ಚೀನಾ ಗಡಿಯಲ್ಲಿ ಭಾರತೀಯ ಯೋಧರ ‘ವಂದೇ ಮಾತರಂ’ ಸಿಂಹಘರ್ಜನೆ!
ದೆಹಲಿ: ಇಷ್ಟು ದಿನ ಗಡಿಯಲ್ಲಿ ಪದೇ ಪದೇ ತಗಾದೆ ತೆಗೆಯುವ ಚೀನಾದ ಸೈನಿಕರಿಗೆ ಈ ನಡುವೆ ತುಸು ಭೀತಿ ಹುಟ್ಟಿದೆ. ಏಕೆಂದರೆ, ಅವರಿಗೆ ತಕ್ಕ ಶಾಸ್ತಿ ಮಾಡಲು ನಮ್ಮ ಕೆಚ್ಚೆದೆಯ ಕಲಿಗಳು ಸಿದ್ಧರಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಇಂದು 74ನೇ ಸ್ವಾತಂತ್ರ್ಯೋತ್ಸವವನ್ನ ಚೀನಾ ಗಡಿಗೆ ಅಂಟಿಕೊಂಡಿರುವ ಲಡಾಖ್ ಪ್ರದೇಶದಲ್ಲಿ ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ತಂಡದಿಂದ ವಿಜೃಂಭಣೆಯಿಂದ ಆಚರಿಸಲಾಯಿತು. ಹೌದು, 14,000 ಅಡಿ ಎತ್ತರದಲ್ಲಿ ಉಸಿರಾಡಲು ಕಷ್ಟವಾಗುವಂಥ ಪ್ರತಿಕೂಲ ವಾತಾವರಣದಲ್ಲೂ ಇಂದು ನಮ್ಮ ವೀರ ಯೋಧರು ಭಾರತದ ತ್ರಿವರ್ಣ […]
ದೆಹಲಿ: ಇಷ್ಟು ದಿನ ಗಡಿಯಲ್ಲಿ ಪದೇ ಪದೇ ತಗಾದೆ ತೆಗೆಯುವ ಚೀನಾದ ಸೈನಿಕರಿಗೆ ಈ ನಡುವೆ ತುಸು ಭೀತಿ ಹುಟ್ಟಿದೆ. ಏಕೆಂದರೆ, ಅವರಿಗೆ ತಕ್ಕ ಶಾಸ್ತಿ ಮಾಡಲು ನಮ್ಮ ಕೆಚ್ಚೆದೆಯ ಕಲಿಗಳು ಸಿದ್ಧರಿದ್ದಾರೆ.
ಇದಕ್ಕೆ ಸಾಕ್ಷಿಯೆಂಬಂತೆ ಇಂದು 74ನೇ ಸ್ವಾತಂತ್ರ್ಯೋತ್ಸವವನ್ನ ಚೀನಾ ಗಡಿಗೆ ಅಂಟಿಕೊಂಡಿರುವ ಲಡಾಖ್ ಪ್ರದೇಶದಲ್ಲಿ ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ತಂಡದಿಂದ ವಿಜೃಂಭಣೆಯಿಂದ ಆಚರಿಸಲಾಯಿತು. ಹೌದು, 14,000 ಅಡಿ ಎತ್ತರದಲ್ಲಿ ಉಸಿರಾಡಲು ಕಷ್ಟವಾಗುವಂಥ ಪ್ರತಿಕೂಲ ವಾತಾವರಣದಲ್ಲೂ ಇಂದು ನಮ್ಮ ವೀರ ಯೋಧರು ಭಾರತದ ತ್ರಿವರ್ಣ ಧ್ವಜ ಹೊತ್ತು ಮೆರೆದರು. ನೆರೆಯ ಚೀನಾ ಪದೇ ಪದೇ ಕಿರಿಕ್ ಮಾಡುತ್ತಿರುವ ಪ್ಯಾಂಗಾಂಗ್ ತ್ಸೋ ಕೆರೆಯ ದಂಡೆ ಮೇಲೆ ನಿಂತು ಚೀನಾ ಸೈನಿಕರ ಹುಟ್ಟಡಿಗಿಸುವಂತೆ ವಂದೇ ಮಾತರಂ ಎಂದು ಜೋರಾಗಿ ಘರ್ಜಿಸಿದರು.
ಗಡಿಯಲ್ಲಿ ಭಾರತದ ತ್ರಿವರ್ಣ ಧ್ವಜ ಹೊತ್ತು ಗಸ್ತು ತಿರುಗಿದ ನಮ್ಮ ಯೋಧರು ಇದು ನಮ್ಮ ಜಾಗ ನಮ್ಮ ನೆಲ ಎಂದು ಘಂಟಾಘೋಷವಾಗಿ ಚೀನಾಕ್ಕೆ ಸಂದೇಶ ರವಾನಿಸಿದ್ದಾರೆ.
#WATCH: Ladakh: Indo-Tibetan Border Police (ITBP) jawans celebrate #IndependenceDay on the banks of Pangong Tso, at an altitude of 14,000 feet. (Source: ITBP) pic.twitter.com/T5d00K6hnf
— ANI (@ANI) August 15, 2020