
ನವದೆಹಲಿ, ಡಿಸೆಂಬರ್ 23: ಉತ್ತರ ಪ್ರದೇಶದಲ್ಲೊಂದು ಅತ್ಯಂತ ಅಪರೂಪದ ಘಟನೆ ನಡೆದಿದೆ. ಮಹಿಳೆಯೊಬ್ಬರು ನಾರ್ಮಲ್ ಡೆಲಿವರಿ ಮೂಲಕ 4 ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಾರೆ. ಆಕೆ ಈಗಾಗಲೇ 3 ಹೆಣ್ಣುಮಕ್ಕಳ ತಾಯಿಯಾಗಿದ್ದು, ಒಟ್ಟಾರೆ 7 ಮಕ್ಕಳ ತಾಯಿಯಾಗಿದ್ದಾರೆ. ಇವರೆಲ್ಲರೂ ನಾರ್ಮಲ್ ಡೆಲಿವರಿ ಮೂಲಕವೇ ಜನಿಸಿದ್ದು ಎಂಬುದು ವಿಶೇಷ.
ಉತ್ತರ ಪ್ರದೇಶದ ಕನ್ನೌಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 30 ವರ್ಷದ ಮಹಿಳೆ ವೈಷ್ಣವಿ ನರ್ಸಿಂಗ್ ಹೋಂನಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಅಪರೂಪದ ಘಟನೆ ಆಸ್ಪತ್ರೆ ಸಿಬ್ಬಂದಿಯನ್ನು ಅಚ್ಚರಿಗೊಳಿಸಿದೆ. ಡಿಸೆಂಬರ್ 21ರಂದು ಅನಿತಾ ಎಂಬ ಮಹಿಳೆ ನಾರ್ಮಲ್ ಡೆಲಿವರಿ ಮೂಲಕ 4 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅನಿತಾ ಜನ್ಮ ನೀಡಿದ 4 ಹೆಣ್ಣು ಮಕ್ಕಳ ಜನನಗಳ ನಡುವೆ ಎರಡರಿಂದ ಮೂರು ನಿಮಿಷಗಳ ಅಂತರವಿತ್ತು.
ಇದನ್ನೂ ಓದಿ: ಮೈ ಮೇಲೆ ಕಕ್ಕ ಮಾಡಿದ್ದಕ್ಕೆ ತಾಯಿಯ ಪ್ರಿಯಕರನಿಂದ 3 ವರ್ಷದ ಮಗುವಿನ ಕೊಲೆ!
ತಥಿಯಾ ಪಟ್ಟಣದ ನಿವಾಸಿ 30 ವರ್ಷದ ಅನಿತಾ ಅವರನ್ನು ಡಿಸೆಂಬರ್ 20ರಂದು ಅವರ ಪತಿ ಅನುಜ್ ಸಿಂಗ್ ಹೆರಿಗೆಗಾಗಿ ಬರ್ಧೈಯಾ ರಸ್ತೆಯಲ್ಲಿರುವ ವೈಷ್ಣವಿ ನರ್ಸಿಂಗ್ ಹೋಂಗೆ ದಾಖಲಿಸಿದ್ದರು. ಇಬ್ಬರು ಹೆಣ್ಣು ಮಕ್ಕಳ ತೂಕ ಸುಮಾರು ಒಂದು ಕೆಜಿ ಆಗಿದ್ದರೆ, ಉಳಿದ ಶಿಶುಗಳು ಒಂದೂವರೆ ಕೆಜಿಗಿಂತಲೂ ಹೆಚ್ಚು ತೂಕವಿತ್ತು.
ಇದೇ ರೀತಿ ಕೆಲವು ದಿನಗಳ ಹಿಂದೆ, ಮಹಾರಾಷ್ಟ್ರದ ಸತಾರಾದ ಜಿಲ್ಲಾ ಆಸ್ಪತ್ರೆಯಲ್ಲಿ 30 ವರ್ಷದ ಮಹಿಳೆ 4 ಮಕ್ಕಳಿಗೆ ಜನ್ಮ ನೀಡಿದ್ದರು. ಅವರಿಗೂ ಮೂವರು ಮಕ್ಕಳಿದ್ದರು. ಈ ಮೂಲಕ ಅವರು ಕೂಡ 7 ಮಕ್ಕಳ ತಾಯಿಯಾಗಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ