ಕೈವ್​ನಲ್ಲಿ ನಡೆದ ರೆಸ್ಲಿಂಗ್​ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಭಾರತದ ವಿನೇಶ್ ಪೋಗಟ್

|

Updated on: Mar 01, 2021 | 7:03 AM

ಆಕೆ ಜೀವನ ದಂಗಲ್ ಸಿನಿಮಾದಷ್ಟೇ ರೋಚಕವಾಗಿದೆ. ಚಿಕ್ಕಂದಿನಲ್ಲಿ ಆಕೆ ಕುಸ್ತಿ ಅಕಾಡದಲ್ಲಿ ಇಳಿದಿದ್ದಿಕ್ಕೆ ಆಕೆ ಇಡೀ ಕುಟುಂಬ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿತ್ತು. ಆದ್ರೀಗ ಅದೇ ಹುಡುಗಿ ಯಾವ ಗ್ರಾಮಸ್ಥರು ಮೂಗು ಮುರಿದಿದ್ರೂ, ಅದೇ ಗ್ರಾಮಸ್ಥರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳೊ ಹಾಗೇ ಮಾಡಿದ್ದಾಳೆ.

ಕೈವ್​ನಲ್ಲಿ ನಡೆದ ರೆಸ್ಲಿಂಗ್​ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಭಾರತದ ವಿನೇಶ್ ಪೋಗಟ್
ವಿನೇಶ್ ಫೋಗಟ್
Follow us on

ಉಕ್ರೇನ್​ನ ರಾಜಧಾನಿ ಕೈವ್​ನಲ್ಲಿ ನಡೆದ ರೆಸ್ಲಿಂಗ್​ನಲ್ಲಿ ಭಾರತದ ವಿನೇಶ್ ಪೋಗಟ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾಳೆ. ಮಹಿಳೆಯರ 53 ಕೇಜಿ ವಿಭಾಗದಲ್ಲಿ ಸ್ಫರ್ಧಿಸಿದ್ದ ವಿನೇಶ್ ಪೋಗಟ್, ಚಾಂಪಿಯನ್ ಆಗ್ತಾಳೆ ಎನ್ನುವ ನಂಬಿಕೆ ಯಾರಿಗೂ ಇರಲಿಲ್ಲ. ಯಾಕಂದ್ರೆ ಫೈನಲ್​ನಲ್ಲಿ ವಿನೇಶ್​​ಗೆ ಎದುರಾಳಿಯಾಗಿದ್ದು, 2017ರಲ್ಲಿ ವಿಶ್ವಚಾಂಪಿಯನ್ ಆಗಿದ್ದ ಉಕ್ರೇನ್​ನ ವನೆಸಾ ಕಲಾಡ್ಜಿನಾ.

ಕುಸ್ತಿ ಪಂಡಿತರ ಲೆಕ್ಕಾಚಾರವನ್ನ ತಲೆಗೆ ಹಾಕಿಕೊಳ್ಳದ ವಿನೇಶ್, ಆರಂಭದಿಂದಲೇ ವನೆಸಾ ಮೇಲೆ ಪ್ರಾಬಲ್ಯ ಸಾಧಿಸಿದ್ಳು. ತನ್ನ ಅದ್ಭುತ ಪಟ್ಟುಗಳಿಂದ ಅರಂಭದಲ್ಲಿ 4-0 ಅಂತರದಲ್ಲಿ ಮುನ್ನಡೆ ಸಾಧಿಸಿದ್ಳು. ಆದ್ರೆ ಕಮ್​ಬ್ಯಾಕ್ ಮಾಡಿದ ಚಾಂಪಿಯನ್ ಆಟಗಾರ್ತಿ ವನೆಸಾ 4-4ರ ಅಂತರದಲ್ಲಿ ಸಮಭಲ ಮಾಡಿಕೊಂಡು ಪೋಗಟ್​ಗೆ ತಿರುಗೇಟು ನೀಡಿದ್ಳು.

ವನೆಸಾ ತಿರಗಿಬಿದ್ದ ನಂತರ ಜಾಣ್ಮೆಯ ಆಟವಾಡಿದ ಪೋಗಟ್, ವನೆಸಾ ಕೈ ಮೇಲಾಗಲು ಬಿಡಲಿಲ್ಲ. ಕೇವಲ ಎರಡೇ ಎರಡು ಪಾಯಿಂಟ್​ಗಳನ್ನ ಬಿಟ್ಟು ಕೊಟ್ಟ ವಿನೇಶ್ ಪೋಗಟ್, 10-8 ರ ಅಂತರದಲ್ಲಿ ಚಾಂಪಿಯನ್ ಆಟಗಾರ್ತಿಗೆ ಮಣ್ಣು ಮುಕ್ಕಿಸಿದ್ಳು. ಈ ಮೂಲಕ ವಿನೇಶ್, ಉಕ್ರೇನ್ ರೆಸ್ಲಿಂಗ್​ನಲ್ಲಿ ಚಿನ್ನದ ಪದಕ ಗೆದ್ದು ಸಂಭ್ರಮಿಸಿದ್ದಾಳೆ. ಟೋಕಿಯೋ ಒಲಪಿಂಕ್ಸ್​ಗೆ ತಯಾರಿ ನಡೆಸಿತ್ತಿರುವ ಪೋಗಟ್​ಗೆ ಉಕ್ರೇನ್​ನಲ್ಲಿ ಸಿಕ್ಕ ಗೆಲುವು ಪೋಗಟ್ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡಿದೆ.

ಹರಿಯಾಣಾದ ವಿನೇಶ್ ಪೋಗಟ್, ಭಾರತದ ಹೆಮ್ಮೆಯಾಗಿ ಗುರುತಿಸಿಕೊಂಡಿದ್ದಾಳೆ. ಆದ್ರೆ ಒಂದು ಕಾಲದಲ್ಲಿ ಪೋಗಟ್ ಕುಸ್ತಿ ಪಟು ಆಗ್ತೀನಿ ಎಂದಾಗ ಈಕೆಯ ಇಡೀ ಕುಟುಂಬ ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾಗಬೇಕಾಯ್ತು. ಕಡೆಗೆ ವಿನೇಶ್​ಗಾಗಿ ಗ್ರಾಮವನ್ನೇ ತೊರೆದ ತಂದೆ ಮತ್ತು ಚಿಕ್ಕಪ್ಪ ಕುಸ್ತಿ ತರಬೇತಿ ನೀಡಿದ್ರು. ಆದ್ರೀಗ ವಿನೇಶ್ ಯಾವ ಊರಿನ ಗ್ರಾಮಸ್ಥರು ಕಿಡಿ ಕಾರಿದ್ರೋ, ಅದೇ ಊರಿನ ಗ್ರಾಮಸ್ಥರು ನಮ್ಮೂರ ಹೆಮ್ಮೆಯ ಹುಡುಗಿ ಅನ್ನೋ ಹಾಗೇ ಮಾಡಿ ತೋರಿಸಿದ್ದಾಳೆ.

ಇದನ್ನೂ ಓದಿ: ಧಿಂಗ್ ಎಕ್ಸ್​ಪ್ರೆಸ್ ಹಿಮಾ ದಾಸ್​ಗೆ ಒಲಿಯಿತು ಪೊಲೀಸ್ ಉಪ ಅಧೀಕ್ಷಕಿ ಪಟ್ಟ: ತಾಯಿಯ ಕನಸು ನನಸಾಯಿತು ಎಂದ ಹಿಮಾ