ಮಹಿಳೆಯೊಬ್ಬರ ಮೇಲೆ ಹತ್ತಕ್ಕೂ ಹೆಚ್ಚು ಬೀದಿ ನಾಯಿ(Stray Dog)ಗಳು ದಾಳಿ ನಡೆಸಿದ್ದು, ಅವರು ಭಯಗೊಂಡಿದ್ದರೂ ಕೂಡ ಚಪ್ಪಲಿ ಬೀಸುತ್ತಾ ದಾಳಿಯಿಂದ ತಪ್ಪಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಹೈದರಾಬಾದ್ನ ಮಣಿಕೊಂಡದ ಚಿತ್ರಪುರಿ ಹಿಲ್ಸ್ನಲ್ಲಿ ಬೆಳಗಿನ ಜಾವ ವಾಕಿಂಗ್ ಮಾಡುತ್ತಿದ್ದ ವೇಳೆ ಮಹಿಳೆಯೊಬ್ಬರ ಮೇಲೆ 10ಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ನಡೆಸಿದ್ದವು.
ಬೆಳಗ್ಗೆ 6 ಗಂಟೆ ಸುಮಾರಿಗೆ ಈ ದಾಳಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಿಳೆ ತನ್ನ ಕೈಗಳಿಂದ ಚಪ್ಪಲಿಯನ್ನು ಬಲವಾಗಿ ನಾಯಿಗಳತ್ತ ಬೀಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ಇದೊಂದು ಅಗ್ನಿ ಪರೀಕ್ಷೆಯಂತಿತ್ತು, ಒಂದು ಕ್ಷಣ ಮೈಮರೆತರೂ ನಾಯಿಗಳು ಕಚ್ಚುತ್ತಿದ್ದವು.
ಅವರು ಒಮ್ಮೆ ನೆಲದ ಮೇಲೆ ಬೀಳುತ್ತಾರೆ, ಬಳಿಕ ಮತ್ತೆ ನಾಯಿಗಳು ಕಚ್ಚದಂತೆ ತಡೆದು ಮತ್ತೆ ಎದ್ದುನಿಂತು ಚಪ್ಪಲಿ ಬೀಸಲು ಶುರು ಮಾಡುತ್ತಾರೆ. ಹೇಗೋ ಮಾಡಿ ನಾಯಿಗಳ ದಾಳಿಯನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ನಾಯಿಗಳು ಓಡಿಸಿಕೊಂಡು ಬರುವಾಗ ಮಧ್ಯೆ ಬೈಕೊಂದು ಬರುತ್ತದೆ ಆಕೆ ಬೈಕ್ ಸಮೀಪ ಹೋದಾಗ ನಾಯಿಗಳು ವಾಪಸ್ ಹೋಗುತ್ತವೆ.
ಮತ್ತಷ್ಟು ಓದಿ: ಕಲಬುರಗಿ: ಮಿಸ್ಬಾನಗರದಲ್ಲಿ ಐದು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ!
ಘಟನೆಯ ಕುರಿತು ಸ್ಥಳೀಯ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಈ ಪ್ರದೇಶದಲ್ಲಿ ಬೀದಿ ನಾಯಿಗಳ ಸಮಸ್ಯೆಯನ್ನು ಪರಿಹರಿಸಲು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಮುಂಜಾನೆ ಹೊರಗಡೆ ತೆರಳುವ ನಿವಾಸಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
సీసీటీవీ ఫుటేజ్
దారుణం.. మహిళపై 15 కుక్కల దాడి
మణికొండలోని చిత్రపురి హిల్స్ వద్ద ఓ మహిళపై దాదాపు 15 కుక్కలు దాడి చేశాయి.
ఈ ప్రాంతంలో చాలా మంది పిల్లలపై కుక్కలు దాడి చేశాయని, GHMC ఎలాంటి చర్యలు తీసుకోవట్లేదని నివాసితులు ట్విటర్ వేదికగా ఫిర్యాదులు చేస్తున్నారు. pic.twitter.com/O452O8SIpQ
— Telugu Scribe (@TeluguScribe) June 22, 2024
ತಮ್ಮ ಪತ್ನಿ ದಾಳಿಯಿಂದ ಬುದುಕುಳಿದಿರುವುದೇ ಸಮಾಧಾನ ಎಂದು ಅವರ ಪತಿ ಹೇಳಿದ್ದಾರೆ.ಕಾಲೋನಿ ಆವರಣದಲ್ಲಿ ಬೀದಿ ನಾಯಿಗಳಿಗೆ ಆಹಾರವನ್ನು ನೀಡುವುದನ್ನು ನಿಲ್ಲಿಸುವಂತೆ ನಿವಾಸಿಗಳನ್ನು ಒತ್ತಾಯಿಸಿದರು.
ಇಂತಹ ಘಟನೆಗಳು ಸಂಭವಿಸುವ ಅಪಾಯವನ್ನು ಕಡಿಮೆ ಮಾಡಲು ಗೇಟ್‌ನ ಹೊರಗೆ ಯಾವುದೇ ಆಹಾರ ನೀಡಬೇಕೆಂದು ಅವರು ಸಲಹೆ ನೀಡಿದರು. ದೊಡ್ಡವರಿಗೆ ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳುವುದು ಕಷ್ಟ ಇನ್ನು ಮಕ್ಕಳ ಮೇಲೆ ದಾಳಿ ನಡೆದರೆ ಹೇಗೆ ತಪ್ಪಿಸಿಕೊಂಡಾರು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ