ಭೋಪಾಲ್: ವ್ಯಕ್ತಿಯೊಬ್ಬ ಸರೋವರಕ್ಕೆ ನಾಯಿಯನ್ನು ಎಸೆಯುವ ವಿಡಿಯೋ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಕೆದಾರರು, ಭೋಪಾಲ್‌ನ ಭಡಾ ತಾಲಾಬ್ ತೀರದಲ್ಲಿ ವಿಡಿಯೋ ಚಿತ್ರೀಕರಿಸಲಾಗಿದೆ ಎಂದು ಹೇಳಿದ್ದಾರೆ.
ಸಲ್ಮಾನ್ ಎಂಬ ವ್ಯಕ್ತಿ ಈ ಕೃತ್ಯ ಎಸಗಿದ್ದು, ಭಾನುವಾರ ವಿಡಿಯೋ ವೈರಲ್ ಆದ ನಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಈ ವ್ಯಕ್ತಿ ತನ್ನ ಹತ್ತಿರ ತಿರುಗಾಡುತ್ತಿರುವ ಎರಡು ನಾಯಿಗಳಲ್ಲಿ ಒಂದನ್ನು ಎತ್ತಿಕೊಂಡು ಅದನ್ನು ಸರೋವರಕ್ಕೆ ಎಸೆದಿದ್ದಾನೆ.
ಭೋಪಾಲ್ ಉಪ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಇರ್ಷಾದ್ ವಾಲಿ ವಿಡಿಯೋವನ್ನು ಗಮನಿಸಿದ್ದು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ್ಸನೇಹಿ ಮಿಶ್ರಾ ಅವರು ಭಾರತೀಯ ದಂಡ ಸಂಹಿತೆ ಸೆಕ್ಷನ್ 429 (ಯಾವುದೇ ಪ್ರಾಣಿಗಳನ್ನು ಕೊಲ್ಲುವ ಅಥವಾ ದುರ್ಬಲಗೊಳಿಸುವ ಮೂಲಕ ಕಿಡಿಗೇಡಿತನ) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.
ಮೇಲ್ ಸರೋವರದ ಬೋಟ್ ಕ್ಲಬ್ ರಸ್ತೆಯಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ ಎಂದು ತೋರುತ್ತದೆ ಎಂದು ಮಿಶ್ರಾ ಹೇಳಿದ್ದಾರೆ. ನೆಟ್ಟಿಗರು ಈ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 429 ಅಡಿ ಸಲ್ಮಾನ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
Hope this man named ‘Salman Khan’ is caught & is punished for his cruelty. He threw a dog in Upper Lake in Bhopal only for fun. Look at how he giggles after throwing the dog in the lake. A case is registered against him. https://t.co/wNF6CzETNQ pic.twitter.com/j8XCuNUXu5
— Abby Raghuvanshi (@Abby_Eagle619) September 14, 2020