ಸಂದರ್ಶಕರ ಪುಸ್ತಕದಲ್ಲಿ ಬರೆಯುವಾಗ ನಕಲು ಮಾಡುತ್ತಿರುವ ಅಸ್ಸಾಂ ಸಿಎಂ; ಲೇವಡಿಯ ವಿಡಿಯೊಗೆ ಹಿಮಂತ ಬಿಸ್ವಾ ಶರ್ಮಾ ಉತ್ತರ ಹೀಗಿದೆ

ಇದಾಗಿ ಕೆಲವು ಗಂಟೆಗಳ ನಂತರ ಪ್ರತಿಕ್ರಿಯಿಸಿದ ಅಸ್ಸಾಂ ಮುಖ್ಯಮಂತ್ರಿ ನಾನು ಅಸ್ಸಾಮಿ ಮಾಧ್ಯಮ ಶಾಲೆಗೆ ಹೋಗಿದ್ದೇನೆ. ಹಿಂದಿ ಮತ್ತು ಇಂಗ್ಲಿಷ್ ಅನ್ನು ನನ್ನದೇ ಆದ ರೀತಿಯಲ್ಲಿ ಕಲಿಯಲು ಪ್ರಯತ್ನಿಸುತ್ತಿದ್ದೇನೆ. ನನಗೆ ಇಂಗ್ಲಿಷ್ ಮತ್ತು ಹಿಂದಿ ಚೆನ್ನಾಗಿ ಬರುವುದಿಲ್ಲ ಎಂದು ನಾನು ಒಪ್ಪಿಕೊಳ್ಳುತ್ತೇನೆ

ಸಂದರ್ಶಕರ ಪುಸ್ತಕದಲ್ಲಿ ಬರೆಯುವಾಗ ನಕಲು ಮಾಡುತ್ತಿರುವ ಅಸ್ಸಾಂ ಸಿಎಂ; ಲೇವಡಿಯ ವಿಡಿಯೊಗೆ ಹಿಮಂತ ಬಿಸ್ವಾ ಶರ್ಮಾ ಉತ್ತರ ಹೀಗಿದೆ
ಹಿಮಂತ ಬಿಸ್ವಾ ಶರ್ಮಾ

Updated on: Apr 04, 2023 | 9:39 PM

ದೆಹಲಿ: ಅಸ್ಸಾಂ (Assam) ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ(Himanta Sarma) ಅವರು ರಾಜ್ಯದ ಶಾಲೆಗೆ ಭೇಟಿ ನೀಡಿದಾಗ ಸಂದರ್ಶಕರ ಪುಸ್ತಕದಲ್ಲಿ ಬರೆಯುವಾಗ ಬೇರೊಂದು ಹಾಳೆಯಲ್ಲಿ ಬರೆದಿರುವ ಪಠ್ಯವನ್ನು ನಕಲು ಮಾಡುತ್ತಿರುವುದನ್ನು ತೋರಿಸುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಹರಿದಾಡಿದೆ. ಹಿಮಂತ ಬಿಸ್ವಾ ಶರ್ಮಾ ಸಂದರ್ಶಕರ ರಿಜಿಸ್ಟರ್‌ನಲ್ಲಿ ಬೇರೊಂದು ಪಠ್ಯ ನೋಡಿಕೊಂಡು ಬರೆಯುತ್ತಿರುವ ವಿಡಿಯೊವನ್ನು ರೋಷನ್ ರೈ ಎಂಬವರು ಟ್ವೀಟ್ ಮಾಡಿದ್ದಾರೆ. “ಸಂದರ್ಶಕರ ಪುಸ್ತಕದಲ್ಲಿ ನಕಲು ಮಾಡದೆ ಒಂದು ಪ್ಯಾರಾವನ್ನು ಸಹ ಬರೆಯಲು ಸಾಧ್ಯವಾಗದ ಅಸ್ಸಾಂ ಮುಖ್ಯಮಂತ್ರಿಯನ್ನು ಪ್ರಸ್ತುತಪಡಿಸುತ್ತಿದ್ದೇವೆ ಎಂದು ರೈ ಟ್ವೀಟ್ ಮಾಡಿದ್ದಾರೆ.

ಇದಾಗಿ ಕೆಲವು ಗಂಟೆಗಳ ನಂತರ ಪ್ರತಿಕ್ರಿಯಿಸಿದ ಅಸ್ಸಾಂ ಮುಖ್ಯಮಂತ್ರಿ ನಾನು ಅಸ್ಸಾಮಿ ಮಾಧ್ಯಮ ಶಾಲೆಗೆ ಹೋಗಿದ್ದೇನೆ. ಹಿಂದಿ ಮತ್ತು ಇಂಗ್ಲಿಷ್ ಅನ್ನು ನನ್ನದೇ ಆದ ರೀತಿಯಲ್ಲಿ ಕಲಿಯಲು ಪ್ರಯತ್ನಿಸುತ್ತಿದ್ದೇನೆ. ನನಗೆ ಇಂಗ್ಲಿಷ್ ಮತ್ತು ಹಿಂದಿ ಚೆನ್ನಾಗಿ ಬರುವುದಿಲ್ಲ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಅದನ್ನು ಒಪ್ಪಿಕೊಳ್ಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ ಎಂದಿದ್ದಾರೆ. ಈ ವಿಡಿಯೊಗೆ ನೆಟಿಜನ್​ಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.


ಆಧಾರ ರಹಿತ ಟ್ವೀಟ್‌ಗಳಿಗೆ ನೀವು ಪ್ರತ್ಯುತ್ತರ ನೀಡಿರುವುದು ನಿಮ್ಮ ವಿನಮ್ರತೆ ಎಂದು ಟ್ವಿಟರ್ ಬಳಕೆದಾರ ಅಶುತೋಷ್ ಜೆ ದುಬೆ ಹೇಳಿದ್ದಾರೆ.

ನಿಮ್ಮ ಪ್ರಥಮ ಭಾಷೆಯಲ್ಲಿ ಏಕೆ ಬರೆಯಬಾರದು?ಎಂದು ಮತ್ತೊಬ್ಬರು ಕೇಳಿದರು.

ಹಿಮಂತ ಬಿಸ್ವಾ ಅವರು  BA, MA, LLB ಮಾಡಿದ್ದಾರೆ. ಅವರು 3 ಡಿಗ್ರಿಗಳ ನಂತರವೂ ಮೆಚ್ಚುಗೆಯ ಎರಡು ವಾಕ್ಯಗಳನ್ನು ಬರೆಯಲು ಸಾಧ್ಯವಾಗದಿದ್ದರೆ ಅವರು ನಿಜವಾಗಿಯೂ ಅನ್ಪಡ್ ಜಮಾತ್‌ಗೆ ಸೇರಿದವರು. ಹಾಗೆಯೇ ನಿಮ್ಮ ಮಾತೃಭಾಷೆಯಲ್ಲಿ ಬರೆಯಲು ನಿಮಗೆ ನಾಚಿಕೆ ಏಕೆ? ಅಸ್ಸಾಮಿಯಲ್ಲೇ ಬರೆಯಿರಿ ಎಂದು ಮತ್ತೊಬ್ಬರು ಹೇಳಿದ್ದಾರೆ.

ನಿಮ್ಮ ಬಗ್ಗೆ ಹೆಮ್ಮೆ ಇದೆ ಸರ್. ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ನಕಾರಾತ್ಮಕತೆಯನ್ನು ಒಪ್ಪಿಕೊಳ್ಳುವುದು ಬಹಳ ದೊಡ್ಡ ವಿಷಯ ಎಂದು ಇನ್ನೊಬ್ಬರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ