Video: 30 ಅಡಿ ಉದ್ದದ ವೇಗವಾಗಿ ಹರಿಯುವ ಮೋರಿ​​​ಯೊಳಗೆ ಬಿದ್ದ ಕುಡುಕ, ಪೊಲೀಸರು-ಸ್ಥಳೀಯರಿಂದ ರಕ್ಷಣೆ

|

Updated on: May 25, 2024 | 12:19 PM

ಈ ಕುಡುಕರು ಮಾಡುವ ಅವಾಂತರ ಒಂದೆರಡಲ್ಲ, ಇಂದು ಬೆಳಿಗ್ಗೆ ನೋಯ್ಡಾದಲ್ಲಿ 30 ಅಡಿ ಉದ್ದದ ವೇಗವಾಗಿ ಹರಿಯುವ ಮೋರಿ​​​ಯೊಳಗೆ ಕುಡಿದ ಮತ್ತಿನಲ್ಲಿ ಬಿದ್ದಿದ್ದಾನೆ. ಇದೀಗ ಈ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​​ ಆಗಿದೆ. ಆ ವಿಡಿಯೋ ಇಲ್ಲಿದೆ ನೋಡಿ

Video: 30 ಅಡಿ ಉದ್ದದ ವೇಗವಾಗಿ ಹರಿಯುವ ಮೋರಿ​​​ಯೊಳಗೆ ಬಿದ್ದ ಕುಡುಕ, ಪೊಲೀಸರು-ಸ್ಥಳೀಯರಿಂದ ರಕ್ಷಣೆ
Follow us on

ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ 30 ಅಡ್ಡಿ ಉದ್ದವಾದ ಹಾಗೂ ವೇಗವಾಗಿ ಹರಿಯುವ ಡ್ರೈನ್​​​ ಪೈಪ್​​​​​ನೊಳಗೆ ಬಿದ್ದಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ಇದೀಗ ಆತನನ್ನು ಪೊಲೀಸರು ಹಾಗೂ ಸ್ಥಳೀಯರು ರಕ್ಷಣೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆಯ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಇಂದು ಬೆಳಿಗ್ಗೆ 112ಗೆ ಸ್ಥಳೀಯರು ಕರೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ತಕ್ಷಣದಲ್ಲಿ ಕ್ರಮ ತೆಗೆದುಕೊಂಡು ಘಟನೆ ನಡೆದ ಸ್ಥಳಕ್ಕೆ ಧಾವಿಸಿದ್ದಾರೆ.

ಈ ವಿಡಿಯೋಲದಲ್ಲಿ ಸ್ಥಳೀಯರು ಮತ್ತು ಪೊಲೀಸರು ಆ ಕುಡುಕನ್ನು ಹೇಗೆ ಕಾಪಾಡಲಾಗಿದೆ ಎಂಬುದನ್ನು ನೋಡಬಹುದು. ಡ್ರೈನ್‌ಪೈಪ್‌ನೊಳಗಿಂದ ವ್ಯಕ್ತಿ ಕೂಗಿದ ಶಬ್ದ ಕೇಳಿದ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ನ್ಯಾಯಾಧೀಶರ ಮನೆಯ ನಾಯಿ ಕಳ್ಳತನ; 12 ಜನರ ಮೇಲೆ ಕೇಸು ದಾಖಲು

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ಈ ವಿಡಿಯೋ ಸುಮಾರು 1.4 ಲಕ್ಷ ವೀಕ್ಷಣೆ ಹಾಗೂ 7,800 ಲೈಕ್‌, ಶೇರ್​​​ ಕೂಡ ಮಾಡಲಾಗಿದೆ. ಜತೆಗೆ ಈ ವಿಡಿಯೋ ಅನೇಕರು ಕಮೆಂಟ್​​​ ಕೂಡ ಮಾಡಿದ್ದಾರೆ. ಪೊಲೀಸ್ ಮತ್ತು ಸ್ಥಳೀಯರು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಕಮೆಂಟ್​​ ಮಾಡಿದ್ದಾರೆ. ಪೊಲೀಸರಿಗೆ ಸಹಾಯ ಮಾಡಿದ ಸ್ಥಳೀಯರೇ ನಿಜವಾದ ಹೀರೋಗಳು ಎಂದು ಮತ್ತೊಬ್ಬ ವ್ಯಕ್ತಿ ಕಮೆಂಟ್​​ ಮಾಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ