ನವದೆಹಲಿ: ಕಾಫಿ ಡೇ ಎಂಟರ್ಪ್ರೈಸಸ್ ಲಿಮಿಟೆಡ್ನ (ಸಿಡಿಇಎಲ್) ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ದಿವಂಗತ ವಿ.ಜಿ.ಸಿದ್ಧಾರ್ಥ ಅವರ ಪತ್ನಿ ಮಾಳವಿಕಾ ಹೆಗ್ಡೆ ಅವರನ್ನು ನೇಮಿಸಲಾಗಿದೆ. ಕೆಫೆ ಕಾಫಿ ಡೇ ರೆಸ್ಟೊರೆಂಟ್ ಸರಣಿಗೆ ಸಿಡಿಇಲ್ ಮಾತೃಸಂಸ್ಥೆ.
ಸಂಸ್ಥೆಯ ನಿರ್ದೇಶಕಿಯಾಗಿದ್ದ ಮಾಳವಿಕಾ ಅವರನ್ನು ಡಿಸೆಂಬರ್ 7ರಿಂದ ಜಾರಿಗೆ ಬರುವಂತೆ ಸಿಇಒ ಆಗಿ ನೇಮಿಸಲಾಗಿದೆ ಎಂದು ಸಿಡಿಇಲ್ ಶಾಸನಬದ್ಧ ಮಾಹಿತಿಯಲ್ಲಿ ತಿಳಿಸಿದೆ.
ಸಿ.ಎಚ್.ವಸುಂಧರಾ ದೇವಿ, ಗಿರಿ ದೇವನೂರು ಮತ್ತು ಮೋಹನ್ ರಾಘವೇಂದ್ರ ಕೊಂಡಿ ಅವರನ್ನು ಸ್ವತಂತ್ರ ನಿರ್ದೇಶಕರನ್ನಾಗಿ ನೇಮಿಸಲು ಸೋಮವಾರ ನಡೆದ ಆಡಳಿತ ಮಂಡಳಿ ಸಭೆ ಸಮ್ಮತಿ ಸೂಚಿಸಿತು. ಡಿಸೆಂಬರ್ 31ರಿಂದ ಐದು ವರ್ಷಗಳ ಅವಧಿಗೆ ಇವರ ಅಧಿಕಾರ ಅವಧಿ ನಿಗದಿಯಾಗಿದೆ.
ಈ ಮೂಲಕ ಕಾಫಿ ಡೇ ಸಂಸ್ಥೆಯು ಸೆಬಿ ನಿಯಮಾವಳಿಗಳ ಪ್ರಕಾರ ನೇಮಿಸಬೇಕಿದ್ದ ಮಹಿಳಾ ಸ್ವತಂತ್ರ ನಿರ್ದೇಶಕರ ನೇಮಕಾತಿಯನ್ನೂ ಪೂರ್ಣಗೊಳಿಸದಂತೆ ಆಗಿದೆ.
2019ರ ಜುಲೈ 29ರಂದು ಸಿದ್ದಾರ್ಥ ಹೆಗ್ಡೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರದ ದಿನಗಳಲ್ಲಿ ಕಾಫಿ ಡೇ ಗ್ರೂಪ್ ಮೇಲೆ ಸಾಲ ಮರುಪಾವತಿಯ ಒತ್ತಡ ಹೆಚ್ಚಾಗಿತ್ತು. ಸಾಲ ಮರುಪಾವತಿಗಾಗಿ ಆಸ್ತಿಗಳನ್ನು ಮಾರಾಟ ಮಾಡಲು ಕಾಫಿ ಡೇ ಮುಂದಾಗಿತ್ತು.
ಸಾಲ ವಸೂಲಾತಿ ನಿರ್ವಹಣೆ ಮತ್ತು ಸಮಾಲೋಚನೆಯ ಉಸ್ತುವಾರಿಗಾಗಿ ಕಳೆದ ಆಗಸ್ಟ್ನಲ್ಲಿ ಕಾಫಿ ಡೇ ಗ್ರೂಪ್ ಕರ್ನಾಟಕ ಹೈಕೋರ್ಟ್ನ ಮಾಜಿ ನ್ಯಾಯಧೀಶರಾದ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ಅವರನ್ನು ನೇಮಿಸಿತ್ತು.
ಕಾಫಿ ಡೇ ಗ್ರೂಪ್ನ ಮಾತೃಸಂಸ್ಥೆ ಸಿಡಿಇಎಲ್ ಒಟ್ಟು 49 ಅಧೀನ ಸಂಸ್ಥೆಗಳನ್ನು ನಿರ್ವಹಿಸುತ್ತಿದೆ. ಕಳೆದ ಸೆಪ್ಟೆಂಬರ್ನಲ್ಲಿ ಸಿಡಿಇಎಲ್ ಬೆಂಗಳೂರಿನಲ್ಲಿದ್ದ ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್ ಅನ್ನು ಜಾಗತಿಕ ಹೂಡಿಕೆ ಕಂಪನಿ ಬ್ಲಾಕ್ಸ್ಟೋನ್ ಮತ್ತು ರಿಯಾಲ್ಟಿ ಫರ್ಮ್ ಸಲಾರ್ಪುರಿಯಾ ಸತ್ವ ಕಂಪನಿಗೆ ₹ 2700 ಕೋಟಿಗೆ ಮಾರಾಟ ಮಾಡಿತ್ತು.
ಮೈಂಡ್ಟ್ರೀ ಐಟಿ ಕಂಪನಿಯಲ್ಲಿದ್ದ ತನ್ನ ಪಾಲನ್ನು ಸಿಡಿಇಎಲ್ ಈ ಹಿಂದೆ ಎಲ್ ಅಂಡ್ ಟಿ ಇನ್ಫೊಟೆಕ್ಗೆ ಮಾರಾಟ ಮಾಡಿತ್ತು.
ಇನ್ನಷ್ಟು..
ಆಡಳಿತ ಪಕ್ಷಕ್ಕೆ ಮುಜುಗರ; ಎಸ್.ವಿ. ರಂಗನಾಥ್ ಬದಲಾವಣೆಗೆ ಪಟ್ಟುಹಿಡಿದ ಹೆಚ್.ವಿಶ್ವನಾಥ್.. ಕಾರಣ ಏನು?
ಕಾಫಿ ಡೇ ಮಾಲೀಕ ದಿ. ಸಿದ್ಧಾರ್ಥ್ ಪತ್ನಿಗೆ ಬಂಧನ ಭೀತಿ
Published On - 9:31 pm, Mon, 7 December 20