ವಿವಾಹಕ್ಕೆ ಉಡುಗೊರೆಯಾಗಿ ಬಂದಿದ್ದ ಹೋಂ ಥಿಯೇಟರ್ ಸ್ಫೋಟ ಇಬ್ಬರು ಸಾವು ಪ್ರಕರಣಕ್ಕೆ ಟ್ವಿಸ್ಟ್​, ಅದರಲ್ಲಿ ಬಾಂಬ್ ಇಟ್ಟಿದ್ದು ಯಾರು?

ವಿವಾಹಕ್ಕೆ ಉಡುಗೊರೆಯಾಗಿ ಬಂದಿದ್ದ ಹೋಂ ಥಿಯೇಟರ್ ಸಿಸ್ಟಂ ಸ್ಫೋಟಗೊಂಡು ನವ ವಿವಾಹಿತ ಹಾಗೂ ಅವರ ಸಹೋದರ ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಲಭ್ಯವಾಗಿದೆ.

ವಿವಾಹಕ್ಕೆ ಉಡುಗೊರೆಯಾಗಿ ಬಂದಿದ್ದ ಹೋಂ ಥಿಯೇಟರ್ ಸ್ಫೋಟ ಇಬ್ಬರು ಸಾವು ಪ್ರಕರಣಕ್ಕೆ ಟ್ವಿಸ್ಟ್​, ಅದರಲ್ಲಿ ಬಾಂಬ್ ಇಟ್ಟಿದ್ದು ಯಾರು?
ಆರೋಪಿ ಸರ್ಜುImage Credit source: NDTV
Follow us
ನಯನಾ ರಾಜೀವ್
|

Updated on: Apr 05, 2023 | 7:56 AM

ವಿವಾಹಕ್ಕೆ ಉಡುಗೊರೆಯಾಗಿ ಬಂದಿದ್ದ ಹೋಂ ಥಿಯೇಟರ್ ಸಿಸ್ಟಂ ಸ್ಫೋಟಗೊಂಡು ನವ ವಿವಾಹಿತ ಹಾಗೂ ಅವರ ಸಹೋದರ ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಹೋಂ ಥಿಯೇಟರ್ ಸಿಸ್ಟಂನಲ್ಲಿ ಬಾಂಬ್ ಇಟ್ಟಿದ್ದಾಗಿ ನವ ವಿವಾಹಿತೆಯ ಮಾಜಿ ಪ್ರಿಯಕರ ಒಪ್ಪಿಕೊಂಡಿದ್ದಾರೆ. ಮ್ಯೂಸಿಕ್ ಸಿಸ್ಟಂ ಪ್ಲೇ ಮಾಡುತ್ತಿದ್ದಂತೆ ಸ್ಫೋಟ ಸಂಭವಿಸಿತ್ತು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಹೋಂ ಥಿಯೇಟರ್​ನಲ್ಲಿ ಸ್ಫೋಟಕವನ್ನು ಅಳವಡಿಸಲಾಗಿತ್ತು, ಅದನ್ನು ವಧುವಿನ ಮಾಜಿ ಪ್ರಿಯಕರ ನೀಡಿದ್ದ ಉಡುಗೊರೆಯಾಗಿತ್ತು ಎಂದು ಪೊಲೀಸರಿಂದ ತಿಳಿದುಬಂದಿದೆ. ಛತ್ತೀಸ್‌ಗಢದ ಕಬೀರ್ಧಾಮ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಸ್ಫೋಟದ ಪರಿಣಾಮ ಹೋಮ್ ಥಿಯೇಟರ್ ವ್ಯವಸ್ಥೆ ಇರಿಸಲಾಗಿದ್ದ ಕೊಠಡಿಯ ಗೋಡೆಗಳು ಮತ್ತು ಛಾವಣಿ ಕುಸಿದು ಬಿದ್ದಿದೆ. 22 ವರ್ಷದ ಹೇಮೇಂದ್ರ ಮೆರಾವಿ ಎಂದು ಗುರುತಿಸಲಾದ ವರ ವೈರ್ ಅನ್ನು ಎಲೆಕ್ಟ್ರಿಕ್ ಬ್ಯಾಂಡ್‌ಗೆ ಜೋಡಿಸಿದ ನಂತರ ಹೋಮ್ ಥಿಯೇಟರ್ ಸಿಸ್ಟಂ ಅನ್ನು ಸ್ವಿಚ್ ಆನ್ ಮಾಡಿದಾಗ, ಭಾರಿ ಸ್ಫೋಟ ಸಂಭವಿಸಿದೆ.

ಮತ್ತಷ್ಟು ಓದಿ: ಹೋಂ ಥಿಯೇಟರ್ ಮ್ಯೂಸಿಕ್ ಸಿಸ್ಟಂ ಸ್ಫೋಟ: ನವ ವಿವಾಹಿತ ಸೇರಿ ಇಬ್ಬರು ಸಾವು, ನಾಲ್ವರಿಗೆ ಗಾಯ

ಆರೋಪಿಯನ್ನು ಸರ್ಜು ಎಂದು ಗುರುತಿಸಲಾಗಿದ್ದು ಪೊಲೀಸರು ಆತನನ್ನು ಬಂಧಿಸಿದ್ದಾರೆ., ಪೊಲೀಸರು ಮದುವೆಯ ಸಮಯದಲ್ಲಿ ಪಡೆದ ಉಡುಗೊರೆಗಳ ಪಟ್ಟಿಯನ್ನು ತನಿಖೆ ಮಾಡಲು ಪ್ರಾರಂಭಿಸಿದಾಗ, ಮ್ಯೂಸಿಕ್ ಸಿಸ್ಟಮ್ ವಧುವಿನ ಮಾಜಿ ಪ್ರೇಮಿಯ ಉಡುಗೊರೆ ಎಂಬುದು ತಿಳಿದುಬಂದಿದೆ. ಪ್ರೇಯಸಿ ಬೇರೊಬ್ಬನನ್ನು ಮದುವೆಯಾಗುತ್ತಿದ್ದಾಳೆ ಎನ್ನುವ ಕೋಪದಿಂದ ಆತ ಈ ಕೆಲಸ ಮಾಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?