AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಹರುಗೆ ಸಂಬಂಧಿಸಿದ ದಾಖಲೆಗಳು ಕಾಣೆಯಾಗಿರಲಿಲ್ವಾ? ಗಜೇಂದ್ರ ಶೇಖಾವತ್ ಹೇಳಿದ್ದೇನು? ಸೋನಿಯಾ ಕುರಿತು ಚರ್ಚೆ ಶುರು

ಪಂಡಿತ್ ನೆಹರು ಅವರ ದಾಖಲೆಗಳು ಕಾಣೆಯಾಗಿಲ್ಲ, ಬದಲಾಗಿ ಸೋನಿಯಾ ಗಾಂಧಿ ಬಳಿ ಇವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ದಾಖಲೆಗಳು ದೇಶದ ಐತಿಹಾಸಿಕ ಪರಂಪರೆಯಾಗಿದ್ದು, ಅವುಗಳನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಬೇಕು ಎಂದು ಸಚಿವ ಗಜೇಂದ್ರ ಶೇಖಾವತ್ ಒತ್ತಾಯಿಸಿದ್ದಾರೆ. ಇದು ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಸರ್ಕಾರವು ಸೋನಿಯಾ ಗಾಂಧಿಗೆ ದಾಖಲೆಗಳನ್ನು ಮರಳಿಸುವಂತೆ ಸೂಚಿಸಿದೆ.

ನೆಹರುಗೆ ಸಂಬಂಧಿಸಿದ ದಾಖಲೆಗಳು ಕಾಣೆಯಾಗಿರಲಿಲ್ವಾ? ಗಜೇಂದ್ರ ಶೇಖಾವತ್ ಹೇಳಿದ್ದೇನು? ಸೋನಿಯಾ ಕುರಿತು ಚರ್ಚೆ ಶುರು
ಸೋನಿಯಾ ಗಾಂಧಿ-ನೆಹರು
ನಯನಾ ರಾಜೀವ್
|

Updated on:Dec 18, 2025 | 11:23 AM

Share

ನವದೆಹಲಿ, ಡಿಸೆಂಬರ್ 18: ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು(Jawaharlal Nehru)ಅವರಿಗೆ ಸಂಬಂಧಿಸಿದ ದಾಖಲೆಗಳು ಕಾಣೆಯಾಗಿವೆ ಎಂಬ ಚರ್ಚೆಗೆ ಕೇಂದ್ರ ಸರ್ಕಾರ ಅಂತ್ಯ ಹಾಡಿದೆ. ಪಂಡಿತ್ ನೆಹರು ಅವರ ದಾಖಲೆಗಳು ಕಾಣೆಯಾಗಿಲ್ಲ, ಆದರೆ ಅವು ಸೋನಿಯಾ ಗಾಂಧಿ ಬಳಿ ಇದೆ ಎಂದು ಸ್ಪಷ್ಟಪಡಿಸಿದೆ. ಈಗ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಹೊಸ ರಾಜಕೀಯ  ಚರ್ಚೆ  ಸೃಷ್ಟಿಯಾಗಿದೆ, ಮತ್ತು ಸರ್ಕಾರ ಸೋನಿಯಾ ಗಾಂಧಿ ಅವರಿಗೆ ಈ ದಾಖಲೆಗಳನ್ನು ಹಿಂತಿರುಗಿಸಲು ಸೂಚಿಸಿದೆ.

ಕೆಲವು ದಿನಗಳ ಹಿಂದೆ, ಪ್ರಧಾನಿಯವರ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದಿಂದ ಪಂಡಿತ್ ನೆಹರು ಅವರ ಪ್ರಮುಖ ದಾಖಲೆಗಳು ಕಾಣೆಯಾಗಿವೆ ಎಂದು ಆರೋಪಿಸಲಾಗಿತ್ತು. ಸಂಸತ್ತಿನಲ್ಲಿ ಬಿಜೆಪಿ ಸಂಸದ ಸಂಬಿತ್ ಪಾತ್ರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, 2025 ರ ವಾರ್ಷಿಕ ಲೆಕ್ಕಪರಿಶೋಧನೆಯಲ್ಲಿ ಒಂದೇ ಒಂದು ದಾಖಲೆಯೂ ಕಾಣೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ನೀವು 2008ರಲ್ಲಿ ದಾಖಲೆಗಳನ್ನು ತೆಗೆದುಕೊಂಡಿದ್ದಾರಾ? ಸಂಸ್ಕೃತಿ ಸಚಿವಾಲಯವು ಈ ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ಏಪ್ರಿಲ್ 29, 2008 ರಂದು, ಸೋನಿಯಾ ಗಾಂಧಿಯವರ ಪ್ರತಿನಿಧಿ ಎಂ.ವಿ. ರಾಜನ್ ಅವರು ನೆಹರು ಅವರಿಗೆ ಸಂಬಂಧಿಸಿದ ಖಾಸಗಿ ಕುಟುಂಬ ಪತ್ರಗಳು ಮತ್ತು ದಾಖಲೆಗಳನ್ನು ಹಿಂತಿರುಗಿಸುವಂತೆ ಕೋರಿ ಪತ್ರ ಬರೆದಿದ್ದರು.

ಈ ವಿನಂತಿಯ ಬಳಿಕ, ಆಗಿನ ಸರ್ಕಾರವು ನೆಹರು ಅವರ ಖಾಸಗಿ ದಾಖಲೆಗಳ 51 ಪೆಟ್ಟಿಗೆಗಳನ್ನು ಸೋನಿಯಾ ಗಾಂಧಿಯವರಿಗೆ ಹಸ್ತಾಂತರಿಸಿತ್ತು. ಪಿಎಂಎಂಎಲ್ ಜನವರಿ 28, 2025 ಮತ್ತು ಜುಲೈ 3, 2025 ರಂದು ಸೋನಿಯಾ ಗಾಂಧಿಯವರ ಕಚೇರಿಗೆ ಈ ದಾಖಲೆಗಳನ್ನು ಹಿಂದಿರುಗಿಸುವಂತೆ ಸೂಚನೆ ನೀಡಿದೆ. ಆದರೆ ಅವುಗಳನ್ನು ಇನ್ನೂ ಹಿಂತಿರುಗಿಸಲಾಗಿಲ್ಲ.

ಮತ್ತಷ್ಟು ಓದಿ: ಇತಿಹಾಸದ ಪುಟ ಸೇರಲಿದೆ ಜವಾಹರಲಾಲ್ ನೆಹರು ಕ್ರೀಡಾಂಗಣ

ಇದು ದೇಶದ ಪರಂಪರೆ, ಖಾಸಗಿ ಆಸ್ತಿಯಲ್ಲ

ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಸೋನಿಯಾ ಗಾಂಧಿಯವರ ಮೇಲೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ನೆಹರು ಅವರ ದಾಖಲೆಗಳು ಭಾರತದ ಐತಿಹಾಸಿಕ ಪರಂಪರೆ, ಅವು ಯಾರ ಖಾಸಗಿ ಆಸ್ತಿಯಾಗಲು ಸಾಧ್ಯವಿಲ್ಲ. ಸೋನಿಯಾ ಗಾಂಧಿ ದೇಶದಿಂದ ಏನನ್ನು ಮರೆಮಾಡುತ್ತಿದ್ದಾರೆ? ಈ ದಾಖಲೆಗಳು ಸಾರ್ವಜನಿಕ ವಸ್ತುಸಂಗ್ರಹಾಲಯದಲ್ಲಿರಬೇಕು, ಇದರಿಂದ ಸಂಶೋಧಕರು ಮತ್ತು ನಾಗರಿಕರು ಅವುಗಳನ್ನು ನೋಡಬಹುದು ಎಂದು ಶೇಖಾವತ್ ಹೇಳಿದರು.

ಸಂಸತ್ತಿನಲ್ಲಿದಾಖಲೆಗಳು ಕಾಣೆಯಾಗಿಲ್ಲ ಎಂಬ ಉತ್ತರ ಬಂದ ನಂತರ, ಸರ್ಕಾರ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿತು. ದಾಖಲೆಗಳು ಕಾಣೆಯಾಗಿಲ್ಲ ಏಕೆಂದರೆ ಅವು ಯಾರ ಬಳಿ ಇವೆ ಎಂದು ನಮಗೆ ತಿಳಿದಿದೆ ಎಂದು ಹೇಳುವ ಮೂಲಕ ಚೆಂಡನ್ನು ಮತ್ತೆ ಕಾಂಗ್ರೆಸ್ ಅಂಗಳಕ್ಕೆ ಸರ್ಕಾರ ಎಸೆದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:19 am, Thu, 18 December 25