ರಾಜಸ್ಥಾನ: ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯಲ್ಲಿ ಸೈಕಲ್ನಲ್ಲಿ ಹೋಗುತ್ತಿದ್ದ ಇಬ್ಬರು ಮಕ್ಕಳಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಘಟನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋದಲ್ಲಿ ಇಬ್ಬರು ಮಕ್ಕಳು ಸೈಕಲ್ನಲ್ಲಿ ಹೋಗುತ್ತಿರುವಾಗ ಒಂದು ಕಾರು ವೇಗವಾಗಿ ಬಂದು ಡಿಕ್ಕಿ ಹೋಡೆಯುತ್ತಿರುವ ದೃಶ್ಯವನ್ನು ಈ ವಿಡಿಯೋದಲ್ಲಿ ಕಾಣಬಹುದು. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಮಕ್ಕಳು ಮೇಲೆಕ್ಕೆ ಹಾರಿ ರಸ್ತೆಗೆ ಬದಿಯಲ್ಲಿ ಹೋಗಿ ಬೀಳುತ್ತಾರೆ.
#Watch राजस्थान के हनुमानगढ़ से एक वीभत्स हादसे का वीडियो सामने आया है। यहां एक तेज रफ्तार कार ने साइकल चला रहे दो बच्चों को टक्कर मार दी। हादसे में दोनों बच्चे बुरी तरह से घायल हो गए। pic.twitter.com/d5UFUlkalR
ಇದನ್ನೂ ಓದಿ— Hindustan (@Live_Hindustan) August 20, 2022
ಹನುಮಾನ್‌ಗಢದ ನೋಹರ್‌ನ ಜಸಾನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಲೈವ್ ಹಿಂದೂಸ್ತಾನ್ ವರದಿ ತಿಳಿಸಿದೆ. ಈ ಇಬ್ಬರು ಮಕ್ಕಳು ಜಿಲ್ಲೆಯ ಫೆಫಾನಾ ಗ್ರಾಮದ ನಿವಾಸಿಗಳು.
ಸಿಸಿಟಿವಿಯಲ್ಲಿ ಸೆರೆಯಾಗಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವೀಡಿಯೊದ ಪ್ರಕಾರ, ಮಕ್ಕಳು – ರಾಬಿನ್ (10) ಮತ್ತು ಸುರೇಂದ್ರ (12) ಎಂದು ಗುರುತಿಸಲಾಗಿದೆ. ಒಂದು ಕಡೆಯಿಂದ ಅಡ್ಡ ರಸ್ತೆಯಲ್ಲಿ ಬಂದ ಮಕ್ಕಳು ಮತ್ತೊಂದು ಕಡೆಯಿಂದ ವೇಗವಾಗಿ ಬರುತ್ತಿದ್ದ ಕಾರು, ಒಂದಕ್ಕೊಂದು ಮುಖ-ಮುಖಿಯಾಗಿದೆ. ಕಾರು ವೇಗವಾಗಿ ಬಂದು ಡಿಕ್ಕಿ ಹೊಡೆದ ಕಾರಣ ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಮತ್ತೊಂದು ಸೈಕಲ್ನಲ್ಲಿ ಬಂದ ಸ್ನೇಹಿತ ಅವರನ್ನು ಕಾಪಾಡಲು ಹತ್ತಿರಕ್ಕೆ ಬರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕಾರಿನ ಡ್ರೈವರ್ ನಿಲ್ಲಿಸದೇ ಅಲ್ಲಿಂದ ಪರಾರಿಯಾಗಿದ್ದಾನೆ.
ಘಟನೆ ಕುರಿತು ಯಾವುದೇ ಪೊಲೀಸ್ ವರದಿ ದಾಖಲಾಗಿಲ್ಲ, ವಾಹನ ಮಾಲೀಕರ ವಿರುದ್ಧ ದೂರು ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಸ್ಥಾನದ ಪ್ರತ್ಯೇಕ ಘಟನೆಯಲ್ಲಿ, ಶುಕ್ರವಾರ ತಡರಾತ್ರಿ ಪಾಲಿ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು 25 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪೊಲೀಸರ ಪ್ರಕಾರ, ಸುಮರ್‌ಪುರ ಪ್ರದೇಶದಲ್ಲಿ ಟ್ರ್ಯಾಕ್ಟರ್ ಟ್ರಾಲಿ ಮತ್ತು ಟ್ರಕ್ ಪರಸ್ಪರ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.
ಪೊಲೀಸರು ಮತ್ತು ಹಲವಾರು ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿವೆ. ಅಧಿಕಾರಿಗಳ ಪ್ರಕಾರ, ಸಂತ್ರಸ್ತರು ಟ್ರಾಕ್ಟರ್ ಟ್ರಾಲಿಯಲ್ಲಿ ಜೈಸಲ್ಮೇರ್ ಜಿಲ್ಲೆಯ ರಾಮದೇವರ ದೇವಸ್ಥಾನಕ್ಕೆ ಭೇಟಿ ನೀಡಲು ಹೋಗುತ್ತಿದ್ದಾಗ ವೇಗವಾಗಿ ಬಂದ ಟ್ರಕ್ ಅವರಿಗೆ ಡಿಕ್ಕಿ ಹೊಡೆದಿದೆ.
Published On - 3:49 pm, Sat, 20 August 22