ಧಿಂಗ್ ಎಕ್ಸ್​ಪ್ರೆಸ್ ಹಿಮಾ ದಾಸ್​ಗೆ ಒಲಿಯಿತು ಪೊಲೀಸ್ ಉಪ ಅಧೀಕ್ಷಕಿ ಪಟ್ಟ: ತಾಯಿಯ ಕನಸು ನನಸಾಯಿತು ಎಂದ ಹಿಮಾ

ಧಿಂಗ್ ಎಕ್ಸ್​ಪ್ರೆಸ್ ಹಿಮಾ ದಾಸ್​ಗೆ ಒಲಿಯಿತು ಪೊಲೀಸ್ ಉಪ ಅಧೀಕ್ಷಕಿ ಪಟ್ಟ: ತಾಯಿಯ ಕನಸು ನನಸಾಯಿತು ಎಂದ ಹಿಮಾ
ಹಿಮಾ ದಾಸ್

ಸ್ಟಾರ್ ಅಥ್ಲೀಟ್ ಹಿಮಾ ದಾಸ್ ಅವರನ್ನು ಶುಕ್ರವಾರ ಅಸ್ಸಾಂ ಸರ್ಕಾರ ಪೊಲೀಸ್ ಉಪ ಅಧೀಕ್ಷಕಿಯನ್ನಾಗಿ ನೇಮಕ ಮಾಡಿದೆ. ಪೊಲೀಸ್ ಉಪ ಅಧೀಕ್ಷಕಿಯಾಗಿ ನೇಮಕಗೊಂಡ ಹಿಮಾ ದಾಸ್ ಇಂದು ನನ್ನ ಬಾಲ್ಯದ ಕನಸು ನನಸಾಗಿದೆ ಎಂದು ಬಣ್ಣಿಸಿದರು.

pruthvi Shankar

| Edited By: Ghanashyam D M | ಡಿ.ಎಂ.ಘನಶ್ಯಾಮ

Mar 01, 2021 | 9:39 PM

ಸ್ಟಾರ್ ಅಥ್ಲೀಟ್ ಹಿಮಾ ದಾಸ್ ಅವರನ್ನು ಅಸ್ಸಾಂ ಸರ್ಕಾರವು ಇತ್ತೀಚೆಗೆ ಪೊಲೀಸ್ ಉಪ ಅಧೀಕ್ಷಕಿಯನ್ನಾಗಿ ನೇಮಕ ಮಾಡಿದೆ. ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ​ ಸೊನೊವಾಲ್​ ಹಾಗೂ ಕೇಂದ್ರದಲ್ಲಿ ಕ್ರೀಡಾ ಸಚಿವರಾಗಿರುವ ಕಿರಣ್ ರಿಜಿಜು ಅವರು ನೇಮಕಾತಿ ಪತ್ರವನ್ನು ಹಿಮಾ ಅವರಿಗೆ ಹಸ್ತಾಂತರಿಸಿದರು. ಗುವಾಹಟಿಯಲ್ಲಿ ನಡೆದ ಸಮಾರಂಭದಲ್ಲಿ ಪೊಲೀಸ್ ಮಹಾನಿರ್ದೇಶಕರು ಮತ್ತು ರಾಜ್ಯ ಸರ್ಕಾರ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು. ಪೊಲೀಸ್ ಉಪ ಅಧೀಕ್ಷಕಿಯಾಗಿ ನೇಮಕಗೊಂಡ ಹಿಮಾ ದಾಸ್ ಇದರಿಂದ ನನ್ನ ಬಾಲ್ಯದ ಕನಸು ನನಸಾಗಿದೆ ಎಂದು ಬಣ್ಣಿಸಿದ್ದಾರೆ.

ಅಧಿಕಾರ ಸ್ವೀಕರಿಸಿ ಮಾತನಾಡಿದ ಹಿಮಾ, ಬಾಲ್ಯದಿಂದಲೂ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಕಾಣುತ್ತಿದ್ದೆ. ಶಾಲಾ ದಿನಗಳಿಂದಲೂ ನಾನು ಪೊಲೀಸ್ ಅಧಿಕಾರಿಯಾಗಲು ಬಯಸಿದ್ದೆ ಮತ್ತು ಅದು ನನ್ನ ತಾಯಿಯ ಕನಸಾಗಿತ್ತು. ದುರ್ಗಾ ಪೂಜೆಯ ಸಮಯದಲ್ಲಿ ನನ್ನ ತಾಯಿ ನನಗೆ ಆಟಿಕೆಯ ಗನ್ ನೀಡುತ್ತಿದ್ದರು. ನಾನು ಅಸ್ಸಾಂ ಪೊಲೀಸ್​ ವಿಭಾಗದಲ್ಲಿ ಸೇವೆ ಸಲ್ಲಿಸಬೇಕು ಮತ್ತು ಒಳ್ಳೆಯ ವ್ಯಕ್ತಿಯಾಗಬೇಕು ಎಂಬುದು ನನ್ನ ತಾಯಿಯ ಕನಸಾಗಿತ್ತು ಎಂದು ಹಿಮಾ ಹೇಳಿಕೊಂಡರು.

ಏಷ್ಯನ್ ಗೇಮ್ಸ್​ನಲ್ಲಿ ಬೆಳ್ಳಿ ಪದಕ ವಿಜೇತೆ​ ಹಿಮಾ ಅವರು ಪೊಲೀಸ್ ಕರ್ತವ್ಯದ ಜೊತೆಗೆ ಕ್ರೀಡೆಯಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರಿಸುವುದಾಗಿ ಹೇಳಿದರು. ಕ್ರೀಡೆಯಿಂದಾಗಿ ನನಗೆ ಎಲ್ಲವೂ ಸಿಕ್ಕಿದೆ. ನಾನು ರಾಜ್ಯದ ಕ್ರೀಡೆಗಳ ಸುಧಾರಣೆಗಾಗಿ ಕೆಲಸ ಮಾಡುತ್ತೇನೆ ಮತ್ತು ಅಸ್ಸಾಂ ರಾಜ್ಯವನ್ನು ಹರಿಯಾಣದಂತೆ ಕ್ರೀಡೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ರಾಜ್ಯವನ್ನಾಗಿ ಮಾಡಲು ಪ್ರಯತ್ನಿಸುತ್ತೇನೆ ಎಂದರು.

ಇದೇ ಸಮಯದಲ್ಲಿ ಮಾತಾನಾಡಿದ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರು ಹಿಮಾ ಅವರನ್ನು ಡಿಎಸ್ಪಿಯಾಗಿ ನೇಮಕ ಮಾಡುವುದರಿಂದ ಯುವಜನರು ಕ್ರೀಡೆಗಳತ್ತ ಬರಲು ಉತ್ತೇಜನ ನೀಡಿದಂತ್ತಾಗುತ್ತದೆ ಎಂದರು. ಇದು ಅಸ್ಸಾಂಗೆ ಹೆಮ್ಮೆಯ ದಿನ. ಹಿಮಾ ದಾಸ್ ಉಪ ಎಸ್‌ಪಿ ಆಗಿ ನೇಮಕಗೊಂಡಿರುವುದು ನನಗೆ ತುಂಬಾ ಸಂತೋಷವಾಗಿದೆ. ಅವರ ಸಾಧನೆಗಳನ್ನು ಕ್ರೀಡಾ ನೀತಿಯಡಿಯಲ್ಲಿ ಗೌರವಿಸಲಾಗಿದೆ ಎಂದರು.

ಹಿಮಾ ದಾಸ್ ಧಿಂಗ್ ಎಕ್ಸ್ ಪ್ರೆಸ್.. ಟೋಕಿಯೊ ಒಲಿಂಪಿಕ್ಸ್​ನತ್ತ ದೃಢ ಹೆಜ್ಜೆ  ಹಿಮಾ ಅಸ್ಸಾಂನ ಧಿಂಗ್ ಪಟ್ಟಣದಿಂದ ಬಂದವರು. ಈ ಕಾರಣದಿಂದಾಗಿ ಅವರನ್ನು ಧಿಂಗ್ ಎಕ್ಸ್‌ಪ್ರೆಸ್ ಎಂದು ಕರೆಯುತ್ತಾರೆ. ಅಂದಹಾಗೆ, ಅವರನ್ನು ಫೆಬ್ರವರಿ 11 ರಂದು ಉಪ ಎಸ್‌ಪಿ ಆಗಿ ನೇಮಿಸಲಾಯಿತು. 2018 ರಲ್ಲಿ ನಡೆದ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಹಿಮಾ 400 ಮೀಟರ್ ಓಟದಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದರು.

ನಂತರ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದರು. ಈ ಪಂದ್ಯಗಳಲ್ಲಿ ಮಹಿಳೆಯರ 400 ಮೀಟರ್ ರಿಲೇ ಮತ್ತು 400 ಮೀಟರ್ ರಿಲೇ ಮಿಶ್ರ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ತಂಡದ ಭಾಗವೂ ಆಗಿದ್ದರು. ಅವರು ಪ್ರಸ್ತುತ ಎನ್ಐಎಸ್ ಪಟಿಯಾಲದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಅವರು ಶ್ರಮಿಸುತ್ತಿದ್ದಾರೆ.

Follow us on

Most Read Stories

Click on your DTH Provider to Add TV9 Kannada