Video: ಸಂಸತ್ತಿನ ಒಳಗೆ ಸಿಗರೇಟ್ ಸೇದಿದ್ರಾ ಟಿಎಂಸಿ ಸಂಸದ? ಬಿಜೆಪಿ ಹಂಚಿಕೊಂಡ ವಿಡಿಯೋದಲ್ಲೇನಿದೆ?
ಸಂಸತ್ತಿನ ಒಳಗೆ ಟಿಎಂಸಿ ಸಂಸದರೊಬ್ಬರು ಸಿಗರೇಟ್ ಸೇದಿರುವ ಘಟನೆ ವರದಿಯಾಗಿದೆ. ಕೆಲವು ದಿನಗಳ ಹಿಂದೆ ಬಿಜೆಪಿ ಸಂಸದ ಅನುರಾಗ್ ಠಾಕೂರ್, ಸಂಸತ್ತಿನ ಕಟ್ಟಡದೊಳಗೆ ಒಬ್ಬ ನಾಯಕರು ಇ-ಸಿಗರೇಟ್ ಸೇದುತ್ತಿದ್ದಾರೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ನೀಡಿದ್ದರು.ಈಗ, ಬುಧವಾರ, ಬಿಜೆಪಿ ಈ ಘಟನೆಯ ವೀಡಿಯೊವನ್ನು ಹಂಚಿಕೊಂಡಿದೆ.ವೀಡಿಯೊದಲ್ಲಿ ಟಿಎಂಸಿ ಸಂಸದ ಕೀರ್ತಿ ಆಜಾದ್ ಇ-ಸಿಗರೇಟ್ ಸೇದುತ್ತಿರುವುದನ್ನು ತೋರಿಸಲಾಗಿದೆ.
ನವದೆಹಲಿ, ಡಿಸೆಂಬರ್ 18: ಸಂಸತ್ತಿನ ಒಳಗೆ ಟಿಎಂಸಿ ಸಂಸದರೊಬ್ಬರು ಸಿಗರೇಟ್ ಸೇದಿರುವ ಘಟನೆ ವರದಿಯಾಗಿದೆ. ಕೆಲವು ದಿನಗಳ ಹಿಂದೆ ಬಿಜೆಪಿ ಸಂಸದ ಅನುರಾಗ್ ಠಾಕೂರ್, ಸಂಸತ್ತಿನ ಕಟ್ಟಡದೊಳಗೆ ಒಬ್ಬ ನಾಯಕರು ಇ-ಸಿಗರೇಟ್ ಸೇದುತ್ತಿದ್ದಾರೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ನೀಡಿದ್ದರು.ಈಗ, ಬುಧವಾರ, ಬಿಜೆಪಿ ಈ ಘಟನೆಯ ವೀಡಿಯೊವನ್ನು ಹಂಚಿಕೊಂಡಿದೆ.ವೀಡಿಯೊದಲ್ಲಿ ಟಿಎಂಸಿ ಸಂಸದ ಕೀರ್ತಿ ಆಜಾದ್ ಇ-ಸಿಗರೇಟ್ ಸೇದುತ್ತಿರುವುದನ್ನು ತೋರಿಸಲಾಗಿದೆ.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಈ ವಿಡಿಯೋವನ್ನು ಹಂಚಿಕೊಂಡಿದ್ದರು, ಸಂಸತ್ತಿನೊಳಗೆ ಸಿಗರೇಟ್ ಸೇದುವುದು ಸ್ವೀಕಾರಾರ್ಹವಲ್ಲ ಎಂದು ಬರೆದಿದ್ದಾರೆ.ಇದಕ್ಕೂ ಮೊದಲು, ಸಂಸತ್ ಭವನದೊಳಗೆ ಎಲೆಕ್ಟ್ರಾನಿಕ್ ಸಿಗರೇಟ್ ಬಳಸಲಾಗುತ್ತಿದೆ ಎಂದು ಸಂಸದರೊಬ್ಬರ ವಿರುದ್ಧ ಅನುರಾಗ್ ಠಾಕೂರ್ ಓಂ ಬಿರ್ಲಾ ಅವರಿಗೆ ದೂರು ಪತ್ರ ಬರೆದಿದ್ದರು.ಟಿಎಂಸಿ ಸಂಸದ ಸೌಗತ ಅವರು ಸಂಸತ್ತಿನ ಸಂಕೀರ್ಣದಲ್ಲಿ ಸಿಗರೇಟ್ ಸೇದುತ್ತಿರುವುದು ಕಂಡುಬಂದಿತ್ತು. ಭಾರತದಲ್ಲಿ ಇ-ಸಿಗರೇಟ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಎನ್ಡಿಎ ಸರ್ಕಾರದ ಎರಡನೇ ಅವಧಿಯಲ್ಲಿ ನಿಷೇಧ ಹೇರಲಾಯಿತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ