Viral News: ಭಕ್ತಿಯ ಪರಾಕಾಷ್ಠೆಯಿಂದ ತನ್ನ ನಾಲಿಗೆಯನ್ನು ದೇವಿಗೆ ಅರ್ಪಿಸಿದ ಭಕ್ತ

ಭಕ್ತಿಯ ಪರಾಕಾಷ್ಠೆಯಿಂದ ತನ್ನ ನಾಲಿಗೆಯನ್ನು ದೇವಿಗೆ ಅರ್ಪಣೆ ಮಾಡಿದ ಭಕ್ತ, ಇದೀಗ ಈ ಸುದ್ದಿ ಎಲ್ಲ ಕಡೆ ವೈರಲ್ ಆಗಿದೆ, ಕೌಶಂಬಿ ನಿವಾಸಿ ಸಂಪತ್ (38) ಎಂಬ ಭಕ್ತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

Viral News: ಭಕ್ತಿಯ ಪರಾಕಾಷ್ಠೆಯಿಂದ ತನ್ನ ನಾಲಿಗೆಯನ್ನು ದೇವಿಗೆ ಅರ್ಪಿಸಿದ ಭಕ್ತ
ಸಾಂದರ್ಭಿಕ ಚಿತ್ರ
Image Credit source: NDTV
Edited By:

Updated on: Sep 10, 2022 | 6:31 PM

ಕೌಶಂಬಿ : ಉತ್ತರಪ್ರದೇಶದ ಮಾ ಶೀಟ್ಲಾ ದೇವಸ್ಥಾನದಲ್ಲಿ ಭಕ್ತರೊಬ್ಬರು ತಮ್ಮ ನಾಲಿಗೆಯನ್ನು ಕತ್ತರಿಸಿ ದೇವರಿಗೆ ಅರ್ಪಿಸಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಕೌಶಂಬಿ ನಿವಾಸಿ ಸಂಪತ್ (38) ಎಂಬ ಭಕ್ತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಸಂಪತ್ ಮತ್ತು ಅವರ ಪತ್ನಿ ಬನ್ನೋ ದೇವಿ ದೇವಸ್ಥಾನಕ್ಕೆ ಬಂದು, ಅವರು ಗಂಗಾ ನದಿಯಲ್ಲಿ ಸ್ನಾನ ಮಾಡಿದ ನಂತರ ಪೂಜೆ ಸಲ್ಲಿಸಿದರು. ಪ್ರದಕ್ಷಿಣೆ ಮುಗಿಸಿದ ನಂತರ, ಆ ವ್ಯಕ್ತಿ ತನ್ನ ನಾಲಿಗೆಯನ್ನು ಬ್ಲೇಡ್‌ನಿಂದ ಕತ್ತರಿಸಿ ದೇವಾಲಯದ ಬಾಗಿಲಿನ ದ್ವಾರದ ಮುಂದೆ ಇಟ್ಟಿದ್ದಾನೆ ಎಂದು ಕರ್ಹಾ ಧಾಮ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಅಭಿಲಾಷ್ ತಿವಾರಿ ಹೇಳಿದ್ದಾರೆ.

ಶುಕ್ರವಾರ ರಾತ್ರಿ ದೇವಸ್ಥಾನಕ್ಕೆ ಭೇಟಿ ನೀಡುವ ಇಚ್ಛೆಯನ್ನು ಅವರ ಪತಿ ವ್ಯಕ್ತಪಡಿಸಿದ್ದರು ಎಂದು ಆತನ ಪತ್ನಿ ಹೇಳಿದ್ದಾರೆ. ಭಕ್ತಿಯ ಪರಾಕಾಷ್ಠೆಯಿಂದ ತನ್ನ ನಾಳಿಗೆಯನ್ನು ದೇವಿಗೆ ಅರ್ಪಣೆ ಮಾಡಿದ್ದಾರೆ.

Published On - 5:18 pm, Sat, 10 September 22