Video: ಪ್ರಿಯಕರನ ಜತೆ ಬೈಕ್​​ ಟ್ಯಾಂಕ್​​ನಲ್ಲಿ ಕುಳಿತು ಜಾಲಿ ರೈಡ್​​ ಹೋದ ಪ್ರೇಯಸಿ, ಇದೆಂತಹ ಹುಚ್ಚಾಟ ಎಂದ ನೆಟ್ಟಿಗರು

|

Updated on: Jun 21, 2023 | 5:13 PM

ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನು ಬೈಕ್​​ನ​​​ ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿಕೊಂಡು ಹೋಗಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಇಂದಿರಾಪುರಂ ಪ್ರದೇಶದಲ್ಲಿ ನಡೆದಿದೆ. ಇದೀಗ ಈ ವೀಡಿಯೊ ವೈರಲ್​ ಆಗಿದೆ.

Video: ಪ್ರಿಯಕರನ ಜತೆ ಬೈಕ್​​ ಟ್ಯಾಂಕ್​​ನಲ್ಲಿ ಕುಳಿತು ಜಾಲಿ ರೈಡ್​​ ಹೋದ ಪ್ರೇಯಸಿ, ಇದೆಂತಹ ಹುಚ್ಚಾಟ ಎಂದ ನೆಟ್ಟಿಗರು
ವೈರಲ್​ ವೀಡಿಯೊ
Follow us on

ಪ್ರೀತಿ ಎಂದರೆ ಒಂದು ಸುಂದರ ಜಗತ್ತು, ಎಲ್ಲರಿಗೂ ಪ್ರೀತಿ ಆಗುವುದು ಸಹಜ, ಪ್ರೀತಿಸಿದವರ ಜತೆಗೆ ನಾವು ಹೇಗೆಲ್ಲ ಬದುಕಬೇಕು ಎಂಬ ಆಸೆ ಇರುತ್ತದೆ. ಆದರೆ ಕೆಲವೊಂದು ಪ್ರೇಮಿಗಳು ಹುಚ್ಚುತನವನ್ನು ಮಾಡುತ್ತಾರೆ. ಈ ಪ್ರೀತಿ ಎನ್ನುವುದು ಒಂದು ರೀತಿಯ ಅಮಲು ಎಂಬುದಂತೆ ವರ್ತಿಸುತ್ತಾರೆ. ಹೌದು ಇದಕ್ಕೆ ಒಂದು ಸ್ಪಷ್ಟ ಸಾಕ್ಷಿ ಇಲ್ಲಿದೆ ನೋಡಿ. ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನು ಬೈಕ್​​ನ​​​ ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿಕೊಂಡು ಹೋಗಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಇಂದಿರಾಪುರಂ ಪ್ರದೇಶದಲ್ಲಿ ನಡೆದಿದೆ, ಇದೀಗ ಈ ವೀಡಿಯೊ ಎಲ್ಲ ಕಡೆ ವೈರಲ್​​ ಆಗಿದೆ. ಪ್ರೇಮಿ ತನ್ನ ಹುಡುಗಿಯನ್ನು ಬೈಕ್​​ನ ಟ್ಯಾಂಕ್ ಮೇಲೆ ಕೂರಿಸಿಕೊಂಡು, ಆಕೆ ಆತನನ್ನು ಅಪ್ಪಿಕೊಂಡಿರುವ ವೀಡಿಯೊ ಎಲ್ಲ ಕಡೆ ವೈರಲ್ ಆಗಿದೆ.

ವೀಡಿಯೊವನ್ನು ರಾತ್ರಿ ಹೊತ್ತಿನಲ್ಲಿ ರೆಕಾರ್ಡ್​​ ಮಾಡಲಾಗಿದ್ದು. ಬೈಕ್​​ನ ಹಿಂದೆ ಕಾರಿನಲ್ಲಿದ್ದ ವ್ಯಕ್ತಿ ಈ ವೀಡಿಯೊವನ್ನು ಚಿತ್ರಿಕರಣ ಮಾಡಿದ್ದಾನೆ. ಬೈಕ್​​ ಸವಾರ ಹೈವೆ ನಿಯಮದ ಜತೆಗೆ ಟ್ರಾಫಿಕ್​​ ನಿಯಮವನ್ನು ಕೂಡ ಉಲ್ಲಂಘನೆ ಮಾಡಿದ್ದಾನೆ, ಬೈಕ್​​ ಸವಾರಿ ಮಾಡುವಾಗ ಹೆಲ್ಮೆಟ್​​ ಕೂಡ ಹಾಕಿಲ್ಲ ಎಂದು ಹೇಳಲಾಗಿದೆ. ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರಿ ಪ್ರೇಮ ಜೋಡಿ ಈ ‘ರೊಮ್ಯಾಂಟಿಕ್ ಸ್ಟಂಟ್’ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತಿದೆ ಎಂದು ಪೊಲೀಸರಿಗೂ ದೂರು ನೀಡಲಾಗಿದೆ.

ಇದನ್ನೂ ಓದಿ: Video News: ದೆಹಲಿ ಮೆಟ್ರೋದಲ್ಲಿ ಹಸ್ತಮೈಥುನ ಮಾಡಿಕೊಂಡ ಯುವಕ, ತೀವ್ರ ಕಳವಳ ವ್ಯಕ್ತಪಡಿಸಿದ ಸ್ವಾತಿ ಮಲಿವಾಲ್

@Akashkchoudhary ಎಂಬ ಟ್ವಿಟರ್​ ​ಖಾತೆಯಲ್ಲಿ ಆಕಾಶ್ ಕುಮಾರ್ ಎಂಬವವರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ನಾವು ನಿಯಮಗಳು ಮತ್ತು ನಿಬಂಧನೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಸುತ್ತೇವೆ. ನಿಮ್ಮ ಇಂತಹ ಹುಚ್ಚಾಟದಿಂದ ನಿಮ್ಮೊಂದಿಗೆ ನಾವು ಸಾಯುತ್ತೇವೆ. ಬಳಕೆದಾರರ ಪ್ರಕಾರ, ವೈರಲ್ ಕ್ಲಿಪ್ ಇಂದಿರಾಪುರಂನ NH 9 ನಿಂದ ವೈರಲ್​​ ಆಗಿದೆ ಎಂದು ಹೇಳಲಾಗಿದೆ.

ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್​​ ಆಗಿದ್ದು, ಹೆಚ್ಚಿನ ಜನರು ಯುಪಿ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ ಮತ್ತು ಪ್ರೀತಿಯ ಜೋಡಿಯ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಪೊಲೀಸರಿಂದ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ವೈರಲ್ ಕ್ಲಿಪ್ ನೋಡಿ ಬಳಕೆದಾರರು ಕಮೆಂಟ್ ಮಾಡಿದ್ದು ಮತ್ತು ಬುಲ್ಡೋಜರ್ ಬಾಬಾನ ಪೊಲೀಸರು ಈಗ ಎಲ್ಲಿದ್ದಾರೆ? ಮತ್ತೊಂದೆಡೆ, ಪೊಲೀಸರು ತಕ್ಕ ಪಾಠ ಕಲಿಸುವವರೆಗೆ ಈ ಜನರು ಸುಧಾರಿಸುವುದಿಲ್ಲ ಎಂದು ಇನ್ನೊಬ್ಬ ಬಳಕೆದಾರರು ಹೇಳುತ್ತಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ;