AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಡಿಯಾ ಬಣಕ್ಕೆ ನಿರ್ಣಾಯಕ ಜನಾದೇಶ ಸಿಕ್ಕಿದೆ, ಗೆದ್ದ 3 ದಿನಗಳಲ್ಲಿ ಪ್ರಧಾನಿ ಹೆಸರು ಘೋಷಣೆ: ಜೈರಾಮ್ ರಮೇಶ್

ಇಂಡಿಯಾ ಒಕ್ಕೂಟಕ್ಕೆ ನಿರ್ಣಯಕ ಜನಾದೇಶ ಈಗಾಗಲೇ ಸಿಕ್ಕಿದೆ. ಈ ಬಗ್ಗೆ ಪ್ರಧಾನಿ ಮೋದಿ ಹಾಗೂ ಬಿಜೆಪಿಗೆ ಭಯ ಹುಟ್ಟಿದೆ. ಇದಕ್ಕಾಗಿ ಅವರು ಕೋಮು ಸ್ಪರ್ಶ ನೀಡುತ್ತಿದ್ದಾರೆ,. ಇದು ದೊಡ್ಡ ಸಮಸ್ಯೆಯಾಗಿದೆ. ಇಂಡಿಯಾ ಬಣ ಅಧಿಕಾರಕ್ಕೆ ಬಂದ 3 ದಿನದಲ್ಲಿ ಪ್ರಧಾನಿ ಆಯ್ಕೆ ಆಗುತ್ತಾರೆ ಎಂದು ಕಾಂಗ್ರೆಸ್ ಸಂವಹನದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ಇಂಡಿಯಾ ಒಕ್ಕೂಟ ಗೆದ್ದರೆ ಯಾರು ಪ್ರಧಾನಿ ಆಗಲಿದ್ದಾರೆ? ಜೈರಾಮ್ ರಮೇಶ್ ಅವರ ಮಾತಿ ಮರ್ಮವೇನು?

ಇಂಡಿಯಾ ಬಣಕ್ಕೆ ನಿರ್ಣಾಯಕ ಜನಾದೇಶ ಸಿಕ್ಕಿದೆ, ಗೆದ್ದ 3 ದಿನಗಳಲ್ಲಿ ಪ್ರಧಾನಿ ಹೆಸರು ಘೋಷಣೆ: ಜೈರಾಮ್ ರಮೇಶ್
ಅಕ್ಷಯ್​ ಪಲ್ಲಮಜಲು​​
|

Updated on:May 25, 2024 | 10:59 AM

Share

ದೆಹಲಿ, ಮೇ.25: ಇಂದು ಆರನೇ ಹಂತದ ಚುನಾವಣೆ ನಡೆಯುತ್ತಿದೆ. ಜೂನ್​​​ 4ಕ್ಕೆ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುದು ಸ್ಪಷ್ಟವಾಗಲಿದೆ. ಇದರ ಮಧ್ಯೆ ಕಾಂಗ್ರೆಸ್ ಸಂವಹನದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ, ಇಂಡಿಯಾ ಒಕ್ಕೂಟ ಸ್ಪಷ್ಟ ಬಹುಮತವನ್ನು ಸಾಧಿಸಲಿದೆ. ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ಐದು ಪ್ರಧಾನಿಗಳನ್ನು ಹೊಂದಲಿದೆ ಎಂಬ ಪ್ರಧಾನಿ (ಪಿಎಂ) ನರೇಂದ್ರ ಮೋದಿ ಅವರ ಹೇಳಿಕೆಯನ್ನು ಟೀಕಿಸಿದ ಅವರು, ಇಂಡಿಯಾ ಒಕ್ಕೂಟ ಐದು ವರ್ಷಗಳವರೆಗೆ ಒಬ್ಬ ವ್ಯಕ್ತಿಯನ್ನು ಪ್ರಧಾನಿಯನ್ನಾಗಿ ಮಾಡುತ್ತದೆ ಎಂದು ಹೇಳಿದರು. 2004ರಲ್ಲಿ ಫಲಿತಾಂಶ ಪ್ರಕಟವಾದ ಮೂರು ದಿನಗಳಲ್ಲಿ ಪ್ರಧಾನಿಯನ್ನು ಆಯ್ಕೆ ಮಾಡುತ್ತೇವೆ ಎಂದು ಹೇಳಿದರು.

ಈ ಹಿಂದೆ ಪ್ರಧಾನಿ ಮನಮೋಹನ್​​​ ಸಿಂಗ್​​ ಹೇಗೆ ಮೂರೇ ದಿನದಲ್ಲಿ ಪ್ರಧಾನಿಯಾಗಿ ಆಯ್ಕೆ ಆದ್ರೂ ಹಾಗೆ ಇಂಡಿಯಾ ಒಕ್ಕೂಟ ಒಬ್ಬರನ್ನು ಪ್ರಧಾನಿ ಮಾಡಲಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಮೇಶ್, ಮೊದಲ ಎರಡು ಹಂತದ ಚುನಾವಣೆಯ ಟ್ರೆಂಡ್‌ಗಳು ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಸರ್ಕಾರ ರಚನೆಗೆ ಮಾಡಲಿದೆ ಎಂದು ಹೇಳಲಾಗಿತ್ತು. ಈ ಟ್ರೆಂಡ್​​​ ಶುರುವಾದ ನಂತರ ಅಂದರೆ ಎಪ್ರಿಲ್ 19ರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಮಾತು ಬದಲಾಗಿದೆ, ಅವರು ತಮ್ಮ ಚುನಾವಣಾ ತಂತ್ರಕ್ಕೆ ಕೋಮು ಸ್ಪರ್ಶವನ್ನು ನೀಡಲು ಪ್ರಾರಂಭಿಸಿದ್ದಾರೆ. ಎಲ್ಲದಲ್ಲೂ ಹಿಂದೂ-ಮುಸ್ಲಿಂ ವಿಚಾರವನ್ನು ತಂದು ಸಮಸ್ಯೆಯನ್ನು ಸೃಷ್ಟಿಸುತ್ತಿದ್ದಾರೆ. ಇಪ್ಪತ್ತು ವರ್ಷಗಳ ನಂತರ ಇತಿಹಾಸ ಮರುಕಳಿಸುತ್ತಿದೆ. ಅಂದು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬಂದಂತೆ, ಈ ಬಾರಿಯೂ ಅಧಿಕಾರಕ್ಕೆ ಬರಲಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಇದನ್ನೂ ಓದಿ: 24 ವರ್ಷದ ಹಿಂದಿನ ಮಾನನಷ್ಟ ಪ್ರಕರಣ; ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅಪರಾಧಿ

ಭಾರತದಂತಹ ಸಂಸದೀಯ ಪ್ರಜಾಪ್ರಭುತ್ವದಲ್ಲಿ, ಚುನಾವಣೆಗಳು ವೈಯಕ್ತಿಕ ಕೇಂದ್ರವಾಗಿ ಹೋಗಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ ಜೊತೆಗೆ ಬೆಳೆಗಳ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಸ್ಥಾನಮಾನವನ್ನು ಖಾತರಿಪಡಿಸಿದೆ. ಕಾರ್ಮಿಕರಿಗೆ ಕನಿಷ್ಠ ದಿನಗೂಲಿಯನ್ನು ₹ 250 ರಿಂದ ₹ 400 ಕ್ಕೆ ಹೆಚ್ಚಿಸಲಾಗುವುದು ಎಂದು ಅವರು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:55 am, Sat, 25 May 24