Viral News: ಮದುವೆ ಮೆರವಣಿಗೆಯ ವಾದ್ಯದಿಂದ ಹೃದಯಾಘಾತವಾಗಿ 63 ಕೋಳಿಗಳ ಸಾವು

| Updated By: ಸುಷ್ಮಾ ಚಕ್ರೆ

Updated on: Nov 24, 2021 | 4:24 PM

ಭಾನುವಾರ ರಾತ್ರಿ ಒಡಿಶಾದಲ್ಲಿ ಮದುವೆಯ ಮೆರವಣಿಗೆ ಕೋಳಿ ಫಾರ್ಮ್ ಅನ್ನು ಹಾದುಹೋದಾಗ ವಾದ್ಯದ ಶಬ್ದದಿಂದ 63 ಕೋಳಿಗಳು ಮೃತಪಟ್ಟಿವೆ

Viral News: ಮದುವೆ ಮೆರವಣಿಗೆಯ ವಾದ್ಯದಿಂದ ಹೃದಯಾಘಾತವಾಗಿ 63 ಕೋಳಿಗಳ ಸಾವು
ಒಡಿಶಾದ ಮದುವೆ ಮೆರವಣಿಗೆಯಲ್ಲಿ ಸಂಗೀತ ಕಾರ್ಯಕ್ರಮ
Follow us on

ಭುವನೇಶ್ವರ: ಭಾರತದಲ್ಲಿ ಮದುವೆಯೆಂದರೆ ಅಲ್ಲಿ ಸಂಭ್ರಮಕ್ಕೇನೂ ಕೊರತೆಯಿಲ್ಲ. ಆದರೆ, ಸಂಗೀತ, ಪಟಾಕಿ, ನೃತ್ಯ, ಬ್ಯಾಂಡ್‌ನೊಂದಿಗೆ ನಡೆದ ಸಾಂಪ್ರದಾಯಿಕ ಭಾರತೀಯ ವಿವಾಹದ ಮೆರವಣಿಗೆಯಿಂದಾಗಿ 63 ಕೋಳಿಗಳು ಸಾವನ್ನಪ್ಪಿವೆ. ಭಾನುವಾರ ರಾತ್ರಿ ಒಡಿಶಾದಲ್ಲಿ ಮದುವೆಯ ಮೆರವಣಿಗೆ ಕೋಳಿ ಫಾರ್ಮ್ ಅನ್ನು ಹಾದುಹೋದಾಗ ಆ ಗಡಚಿಕ್ಕುವ ಶಬ್ದದಿಂದ 63 ಕೋಳಿಗಳು ಮೃತಪಟ್ಟಿವೆ ಎಂದು ಕೋಳಿ ಫಾರಂ ಮಾಲೀಕ ರಂಜಿತ್ ಕುಮಾರ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.

ಮದುವೆಯ ಮೆರವಣಿಗೆ ಸಂಗೀತವು ತುಂಬಾ ಗದ್ದಲದಿಂದ ಕೂಡಿತ್ತು. ಅದು ಕೋಳಿಗಳನ್ನು ಭಯಭೀತಗೊಳಿಸಿದ್ದರಿಂದ ಧ್ವನಿಯನ್ನು ಕಡಿಮೆ ಮಾಡಲು ನಾನು ಬ್ಯಾಂಡ್ ನಿರ್ವಾಹಕರ ಬಳಿ ಮನವಿ ಮಾಡಿದೆ. ಆದರೆ ಅವರು ಕೇಳಲಿಲ್ಲ. ವರನ ಕಡೆಯ ಸಂಬಂಧಿಕರು ನನ್ನ ಜೊತೆ ಜಗಳವಾಡಿ ಮುಂದೆ ಹೋದರು ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.

ಮದುವೆಯ ಮೆರವಣಿಗೆ ಗದ್ದಲದಿಂದ ಹೆದರಿದ ಕೋಳಿಗಳು ಹೃದಯಾಘಾತದಿಂದ ಸಾವನ್ನಪ್ಪಿವೆ ಎಂದು ಪಶುವೈದ್ಯರು ತಿಳಿಸಿದ್ದಾರೆ. ಮದುವೆಯನ್ನು ಆಯೋಜಿಸಿದ್ದವರು ಇದಕ್ಕೆ ಪರಿಹಾರವನ್ನು ನೀಡಲು ನಿರಾಕರಿಸಿದ್ದರಿಂದ ಪೊಲೀಸರಿಗೆ ದೂರು ನೀಡಲಾಯಿತು.

ಪ್ರಾಣಿಗಳ ವರ್ತನೆ ಕುರಿತು ಪುಸ್ತಕವನ್ನು ಬರೆದಿರುವ ಪ್ರಾಣಿಶಾಸ್ತ್ರದ ಪ್ರಾಧ್ಯಾಪಕ ಸೂರ್ಯಕಾಂತ ಮಿಶ್ರಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ದೊಡ್ಡ ಶಬ್ದವು ಪಕ್ಷಿಗಳಲ್ಲಿ ಹೃದಯಾಘಾತ ಉಂಟಾಗುತ್ತದೆ. ಕೋಳಿಗಳು ಸಿರ್ಕಾಡಿಯನ್ ಲಯದಿಂದ ನಿಯಂತ್ರಿಸಲ್ಪಡುತ್ತವೆ. ಜೋರಾಗಿ ಸಂಗೀತದ ಕಾರಣದಿಂದಾಗಿ ಒತ್ತಡದಿಂದ ಕೋಳಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ.

ತಮ್ಮ ವಿರುದ್ಧ ಕೇಸ್ ದಾಖಲಿಸಿದ್ದು ಗೊತ್ತಾದ ನಂತರ ಮದುವೆಯ ಆಯೋಜಕರು ಬಂದು ಕೋಳಿ ಫಾರಂ ಮಾಲೀಕರ ಜೊತೆ ಸಂಧಾನ ಮಾಡಿಕೊಂಡಿದ್ದಾರೆ. ಇದರಿಂದ ಕೋಳಿ ಫಾರಂ ಮಾಲೀಕ ಕೇಸನ್ನು ವಾಪಾಸ್ ಪಡೆದಿದ್ದಾರೆ. ಹೀಗಾಗಿ, ಕೋಳಿಗಳ ಸಾವಿಗೆ ಕಾರಣರಾದವರ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.

ಇದನ್ನೂ ಓದಿ: Viral Video: ಹೂವಿನ ಟೋಪಿ ಧರಿಸಿ ನಿದ್ರಿಸುತ್ತಿರುವ ಮುದ್ದಾದ ಬಾತುಕೋಳಿ; ಕ್ಯೂಟ್ ವಿಡಿಯೊ ನೋಡಿ

ಅಚ್ಚರಿ ಘಟನೆ! ಪುನೀತ್ ರಾಜ್​ಕುಮಾರ್ ಸಮಾಧಿಗೆ ಪ್ರದಕ್ಷಿಣೆ ಹಾಕಿದ ಕೋಳಿ