಮನೆಯಲ್ಲಿಯೇ ಧ್ವಜಾರೋಹಣ ಮಾಡುವ ಮೂಲಕ ಆಚರಿಸಿದ್ದಾರೆ.

ಈ ಸಂದರ್ಭದಲ್ಲಿ ಆಡ್ವಾಣಿಗೆ ಅವರ ಪುತ್ರಿ ಪ್ರತಿಭಾ ಆಡ್ವಾಣಿ ಸಾಥ್ ನೀಡಿದರು. ಇನ್ನುಳಿದಂತೆ ದ್ವಜಾರೋಹಣ ಕಾರ್ಯಕ್ರಮದಲ್ಲಿ ಆಡ್ವಾಣಿಯವರೊಂದಿಗೆ ಕೆಲ ಬಿಜೆಪಿ ಕಾರ್ಯಕರ್ತರು ಮತ್ತು ದೆಹಲಿ ಪೊಲೀಸರು ಉಪಸ್ಥಿತರಿದ್ದರು.

ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಉಪ ಪ್ರಧಾನಿ ಹಾಗೂ ಗೃಹಸಚಿವರಾಗಿದ್ದ ಎಲ್‌ ಕೆ ಆಡ್ವಾಣಿ ಈಗ ಬಿಜೆಪಿಯ ಮಾರ್ಗದರ್ಶಕರಾಗಿ ಮನೆಯಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದಾರೆ.

Published On - 3:38 pm, Sat, 15 August 20