Video Viral: ಕೊಳೆಯಾಗಿದ್ದ ಶಾಲಾ ಶೌಚಾಲಯವನ್ನು ಬರಿಗೈಯಲ್ಲಿ ಸ್ವಚ್ಛ ಮಾಡಿದ ಸಂಸದ ಜನಾರ್ದನ್ ಮಿಶ್ರಾ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 23, 2022 | 6:25 PM

ರೇವಾದ ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಅವರು ತಮ್ಮ ಸ್ವಚ್ಛತಾ ಅಭಿಯಾನಕ್ಕಾಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ರೇವಾ ಸಂಸದನ ವಿಡಿಯೋವೊಂದು ಅಂತರ್ಜಾಲ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

Video Viral: ಕೊಳೆಯಾಗಿದ್ದ ಶಾಲಾ ಶೌಚಾಲಯವನ್ನು ಬರಿಗೈಯಲ್ಲಿ ಸ್ವಚ್ಛ ಮಾಡಿದ ಸಂಸದ ಜನಾರ್ದನ್ ಮಿಶ್ರಾ
Janardan Mishra
Follow us on

ಮಧ್ಯಪ್ರದೇಶ: ತಮ್ಮ ವಿಭಿನ್ನ ಶೈಲಿಗೆ ಹೆಸರುವಾಸಿಯಾಗಿರುವ ರೇವಾದ ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಅವರು ತಮ್ಮ ಸ್ವಚ್ಛತಾ ಅಭಿಯಾನಕ್ಕಾಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ರೇವಾ ಸಂಸದನ ವಿಡಿಯೋವೊಂದು ಅಂತರ್ಜಾಲ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ರೇವಾ ಸಂಸದ ಜನಾರ್ದನ್ ಮಿಶ್ರಾ ಅವರು ಪಕ್ಷದ ವತಿಯಿಂದ ನಡೆಸುತ್ತಿರುವ ಸೇವಾ ಪಖವಾಡದ ಅಡಿಯಲ್ಲಿ ಬಾಲಕಿಯರ ಶಾಲೆಯ ಖತ್ಖಾರಿಯಲ್ಲಿ ಯುವ ಮೋರ್ಚಾ ಆಯೋಜಿಸಿದ್ದ ಮರ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದರು.

ಗಿಡ ನೆಡುವ ಕಾರ್ಯಕ್ರಮದ ನಂತರ ಶಾಲೆಯ ಶೌಚಾಲಯ ತುಂಬಾ ಕೊಳಕಾಗಿದೆ, ಅದನ್ನು ಬಳಸಲು ತುಂಬಾ ಕಷ್ಟವಾಗಿದೆ ಎಂದು ತಿಳಿದಾಗ, ಅವರು ಬ್ರಷ್‌ಗೆ ಕಾಯದೆ ಬಕೆಟ್‌ನಲ್ಲಿ ನೀರು ತೆಗೆದುಕೊಂಡು ಶೌಚಾಲಯವನ್ನು ಕೈಯಿಂದ ಉಜ್ಜಿದರು. ಈ ಕಾರ್ಯದಲ್ಲಿ ಯಾರ ಸಹಾಯವನ್ನೂ ಪಡೆಯದೆ ಸಂಪೂರ್ಣ ಶ್ರದ್ಧೆಯಿಂದ ಒಬ್ಬರೇ ಈ ಕೆಲಸವನ್ನು ಮಾಡಿದ್ದಾರೆ. ಇದನ್ನು ನೋಡಿ ಎಲ್ಲರೂ ಬೆಚ್ಚಿಬಿದ್ದರು. ಸ್ವಚ್ಛ ಭಾರತ ಸಂದೇಶ ನೀಡಿದ ಸಂಸದರು ಸ್ವಚ್ಛತೆ ಕಾಪಾಡುವಂತೆ ಸಲಹೆ ನೀಡಿದರು. ಈ ರೀತಿ ಕ್ಲೀನ್ ಮಾಡುತ್ತಿರುವ ವಿಡಿಯೋ ಇದೀಗ ಅಂತರ್ಜಾಲ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅವರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಇತರರನ್ನು ಟ್ಯಾಗ್ ಮಾಡಿದ್ದಾರೆ. ಕ್ಲೀನ್ ಮಾಡುವ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸುದ್ದಿಯಾಗಿದ್ದಾರೆ.

ಈ ಹಿಂದೆಯೂ ಇಂತಹ ವಿಡಿಯೋಗಳು ವೈರಲ್ ಆಗಿವೆ. ಈ ಹಿಂದೆಯೂ ಈ ರೀತಿ ಟಾಯ್ಲೆಟ್ ಶುಚಿಗೊಳಿಸಿದ್ದು ಸುದ್ದಿಯಾಗಿತ್ತು. ಖಜುಹಾ ಗ್ರಾಮದ ಕೊಳಕು ಶಾಲೆಯ ಶೌಚಾಲಯಗಳನ್ನು ತಮ್ಮ ಕೈಗಳಿಂದ ಸ್ವಚ್ಛಗೊಳಿಸಿದ್ದು ಎಲ್ಲ ಕಡೆ ವೈರಲ್ ಆಗುತ್ತಿದೆ. ಕರೋನಾ ಸಮಯದಲ್ಲೂ ಮೌಗಂಜ್ ಜಿಲ್ಲೆಯ ಸೆಮರಿಯಾ ಪಂಚಾಯತ್‌ನ ಕುಂಜ್ ಬಿಹಾರಿ ಅವರು ಕ್ವಾರಂಟೈನ್ ಕೇಂದ್ರವನ್ನು ಪರಿಶೀಲಿಸುವಾಗ ಕೊಳಕು ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಮೂಲಕ ವೈರಲ್ ಆಗಿತ್ತು.

 

Published On - 6:25 pm, Fri, 23 September 22