Viral Video: ಸರ್ಕಾರಿ ಶಾಲೆಯಲ್ಲಿ ಮಕ್ಕಳಿಂದ ಮರ ಕಟ್ ಮಾಡಿಸಿ, ಮಣ್ಣು ಅಗೆಸಿ ಕೂಲಿ ಕೆಲಸ; ವಿಡಿಯೋ ವೈರಲ್

ಬಿಹಾರದ ಜೆಹಾನಾಬಾದ್‌ನ ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳಿಂದ ಮಣ್ಣು ಅಗೆಯುವುದು, ಇಟ್ಟಿಗೆಗಳನ್ನು ಕೆತ್ತುವುದು ಮತ್ತು ಮರಗಳನ್ನು ಕಡಿಯುವುದು ಮುಂತಾದ ಕೂಲಿ ಕೆಲಸಗಳನ್ನು ಮಾಡಿಸಿದ ಘಟನೆ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.

Viral Video: ಸರ್ಕಾರಿ ಶಾಲೆಯಲ್ಲಿ ಮಕ್ಕಳಿಂದ ಮರ ಕಟ್ ಮಾಡಿಸಿ, ಮಣ್ಣು ಅಗೆಸಿ ಕೂಲಿ ಕೆಲಸ; ವಿಡಿಯೋ ವೈರಲ್
ಸರ್ಕಾರಿ ಶಾಲೆಯಲ್ಲಿ ಮಕ್ಕಳಿಂದ ಮರ ಕಟ್ ಮಾಡಿಸಿ, ಮಣ್ಣು ಅಗೆಸಿ ಕೂಲಿ ಕೆಲಸ
Image Credit source: India.com
Edited By:

Updated on: Aug 02, 2022 | 11:42 AM

ಜೆಹಾನಾಬಾದ್: ಬಿಹಾರದ (Bihar) ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿಗಳು ಶಾಲೆಯಲ್ಲಿ ಪಾಠ ಕೇಳುವ ಬದಲು ಮರದ ಕೆಲಸ ಮಾಡುವುದು, ಕಲ್ಲುಗಳನ್ನು ಕಟ್ ಮಾಡುವ ವಿಡಿಯೋ ವೈರಲ್ (Video Viral) ಆಗಿದೆ. ಈ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಬಾಲಕಾರ್ಮಿಕ ವಿರೋಧಿ ಕಾನೂನಿನಡಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ.

ಬಿಹಾರದ ಜೆಹಾನಾಬಾದ್‌ನ ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳಿಂದ ಮಣ್ಣು ಅಗೆಯುವುದು, ಇಟ್ಟಿಗೆಗಳನ್ನು ಕೆತ್ತುವುದು ಮತ್ತು ಮರಗಳನ್ನು ಕಡಿಯುವುದು ಮುಂತಾದ ಕೂಲಿ ಕೆಲಸಗಳನ್ನು ಮಾಡಿಸಿದ ಘಟನೆ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಬಾಲಕಾರ್ಮಿಕ ವಿರೋಧಿ ಕಾನೂನನ್ನು ಉಲ್ಲಂಘಿಸಿ, ಮಕ್ಕಳು ಮರ ಕಡಿಯುವುದು, ಕಲ್ಲುಗಳನ್ನು ಕತ್ತರಿಸುವುದು ಮತ್ತು ನೆಲ ಅಗೆಯುವುದನ್ನು ವಿಡಿಯೋ ತುಣುಕಿನಲ್ಲಿ ಕಾಣಬಹುದು.

ಇದನ್ನೂ ಓದಿ: Viral Video: ಜಲಪಾತದಲ್ಲಿ ಗೋಲ್ಡನ್ ರಿಟ್ರೈವರ್ ನಾಯಿಗಳ ಜಾರುಬಂಡಿ ಆಟ; ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ, ಜೆಹಾನಾಬಾದ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ರಿಚಿ ಪಾಂಡೆ ಈಗಾಗಲೇ ಈ ವಿಷಯ ತಮಗೆ ತಿಳಿದಿತ್ತು ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಸಂಬಂಧಪಟ್ಟ ಶಾಲೆಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ನಾವು ಈ ವೀಡಿಯೊವನ್ನು ಗಮನಿಸಿದ್ದೇವೆ. ಶುಕ್ರವಾರ ಕಾಕೋ ಬ್ಲಾಕ್‌ನ ಇಸ್ಲಾಂಪುರ ಪಂಚಾಯತ್‌ನಲ್ಲಿರುವ ಈ ಶಾಲೆಗೆ ಭೇಟಿ ನೀಡಿದ್ದೇವೆ. ಶಾಲೆಯಲ್ಲಿ ನಿರ್ವಹಣೆ ತೀರಾ ಕಳಪೆಯಾಗಿದೆ ಮತ್ತು ಮಕ್ಕಳ ಹಾಜರಾತಿ ತುಂಬಾ ಕಡಿಮೆಯಿದೆ ಎಂದು ಅವರು ಹೇಳಿದ್ದಾರೆ.