ಬಾಲಕಿ ಮೇಲೆ ಕಣ್ಣು ಹಾಕಿದ ಕಿರಾತಕನಿಗೆ ಪಂಜಾಬಿ ಸರ್ದಾರ್‌ರು ಮಾಡಿದ್ದೇನು ಗೊತ್ತಾ?

|

Updated on: Jul 19, 2020 | 6:05 PM

ಚಂಡಿಗಢ್‌: ಕೆಟ್ಟ ವಿಚಾರ ಮನದಲ್ಲಿಟ್ಟುಕೊಂಡು ಬಾಲಕಿಯೊಬ್ಬಳನ್ನ ಅಪಹರಿಸಿದ್ದ ದುರಳನಿಗೆ ಗ್ರಾಮಸ್ಥರೇ ಇನ್ನೆಂದು ಮರೆಯದಂಥ ಶಿಕ್ಷೆ ಕೊಟ್ಟ ಘಟನೆ ಪಂಜಾಬ್‌ನಲ್ಲಿ ನಡೆದಿದೆ. ಪಂಜಬ್‌ನ ಲೂಧಿಯಾನಾ ಜಿಲ್ಲೆಯ ಬೊಂಕರ್‌ ಗುಜ್ರನ್‌ ಎಂಬ ಗ್ರಾಮದ ಕಿರಾತಕನೊಬ್ಬ ಯಾರೂ ಇಲ್ಲದ ಸಮಯ ಸಾಧಿಸಿ ಒಬ್ಪಂಟಿ ಬಾಲಕಿಯನ್ನು ದುರಾಲೋಚನೆಯೊಂದಿಗೆ ಅಪಹರಿಸಿದ್ದಾನೆ. ಇದು ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಜಮಾಯಿಸಿದ ಗ್ರಾಮಸ್ಥರು, ಆರೋಪಿಯನ್ನ ಸುತ್ತುವರಿದು ಹಿಡಿದಿದ್ದಾರೆ. ನಂತರ ಊರ ಮಧ್ಯದಲ್ಲಿ ಗಿಡಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಮನಬಂದಂತೆ ಥಳಿಸಿದ್ದಾರೆ. ಇಷ್ಟೇ ಅಲ್ಲ ನಂತರ ಆ ಪಾಪಿಗೆ ಚಪ್ಪಲಿ ಹಾರ […]

ಬಾಲಕಿ ಮೇಲೆ ಕಣ್ಣು ಹಾಕಿದ ಕಿರಾತಕನಿಗೆ ಪಂಜಾಬಿ ಸರ್ದಾರ್‌ರು ಮಾಡಿದ್ದೇನು ಗೊತ್ತಾ?
Follow us on

ಚಂಡಿಗಢ್‌: ಕೆಟ್ಟ ವಿಚಾರ ಮನದಲ್ಲಿಟ್ಟುಕೊಂಡು ಬಾಲಕಿಯೊಬ್ಬಳನ್ನ ಅಪಹರಿಸಿದ್ದ ದುರಳನಿಗೆ ಗ್ರಾಮಸ್ಥರೇ ಇನ್ನೆಂದು ಮರೆಯದಂಥ ಶಿಕ್ಷೆ ಕೊಟ್ಟ ಘಟನೆ ಪಂಜಾಬ್‌ನಲ್ಲಿ ನಡೆದಿದೆ.

ಪಂಜಬ್‌ನ ಲೂಧಿಯಾನಾ ಜಿಲ್ಲೆಯ ಬೊಂಕರ್‌ ಗುಜ್ರನ್‌ ಎಂಬ ಗ್ರಾಮದ ಕಿರಾತಕನೊಬ್ಬ ಯಾರೂ ಇಲ್ಲದ ಸಮಯ ಸಾಧಿಸಿ ಒಬ್ಪಂಟಿ ಬಾಲಕಿಯನ್ನು ದುರಾಲೋಚನೆಯೊಂದಿಗೆ ಅಪಹರಿಸಿದ್ದಾನೆ. ಇದು ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಜಮಾಯಿಸಿದ ಗ್ರಾಮಸ್ಥರು, ಆರೋಪಿಯನ್ನ ಸುತ್ತುವರಿದು ಹಿಡಿದಿದ್ದಾರೆ. ನಂತರ ಊರ ಮಧ್ಯದಲ್ಲಿ ಗಿಡಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಮನಬಂದಂತೆ ಥಳಿಸಿದ್ದಾರೆ.

ಇಷ್ಟೇ ಅಲ್ಲ ನಂತರ ಆ ಪಾಪಿಗೆ ಚಪ್ಪಲಿ ಹಾರ ಹಾಕಿ ಮೆರವಣೆಗೆ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ದೌಡಾಯಿಸಿದ ಲೂದಿಯಾನಾ ಪೊಲೀಸರು, ಆತನನ್ನು ಗ್ರಾಮಸ್ಥರಿಂದ ಬಿಡಿಸಿ ವಶಕ್ಕೆ ಪಡೆದಿದ್ದಾರೆ. ನಂತರ ಕಾನೂನು ಕೈಗೆತ್ತಿಕೊಂಡಿದ್ದಕ್ಕಾಗಿ ಗ್ರಾಮದ ನಾಲ್ವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.